ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಬೆಡ್ ಕೊರತೆ ನೀಗಿಸಲು ತಜ್ಞರು ನೀಡಿದ ಸಲಹೆ ಏನು?

|
Google Oneindia Kannada News

ಬೆಂಗಳೂರು, ಮೇ 06: ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ನೀಗಿಸಲು ತಜ್ಞರು ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ, ಅಂತೆಯೇ ರೋಗಿಗಳು ಕೂಡ ಆಸ್ಪತ್ರೆಗೆ ದಾಖಲಾಗುವುದು ಏರಿಕೆಯಾಗಿದೆ, ಹೀಗಾಗಿ ನಗರದಲ್ಲಿ ಹಾಸಿಗೆಗಳ ಸಮಸ್ಯೆ ಉದ್ಭವವಾಗಿದೆ.

ಹಾಸಿಗೆಗಳ ಕೊರತೆ ನೀಗಿಸಲು ತಜ್ಞರು ಕೆಲವು ಸಲಹೆ ನೀಡಿದ್ದಾರೆ. ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 3 ಲಕ್ಷದ ಗಡಿ ದಾಟಿದೆ. ಕೊರೊನಾ ಸೋಂಕಿನ ಎರಡನೇ ಅಲೆಯಿಂದ ನಗರದ ಜನತೆ ತತ್ತರಿಸಿ ಹೋಗಿದ್ದು ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್, ಐಸಿಯು ಕೊರತೆಯುಂಟಾಗಿದೆ.

ಬೆಂಗಳೂರಿನ ಅನೇಕ ನಿವಾಸಿಗಳು ತಮ್ಮ ಕುಟುಂಬಸ್ಥರಿಗೆ ಕೋವಿಡ್ ಬಂದಾಗ ಉಡುಪಿ, ಮಂಗಳೂರು, ಕೇರಳಕ್ಕೆ ಆಸ್ಪತ್ರೆಗಳಿಗೆ ಕುಟುಂಬದವರು ಕರೆದುಕೊಂಡು ಹೋಗುತ್ತಿದ್ದಾರೆ. ಅವರದ್ದೇ ಸ್ವಂತ ವಾಹನದಲ್ಲಿ ಕರೆದುಕೊಂಡು ಹೋಗುತ್ತಾರೆ.

ಚಾಮರಾಜನಗರ ಆಕ್ಸಿಜನ್ ದುರಂತ: ಕೊಲೆ ದೂರು ದಾಖಲುಚಾಮರಾಜನಗರ ಆಕ್ಸಿಜನ್ ದುರಂತ: ಕೊಲೆ ದೂರು ದಾಖಲು

ಇದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ.ಅದರ ಬದಲು ಸರ್ಕಾರವೇ ಹತ್ತಿರದ ಜಿಲ್ಲೆಗಳಿಗೆ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಉತ್ತಮವಲ್ಲವೇ ಎಂದು ಅವರು ಕೇಳುತ್ತಾರೆ.

ಜನರಿಗೆ ಸರ್ಕಾರಿ ಆಸ್ಪತ್ರೆಗಳ ಮೇಲೆ ನಂಬಿಕೆಯಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವ ಉಚಿತ ಚಿಕಿತ್ಸೆ ಮೇಲೆ ಜನರಿಗೆ ನಂಬಿಕೆ ಬರುತ್ತಿಲ್ಲ, ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೂಡ ಉತ್ತಮ ಚಿಕಿತ್ಸೆ ನೀಡುತ್ತಾರೆ.

ಬೆಂಗಳೂರಿಗೆ ಹೋಲಿಸಿದರೆ ಬೇರೆ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಪ್ರಕರಣ ಕಡಿಮೆಯಿರುವುದರಿಂದ ಅಲ್ಲಿ ಆಕ್ಸಿಜನ್, ಐಸಿಯು ಬೆಡ್, ವೆಂಟಿಲೇಟರ್ ಗಳ ಸಮಸ್ಯೆ ಅಷ್ಟೊಂದು ಇಲ್ಲ.

ಏಕರೂಪ ಪೋರ್ಟಲ್ ಅಗತ್ಯವಿದೆ

ಏಕರೂಪ ಪೋರ್ಟಲ್ ಅಗತ್ಯವಿದೆ

ರಾಜ್ಯ ಕೋವಿಡ್ ವಾರ್ ರೂಂ ಪೋರ್ಟಲ್‌ನ್ನು ಸರ್ಕಾರ ಜಿಲ್ಲೆಗಳ ಜೊತೆ ಸಂಪರ್ಕಿಸಿ ಬೇರೆ ಜಿಲ್ಲೆಗಳಲ್ಲಿ ಎಷ್ಟು ಬೆಡ್‌ಗಳ ಲಭ್ಯತೆ ಇದೆ ಎಂದು ನೋಡಿಕೊಳ್ಳಲು ಏಕರೂಪ ಪೋರ್ಟಲ್‌ನ್ನು ರಚಿಸಬೇಕು.

ಹತ್ತಿರದ ಜಿಲ್ಲೆಗಳಿಗೆ ಕೊಂಡೊಯ್ಯಿರಿ

ಹತ್ತಿರದ ಜಿಲ್ಲೆಗಳಿಗೆ ಕೊಂಡೊಯ್ಯಿರಿ

ಬೆಂಗಳೂರಿನಲ್ಲಿ ಬೆಡ್ ಸಿಗದಿದ್ದರೆ ವಾರ್ ರೂಂ, ಸಹಾಯವಾಣಿ 1912, 108ಗಳ ಮೂಲಕ ಹತ್ತಿರದ ಜಿಲ್ಲೆಗಳಾದ ಕೋಲಾರ, ತುಮಕೂರು, ಮಂಡ್ಯ, ಮೈಸೂರು, ರಾಮನಗರ ಮೊದಲಾದ ಜಿಲ್ಲೆಗಳಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಸೌಲಭ್ಯವನ್ನು ಹುಡುಕಬೇಕು, ಅಲ್ಲಿ ಬೆಡ್ ಇದೆ ಎಂದು ಗೊತ್ತಾದ ಕೂಡಲೇ ಗ್ರೀನ್ ಕಾರಿಡಾರ್ ಮೂಲಕ ರೋಗಿಗಗಳನ್ನು ವರ್ಗಾಯಿಸಬೇಕು.

ರೋಗಿಗಳನ್ನು ಹತ್ತಿರದ ಜಿಲ್ಲೆಗಳಿಗೆ ವರ್ಗಾಯಿಸುವುದು

ರೋಗಿಗಳನ್ನು ಹತ್ತಿರದ ಜಿಲ್ಲೆಗಳಿಗೆ ವರ್ಗಾಯಿಸುವುದು

ಕೋವಿಡ್ ವಾರ್ ರೂಂ ಮತ್ತು ತಜ್ಞರು, ವೈದ್ಯರು ಹೇಳುವ ಪ್ರಕಾರ ಇದಕ್ಕೆ ತಕ್ಷಣದ ಪರಿಹಾರವೆಂದರೆ ನಗರದ ಆಸ್ಪತ್ರೆಗಳಿಂದ ಕೆಲವು ರೋಗಿಗಳನ್ನು ಪಕ್ಕದ ಜಿಲ್ಲೆಗಳಿಗೆ ವರ್ಗಾಯಿಸುವುದು. ನೆರೆಯ ಜಿಲ್ಲೆಗಳಲ್ಲಿ ಐಸಿಯು, ಆಕ್ಸಿಜನ್ ಭರಿತ ಬೆಡ್‌ಗಳು ಮತ್ತು ವೆಂಟಿಲೇಟರ್ ಸಮಸ್ಯೆ ಅಷ್ಟೊಂದು ಇಲ್ಲ, ಸ್ವಲ್ಪ ಕಡಿಮೆಯಾಗಿದೆ.

Recommended Video

#Covid19Updates, Bengaluru: ಉದ್ಯಾನನಗರಿಯಲ್ಲಿ 23106 ಹೊಸ ಕೋವಿಡ್ ಸೋಂಕಿತರು | Oneindia Kannada
ಗಂಭೀರ ಸ್ಥಿತಿಯಲ್ಲಿರುವವರಿಗೆ ತಕ್ಷಣವೇ ಚಿಕಿತ್ಸೆ ನೀಡಿ

ಗಂಭೀರ ಸ್ಥಿತಿಯಲ್ಲಿರುವವರಿಗೆ ತಕ್ಷಣವೇ ಚಿಕಿತ್ಸೆ ನೀಡಿ

ಗಂಭೀರ ಅನಾರೋಗ್ಯ ಸ್ಥಿತಿಯಲ್ಲಿರುವ ರೋಗಿಗಳನ್ನು ಆಸ್ಪತ್ರೆಗೆ ಕರೆತಂದಾಗ ತಕ್ಷಣವೇ ಹಾಸಿಗೆಗಳ ವ್ಯವಸ್ಥೆಯಾಗಿ ಚಿಕಿತ್ಸೆ ನೀಡಬೇಕಾಗುತ್ತದೆ. ಬೆಂಗಳೂರಿನಲ್ಲಿ ಹಾಸಿಗೆ ಸಿಗದಿದ್ದರೆ ಬೇರೆ ಹತ್ತಿರದ ಜಿಲ್ಲೆಗೆ ವರ್ಗಾಯಿಸಿದರೆ ಒಳ್ಳೆಯದಲ್ಲವೇ ಎಂದು ಕೋವಿಡ್ ಕರ್ತವ್ಯದಲ್ಲಿರುವ ಹಿರಿಯ ಆಡಳಿತಾಧಿಕಾರಿಯೊಬ್ಬರು ಹೇಳುತ್ತಾರೆ.

English summary
Bengaluru, with over 3 lakh active Covid cases, is being wracked by the second wave of infection and is facing an acute shortage of hospital beds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X