ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆನ್ಕೊ ಗೋಲ್ಡ್ ಸಂಸ್ಥೆಯಿಂದ ಹುತಾತ್ಮರಿಗೆ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿ

|
Google Oneindia Kannada News

ಬೆಂಗಳೂರು, ಮಾರ್ಚ್ 01: ಪೂರ್ವಭಾರತದ ಅತಿದೊಡ್ಡ ಆಭರಣ ರಿಟೇಲ್ ಸರಣಿಯಾಗಿರುವ ಸೆನ್ಕೊ ಗೋಲ್ಡ್ & ಡೈಮಂಡ್ಸ್, ದೇಶದ ಹುತಾತ್ಮಯೋಧರಿಗೆ ವಿಶಿಷ್ಟವಾಗಿ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಬೆಂಗಳೂರಿನಲ್ಲಿ ಯುವ ಪ್ರತಿಭಾ ಬೇಟೆ (ಯೂಥ್ ಟ್ಯಾಲೆಂಟ್ ಹಂಟ್) ಎಂಬ ಸ್ಪರ್ಧೆಯನ್ನು ಬೆಂಗಳೂರಿನಲ್ಲಿ ಆಯೋಜಿಸಿದೆ.

ಆ್ಯನ್ ಓಡ್ ಟೂ ದ ನೇಷನ್ ಹೆಸರಿನ ಈ ಸ್ಪರ್ಧೆಯನ್ನು ಪುಲ್ವಾಮಾದಲ್ಲಿ ದೇಶವನ್ನು ಸಂರಕ್ಷಿಸುವ ಸಲುವಾಗಿ ಪ್ರಾಣತೆತ್ತ ಹುತಾತ್ಮ ಯೋಧರ ನೆನಪಿಗಾಗಿ ಏರ್ಪಡಿಸಿದೆ.

ಅಭಿನಂದನ್ ಸ್ವದೇಶಕ್ಕೆ ಮರಳುತ್ತಿರುವುದಕ್ಕೆ ರಾಜ್ಯದ ವಿವಿಧೆಡೆ ಸಂಭ್ರಮಾಚರಣೆಅಭಿನಂದನ್ ಸ್ವದೇಶಕ್ಕೆ ಮರಳುತ್ತಿರುವುದಕ್ಕೆ ರಾಜ್ಯದ ವಿವಿಧೆಡೆ ಸಂಭ್ರಮಾಚರಣೆ

ಈ ಬಗ್ಗೆ ವಿವರ ನೀಡಿದ ಸೆನ್ಕೊ ಗೋಲ್ಡ್ ಅಂಡ್ ಡೈಮಂಡ್ಸ್ ನ ಆಡಳಿತ ನಿರ್ದೇಶಕ ಸುವಣ್‍ಕರ್ ಸೇನ್, "ಈ ಸಾಹಸಿ ಯೋಧರು ಶ್ರೇಷ್ಠ ತ್ಯಾಗವನ್ನು ಮಾಡಿದ್ದಾರೆ. ದೇಶವನ್ನು ಹಾಗೂ ನಮ್ಮಲ್ಲಿ ರಕ್ಷಿಸುವ ಸಲುವಾಗಿ ಬಲಿದಾನ ಮಾಡಿದ್ದಾರೆ. ಈ ಹುತಾತ್ಮರಿಗೆ ವಿಶಿಷ್ಟವಾಗಿ ಶ್ರದ್ಧಾಂಜಲಿ ಸಲ್ಲಿಸುವ ಕಿರು ಪ್ರಯತ್ನ ಇದು.

ಈ ವೇದಿಕೆಯು ದೇಶದ ಭವಿಷ್ಯ ಎನಿಸಿಕೊಂಡಿರುವ ಮಕ್ಕಳು, ಮಹಿಳೆಯರು ಮತ್ತು ವಿಶೇಷವಾಗಿ ಯುವಕರನ್ನು ಒಂದೆಡೆ ಸೇರಿಸುವ ಪ್ರಯತ್ನ. ಜತೆಗೆ ಭವಿಷ್ಯದಲ್ಲಿ ದೇಶಕ್ಕಾಗಿ ಕೊಡುಗೆ ನೀಡುವಂತೆ ಅವರಿಗೆ ಸ್ಫೂರ್ತಿ ತುಂಬುವ ಪ್ರಯತ್ನ. ಈ ಪ್ರಯತ್ನದಲ್ಲಿ ಯಶಸ್ಸು ಸಾಧಿಸಲು ಕಾರಣರಾದ ನಮ್ಮ ಪೋಷಕರು ಹಾಗೂ ಸ್ನೇಹಿತರಿಗೆ ನಾವು ಕೃತಜ್ಞರು" ಎಂದು ಹೇಳಿದ್ದಾರೆ.

ವಸಂತರತ್ನ ಫೌಂಡೇಷನ್ 1 ಲಕ್ಷ ರೂಪಾಯಿಗ ಚೆಕ್

ವಸಂತರತ್ನ ಫೌಂಡೇಷನ್ 1 ಲಕ್ಷ ರೂಪಾಯಿಗ ಚೆಕ್

ಬೆಂಗಳೂರಿನ ಸಂತ ಜೋಸೆಫ್ಸ್ ಕಾಲೇಜು (ಸ್ವಾಯತ್ತ) ಈಗಾಗಲೇ 50001 ರೂಪಾಯಿಯ ಚೆಕ್ಕನ್ನು, ಅಗತ್ಯವಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದೂಟ ನೀಡುವ ಸಲುವಾಗಿ ಸ್ವೀಕರಿಸಿದೆ. ವಸಂತರತ್ನ ಫೌಂಡೇಷನ್ 1 ಲಕ್ಷ ರೂಪಾಯಿಗ ಚೆಕ್ಕನ್ನು ಹುತಾತ್ಮರ ಕುಟುಂಬದ ಭದ್ರ ಭವಿಷ್ಯದ ಉದ್ದೇಶಕ್ಕಾಗಿ ಮತ್ತು ದೇಶದ ವೀರನಾರಿಯರ ಕಲ್ಯಾಣಕ್ಕಾಗಿ ಸ್ವೀಕರಿಸಿದೆ. ಆನರ್‍ಪಾಯಿಂಟ್ ಭಾರತೀಯ ಸೈನಿಕರ ಆನ್‍ಲೈನ್ ಸ್ಮಾರಕ ಅಭಿವೃದ್ಧಿಗಾಗಿ 50001 ರೂಪಾಯಿಗಳನ್ನು ಪಡೆದಿದೆ. ಶ್ರೀ ಸಾಯಿಕೃಪಾ ಚಾರಿಟೇಬಲ್ ಟ್ರಸ್ಟ್ 70001 ರೂಪಾಯಿಗಳನ್ನು ಅನಾಥ ಮಕ್ಕಳ ಶಿಕ್ಷಣದ ಅಭಿವೃದ್ಧಿಗಾಗಿ ಪಡೆದಿದೆ.

ಜೋಸೆಫ್ಸ್ ಕಾಲೇಜು ಪ್ರಾಚಾರ್ಯ ಡಾ.ಫಾದರ್ ವಿಕ್ಟರ್ ಲೋಬೊ

ಜೋಸೆಫ್ಸ್ ಕಾಲೇಜು ಪ್ರಾಚಾರ್ಯ ಡಾ.ಫಾದರ್ ವಿಕ್ಟರ್ ಲೋಬೊ

ಈ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ಸಂತ ಜೋಸೆಫ್ಸ್ ಕಾಲೇಜು (ಸ್ವಾಯತ್ತ) ಪ್ರಾಚಾರ್ಯ ಡಾ.ಫಾದರ್ ವಿಕ್ಟರ್ ಲೋಬೊ, "ಜೀವನ ಎನ್ನುವುದು ದೇವರ ಉಚಿತ ಉಡುಗೊರೆ. ಸ್ವಾರ್ಥಕ್ಕಾಗಿ ಬದುಕದೇ, ಜೀವನವನ್ನು ದೇವರಿಗೆ ಮರಳಿ ಉಡುಗೊರೆ ನೀಡುವ ಸಲುವಾಗಿ ಬದುಕಬೇಕು. ಇಂಥ ಅತ್ಯುನ್ನತ ಉದ್ದೇಶದ ಕಾರ್ಯಕ್ರಮಕ್ಕೆ ಸಂತ ಜೋಸೆಫ್ಸ್ ಕಾಲೇಜು (ಸ್ವಾಯತ್ತ) ಆರಣವನ್ನು ಬಳಸಿಕೊಳ್ಳುತ್ತಿರುವುದು ನಮಗೆ ಸಂದ ಗೌರವ. ನಮ್ಮ ಸೈನಿಕರ ಕೊಡುಗೆ ಅವಿಸ್ಮರಣೀಯ ಹಾಗೂ ನಮ್ಮ ದಏಶದ ಹುತಾತ್ಮಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯವನ್ನು ನಾವು ಮಾಡಲೇಬೇಕು" ಎಂದು ಹೇಳಿದ್ದಾರೆ.

ಹಳೆವಿದ್ಯಾರ್ಥಿಗಳ ಸಂಘದ ಸಹಯೋಗ

ಹಳೆವಿದ್ಯಾರ್ಥಿಗಳ ಸಂಘದ ಸಹಯೋಗ

ಈ ವಿನೂತನ ಯೋಜನೆಯು ಸೆನ್ಕೊ ಗೋಲ್ಡ್ & ಡೈಮಂಡ್ಸ್ ನಪರಿಕಲ್ಪನೆಯಾಗಿದ್ದು, ಸಂತ ಕ್ಸೇವಿಯರ್ ಕಾಲೇಜು (ಕೊಲ್ಕತ್ತಾ) ಹಳೆವಿದ್ಯಾರ್ಥಿಗಳ ಸಂಘದ ದಕ್ಷಿಣ ವಲಯ ಶಾಖೆ ಮತ್ತು ಸಂತ ಜೋಸೆಫ್ಸ್ ಕಾಲೇಜಿನ ಹಳೆವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದೆ. ಖ್ಯಾತ ಬ್ರಾಂಡ್‍ಗಳಾದ ಸೆನೊರಿಟಾ ಉಡುಗೊರೆ ಪಾಲುದಾರರಾಗಿ ಇದಲ್ಲಿ ಭಾಗವಹಿಸುತ್ತಿದ್ದು, ಎಸ್ಪೆಂಡ್ ಆಹಾರ ಪಾಲುದಾರ ಕಂಪನಿಯಾಗಿ ಮತ್ತು ರೆಡ್ ಎಫ್‍ಎಂ 93.5 ರೇಡಿಯೊ ಪಾಲುದಾರನಾಗಿ ಭಾಗವಹಿಸುತ್ತಿವೆ. ಸಮಾರಂಭದಲ್ಲಿ ವಾಕಿಂಗ್ ವಯೋಲಿನ್ ವಾದಕ ಡಾ.ಅನೀಶ್ ವಿದ್ಯಾಶಂಕರ್ ಮತ್ತು ಖ್ಯಾತ ಪ್ರತಿಭೆ ಕರ್ಲಿಟಾ ಮೋಹಿನಿ ಅಕಾ ಮರಿಯಾ ಅವರ ವಿಶಿಷ್ಟ ಕಾರ್ಯಕ್ರಮಗಳು ಇರುತ್ತವೆ.

ಸಂಚಾಲಕ ರುದ್ರಶಂಕರ್ ರಾಯ್ ಮಾತನಾಡಿ

ಸಂಚಾಲಕ ರುದ್ರಶಂಕರ್ ರಾಯ್ ಮಾತನಾಡಿ

ಆ್ಯನ್ ಓಡ್ ಟೂ ದ ನೇಷನ್ ಕಾರ್ಯಕ್ರಮದ ಮುಖ್ಯ ಸಂಯೋಜಕ ಮತ್ತು ಎಸ್‍ಎಕ್ಸ್‍ಸಿಸಿಎಎ ದಕ್ಷಿಣ ವಲಯ ಘಟಕದ ಸಂಚಾಲಕ ರುದ್ರಶಂಕರ್ ರಾಯ್ ಮಾತನಾಡಿ, "ಇಂದು ನಿರ್ದಿಷ್ಟ ಉದ್ದೇಶಕ್ಕಾಗಿ ನಾವೆಲ್ಲರೂ ಕೈಜೋಡಿಸಿದ್ದೇವೆ. ಇದು ಸಂತೋಷಕ್ಕಾಗಿ ಅಲ್ಲ. ಈ ವಿನೂತನ ಕ್ರಮವು ಭಾರತದಲ್ಲೇ ವಿಶಿಷ್ಟ. ಸೆನ್ಕೊ ಗೋಲ್ಡ್ & ಡೈಮಂಡ್ಸ್, ಬೆಂಗಳೂರಿನ ಸಂತ ಜೋಸೆಫ್ಸ್ ಕಾಲೇಜು (ಸ್ವಾಯತ್ತ) ಮತ್ತು ಸಂತ ಕ್ಸೇವಿಯರ್ ಕಾಲೇಜು (ಕೊಲ್ಕತ್ತಾ) ಇದರ ಹಳೆವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಯುದ್ಧ ವಿದವೆಯರ ಸಬಲೀಕರಣ ಮಾಡುವುದು ಮಾತ್ರವಲ್ಲದೇ, ಹುತಾತ್ಮರ ಕುಟುಂಬಗಳ ಪರವಾಗಿ ನಿಲ್ಲುವ, ದೇಶದ ಭವಿಷ್ಯ ಎನಿಸಿದ ಅನಾಥ ಮಕ್ಕಳ ಆಸರೆಗೆ ನಿಲ್ಲುತ್ತಿದೆ" ಎಂದು ಹೇಳಿದ್ದಾರೆ.

English summary
Senco Gold & Diamonds, the largest jewellery retail chain from Eastern India, drew up a noble way to pay homage to the martyrs of our country by organizing a Youth Talent Hunt contest in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X