ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾಫರ್ ಷರೀಫ್ ಗೆ ಅಂತಿಮ ನಮನ ಸಲ್ಲಿಸಿದ ಮಲ್ಲಿಕಾರ್ಜುನ ಖರ್ಗೆ

|
Google Oneindia Kannada News

ಬೆಂಗಳೂರು, ನವೆಂಬರ್ 26: ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಅವರ ಅಂತಿಮ ದರ್ಶನ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ 50 ವರ್ಷದಿಂದ ನಾನು ಅವರನ್ನ ಸಾಕಷ್ಟು ಬಲ್ಲೆ. ಕಾಂಗ್ರೆಸ್ ನ ಹಿರಿಯ ನಾಯಕರು ಅವರು. ಸೋನಿಯಾ ಗಾಂಧಿಯವರಿಗೆ, ಇಂದಿರಾ ಗಾಂಧಿ, ನಿಜಲಿಂಗಪ್ಪ ಅವರಿಗೆ ಬಹಳ ಆತ್ಮೀಯರಾಗಿದ್ದರು.ಅವರ ಸಾವಿನಿಂದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎಂದರು.

ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ನಿಧನ ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ನಿಧನ

ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ನನ್ನನ್ನು ಅವರು ಆಹ್ವಾನಿಸಿದ್ದರು. ಆದರೆ ಅದಕ್ಕಿಂದ ಮುಂಚೆ ಅವರನ್ನು ಈ ರೀತಿ‌ ನೋಡುತ್ತೇನೆ ಅಂತ ಅಂದುಕೊಂಡಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

Senior Congress man Kharge paid last respect to Jaffer Sharief

ಕೆಪಿಸಿಸಿ ಕಚೇರಿಯಲ್ಲಿ ಅಂತಿಮ ದರ್ಶನ: ಜಾಫರ್ ಶರೀಫ್ ಅಂತಿಮ ದರ್ಶನಕ್ಕೆ ಕೆಪಿಸಿಸಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.ಮಧ್ಯಾಹ್ನ ಕೆಪಿಸಿಸಿಯಲ್ಲಿ ಜಾಫರ್ ಶರೀಫ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಧ್ಯಾಹ್ನ 12.15 ಕ್ಕೆ ಕೆಪಿಸಿಸಿ ಕಚೇರಿಗೆ ಜಾಫರ್ ಶರೀಫ್ ಪಾರ್ಥಿವ ಶರೀರ ರವಾನೆಯಾಗಿದೆ.

ಮಾಜಿ ಸಚಿವ ಜಾಫರ್ ಷರೀಫ್ ಮೃತದೇಹ ಕೆಪಿಸಿಸಿ ಕಚೇರಿಗೆ ಮಾಜಿ ಸಚಿವ ಜಾಫರ್ ಷರೀಫ್ ಮೃತದೇಹ ಕೆಪಿಸಿಸಿ ಕಚೇರಿಗೆ

ಕೆಪಿಸಿಸಿಯಲ್ಲಿ ಸುಮಾರು ಅರ್ಧ ತಾಸು ಅಂತಿಮ ದರ್ಶನ ನಡೆಯಲಿದೆ. ನಂತರ ಮಿಲ್ಲರ್ಸ್ ರಸ್ತೆಯಲ್ಲಿನ ಜುಮ್ಮಾ ಮಸ್ಜಿದ್ ಗೆ ಜಾಫರ್ ಶರೀಫ್ ಪಾರ್ಥಿವ ಶರೀರ ರವಾನೆಯಾಗಲಿದ್ದು, ಅಂತ್ಯ ಸಂಸ್ಕಾರ ನೆರವೇರಲಿದೆ.

English summary
Senior Congress leader Mallikarjun Kharge has been paid last respect to Jaffer Sharief on Monday at KPCC office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X