ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿರಿಯ ನಾಗರಿಕರು, ಗರ್ಭಿಣಿಯರಿಗೆ 5000 ಮಾಸಾಶನ: ಸಿಎಂ ಭರವಸೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 01: ಹಿರಿಯ ನಾಗರೀಕರು ಹಾಗೂ ಗರ್ಭಿಣಿಯರಿಗೆ ಸರ್ಕಾರದ ವತಿಯಿಂದ ತಿಂಗಳಿಗೆ 5000 ಮಾಸಾಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವ ಹಿರಿಯ ನಾಗರೀಕರ ದಿನ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯ ನಾಗರೀಕರಿಗೆ 5000 ನೀಡುವುದು ನನ್ನ ಕನಸಾಗಿತ್ತು. ಆದರೆ ಸರ್ಕಾರದ ಮುಂದೆ ಹಲವಾರು ಸವಾಲುಗಳಿವೆ ಎಂದು ಅವರು ಹೇಳಿದರು.

Senior Citizens and pregnant women will get 5000 per month: HDK

ರಾಹು, ಕೇತು, ಶನಿ... ಸಿದ್ದು ಹೇಳಿಕೆಗೆ ಮೌನವೇ ಉತ್ತರ ಎಂದ ಸಿಎಂ!ರಾಹು, ಕೇತು, ಶನಿ... ಸಿದ್ದು ಹೇಳಿಕೆಗೆ ಮೌನವೇ ಉತ್ತರ ಎಂದ ಸಿಎಂ!

ನಾವು ಮೈತ್ರಿ ಸರ್ಕಾರದಲ್ಲಿದ್ದೇವೆ, ಸರ್ಕಾರದ ಮುಂದೆ ಹಲವಾರು ಸವಾಲುಗಳಿವೆ, ಎಲ್ಲವನ್ನೂ ಒಮ್ಮೆಲೆ ಮಾಡಲು ಸಾಧ್ಯವಿಲ್ಲ ಹಾಗಾಗಿ ಹಂತ-ಹಂತವಾಗಿ ಕಾರ್ಯ ಮಾಡಬೇಕು ಎಂದು ಕುಮಾರಸ್ವಾಮಿ ಹೇಳಿದರು.

Senior Citizens and pregnant women will get 5000 per month: HDK

600 ಇದ್ದ ಮಾಸಾಸನವನ್ನು ಈಗಾಗಲೇ 1000 ಕ್ಕೆ ಏರಿಸಲಾಗಿದೆ. ಮುಂದಿನ ವರ್ಷ ಅದನ್ನು ಎರಡು ಸಾವಿರಕ್ಕೆ ಏರಿಸಲಾಗುವುದು. ಅದರ ಮುಂದಿನ ವರ್ಷ 3000 ಕ್ಕೆ ಏರಿಸುತ್ತೇವೆ ಹೀಗೆ ಪ್ರತಿ ವರ್ಷ ಮಾಆಶನ ಏರಿಸುತ್ತೇವೆ ಎಂದು ಅವರು ಹೇಳಿದರು.

ಸಾಲಮನ್ನಾ ಯೋಜನೆಗಾಗಿ ಅಭಿವೃದ್ಧಿ ಬಲಿ ಕೊಡಲ್ಲ: ಎಚ್ಡಿಕೆ ಅಭಯ ಸಾಲಮನ್ನಾ ಯೋಜನೆಗಾಗಿ ಅಭಿವೃದ್ಧಿ ಬಲಿ ಕೊಡಲ್ಲ: ಎಚ್ಡಿಕೆ ಅಭಯ

ನಮ್ಮ ಸರ್ಕಾರ 45 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದೆ. ಸಾಲಮನ್ನಾ ಮಾಡಿದ್ದೇವೆ ಎಂದು ಬೇರೆ ಯೋಜನೆಗಳನ್ನು ಬದಿಗೆ ಸರಿಸಿಲ್ಲ, ನಾವು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ, ಅದು ಟೀಕಾಕಾರರಿಗೆ ಕಾಣುತ್ತಿಲ್ಲ ಎಂದು ಅವರು ಹೇಳಿದರು.

English summary
Senior citizens and pregnant women will get 5000 money per month said CM Kumaraswamy. He said it will be implicated in coming days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X