ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಕ್ಕೆ ಮತ್ತೆ ಹಿರಿಯ ಕಲಾವಿದರ ಮನವಿ

|
Google Oneindia Kannada News

ಬೆಂಗಳೂರು, ಆ. 13: ಕೊರೊನಾ ವೈರಸ್‌ನಿಂದ ಜಾರಿಗೆ ಬಂದಿರುವ ಲಾಕ್‌ಡೌನ್‌ನಿಂದಾಗಿ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಕನ್ನಡ ಚಿತ್ರರಂಗ ತೀವ್ರ ಸಂಕಷ್ಟಕ್ಕ ಗುರಿಯಾಗಿದೆ. ಇದೇ ಹಿನ್ನೆಲೆಯಲ್ಲಿ ಹಿರಿಯ ನಟ ಶಿವರಾಜ್ ಕುಮಾರ್ ಅವರು ಚಿತ್ರರಂಗಕ್ಕೆ ಸೂಕ್ತ ಸಹಾಯ ಮಾಡುವಂತೆ ಡಿಸಿಎಂ ಡಾ. ಸಿ.ಎನ್. ಅಶ್ವಥ್‌ ನಾರಾಯಣ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದರು.

Recommended Video

DJ ಹಳ್ಳಿಯಲ್ಲಿ ಇದೀಗ ಶುರುವಾಯ್ತು ಹೊಸ ಆತಂಕ | Oneindia Kannada

ಇದೇ ಹಿನ್ನೆಲೆಯಲ್ಲಿ 40 ಪೋಷಕ ಕಲಾವಿದರಿಗೆ ಡಿಸಿಎಂ ಡಾ. ಸಿ.ಎನ್. ಅಶ್ವಥ್‌ ನಾರಾಯಣ ಅವರು ಅಲಿಯನ್ಸ್ ವಿಶ್ವವಿದ್ಯಾಲಯ ವತಿಯಿಂದ ಆರ್ಥಿಕ ನೆರವು ಕೊಡಿಸಿದ್ದಾರೆ. ಸಿನಿಮಾ ಹಾಗೂ ಕಿರುತೆರೆಯ ಸುಮಾರು 40 ಕಲಾವಿದರಿಗೆ ಅಲಿಯನ್ಸ್ ವಿಶ್ವವಿದ್ಯಾಲಯ ನೀಡಿದ ಹಣಕಾಸು ನೆರವಿನ ಜತೆಗೆ ಪ್ರಶಂಸನಾ ಪತ್ರವನ್ನು ನೀಡಿದರು. ತಮ್ಮ ನಟನೆಯ ಮೂಲಕ ಚಿತ್ರರಂಗದ ಹಿರಿಮೆಗೆ ಕಾರಣರಾದ ಕಲಾವಿದರಿಗೆ ನೆರವಾಗುತ್ತಿರುವ ವಿವಿಯನ್ನು ಅಭಿನಂದಿಸಿದರು.

60 ವರ್ಷ ಮೇಲ್ಪಟ್ಟ ಹಿರಿಯ ಕಲಾವಿದರು ಕೂಡ ಚಿತ್ರೀಕರಣದಲ್ಲಿ ಭಾಗವಹಿಸಿ ಜೀವನ ಸಾಗಿಸಲು ಅನುವು ಮಾಡಿಕೊಡುವಂತೆ ಇದೇ ವೇಳೆ ಕಲಾವಿದರು ಡಿಸಿಎಂ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.

Senior Artists Appeal To Govt To Allow Artists Over Age Of 60 To Participate In Film Shooting

ಹಿರಿಯ ನಟಿಯರಾದ ಲಕ್ಷ್ಮಿದೇವಮ್ಮ, ಸುಲೋಚನಾ ರೈ, ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಹಾಗೂ ಸದಸ್ಯರಾದ ಬ್ಯಾಂಕ್ ಜನಾರ್ಧನ್, ವೆಂಕಟಾಚಲ, ಬಿರಾದಾರ್, ಆಡುಗೋಡಿ ಶ್ರೀನಿವಾಸ್, ಶೈಲಜಾ ಸೋಮಶೇಖರ್, ಭಾಗ್ಯಶ್ರೀ, ಸುರೇಶ್ ದಾವಣಗೆರೆ, ಭವ್ಯಶ್ರೀ, ಭಾಸ್ಕರ್, ಪುಷ್ಪಾ ಸ್ವಾಮಿ, ರಾಧಾ ರಾಮಚಂದ್ರ ಸೇರಿದಂತೆ ಸುಮಾರು 40 ಕಲಾವಿದರು ಹಾಜರಿದ್ದರು. ಗಣೇಶ ರಾವ್ ಹಾಜರಿದ್ದರು.

English summary
Senior Artists appealed to DCM Dr. C.N. Ashwath Narayana to allow senior artists over the age of 60 to participate in Shooting to lead life. Responding to this, DCM promised to hold discussions with the chief minister B S Yediyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X