ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿವಿಜಿ ರಾಜಕೀಯ ವಿಚಾರಧಾರೆ ಕುರಿತು ಚಿಂತನ-ಮಂಥನ

|
Google Oneindia Kannada News

ಬೆಂಗಳೂರು, ಮಾ. 15 : ಸಮಾಜ ಸೇವಕರ ಸಮಿತಿ ಬೆಂಗಳೂರು ಡಿವಿಜಿ ಯವರ ರಾಜಕೀಯ ವಿಚಾರಧಾರೆಯ ಕುರಿತ ವಿಶೇಷ ಚಿಂತನ ಮಂಥನ ದೊಂದಿಗೆ ಅವರ 127ನೆ ಹುಟ್ಟುಹಬ್ಬವನ್ನು ಆಚರಿಸುತ್ತಿದೆ. ಮಾ.17ರಂದು ಈ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದೆ.

ಡಿವಿ ಗುಂಡಪ್ಪ (ಡಿವಿಜಿ) ಡಿವಿಜಿ ಯವರು ಕೇವಲ ಕವಿ, ದಾರ್ಶನಿಕ, ಸಾಹಿತಿ ಮಾತ್ರ ಆಗಿರಲಿಲ್ಲ. ಆ ಕಾಲದ ಪ್ರಖರ ರಾಜಕೀಯ ಚಿಂತಕರೂ ಆಗಿದ್ದರು ಎಂಬ ವಿಚಾರ ಬಹುತೇಕರಿಗೆ ಗೊತ್ತಿಲ್ಲ. 1920ರ ಹೊತ್ತಿನಲ್ಲೇ ಡಿವಿಜಿ ಪ್ರಜಾ ಸರ್ಕಾರ ಹೇಗಿರಬೇಕು, ರಾಜಕೀಯ ವ್ಯವಸ್ಥೆಯ ಸುಧಾರಣೆಗಳು ಮುಂತಾದ ವಿಷಯಗಳ ಕುರಿತು ಲೇಖನ ಬರೆದಿದ್ದರು.

DV Gundappa

ಹಾ.ಮಾ. ನಾಯಕರ ಸಂಪಾದಕತ್ವದಲ್ಲಿ ಮೂಡಿಬಂದ 'ಡಿವಿಜಿ ಕೃತಿಶ್ರೇಣಿ'ಯ ಐದನೇ ಸಂಪುಟ 'ರಾಜ್ಯಶಾಸ್ತ್ರ - ರಾಜ್ಯಾಂಗ' ಡಿವಿಜಿ ಯವರ ರಾಜಕೀಯ ವಿಚಾರಧಾರೆಯನ್ನು ಸಮಗ್ರವಾಗಿ ಪರಿಚಯಿಸುವ ಪುಸ್ತಕವಾಗಿದೆ. ಇಡೀ ರಾಜಕೀಯ ವ್ಯವಸ್ಥೆಯೇ ಭ್ರಷ್ಟ ಎನ್ನಿಸುತ್ತಿರುವ ಈ ಹೊತ್ತಿನಲ್ಲಿ ಡಿವಿಜಿ ಯವರ ವಿಚಾರಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ.

ಈ ಹಿನ್ನೆಲೆಯಲ್ಲಿ ಸಮಾಜ ಸೇವಕರ ಸಮಿತಿ ಮಾರ್ಚ್ 17ರ ಸೋಮವಾರ ಸಂಜೆ 5.30ಕ್ಕೆ ಬಸವನಗುಡಿಯ ಬಿ.ಪಿ. ವಾಡಿಯ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಡಿವಿಜಿ ಯವರ 'ರಾಜ್ಯಾಂಗ ತತ್ವಗಳು' ಕುರಿತ ವಿಶೇಷ ಉಪನ್ಯಾಸ, ಅವರ ಕೃತಿಗಳ ಗಾಯನ ಕಾರ್ಯಕ್ರಮವನ್ನು ಆಯೋಜಿಸಿದೆ. ಖ್ಯಾತ ಪತ್ರಕರ್ತ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಮತ್ತು ಖ್ಯಾತ ನಟ, ನಿರ್ದೇಶಕ ಎಸ್.ಎನ್.ಸೇತುರಾಮ್ ಭಾಗವಹಿಸಲಿದ್ದಾರೆ.

ಡಿವಿಜಿ ಉಪನ್ಯಾಸ ಸರಣಿ : ತುಮಕೂರಿನ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯು ನಡೆಸುತ್ತಿರುವ ಡಿವಿಜಿ ನೆನಪು'' ಶೀರ್ಷಿಕೆಯ ಮಾಸಿಕ ಚಿಂತನಶೀಲ, ಜನಪ್ರಿಯ ಉಪನ್ಯಾಸ ಕಾರ್ಯಕ್ರಮವು 25 ನೇ ತಿಂಗಳಿಗೆ ಪಾದಾರ್ಪಣೆ ಮಾಡುತ್ತಿದೆ. ಮಾರ್ಚ್ 17 ರಂದು ಸೋಮವಾರ ಸಂಜೆ 6.30 ಕ್ಕೆ ತುಮಕೂರು ನಗರದ ಸೋಮೇಶ್ವರಪುರಂ ಮುಖ್ಯ ರಸ್ತೆಯಲ್ಲಿರುವ ಗಾಯತ್ರಿ ಸಮುದಾಯ ಭವನದಲ್ಲಿ 25 ನೇ ತಿಂಗಳಿನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಹಾಗೂ ಈ ಮಾಲಿಕೆಯ ಪ್ರಧಾನ ಉಪನ್ಯಾಸಕರಾದ ಶ್ರೀ ಸ್ವಾಮಿ ಜಪಾನಂದಜಿಯವರು ಕಾರ್ಯಕ್ರಮದ ಸಾನಿಧ್ಯ ವಹಿಸಿ "ಮತ್ತೆ ತೋರ್ಪುದು ನಾಳೆ- ಮಂಕುತಿಮ್ಮ" ಎಂಬ ಬಗ್ಗೆ ಉಪನ್ಯಾಸ ನೀಡುವರು. ಮುಖ್ಯಅತಿಥಿಗಳಾಗಿ ಗುಬ್ಬಿಯ ಚನ್ನಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ (ಸಿಐಟಿ) ನಿರ್ದೇಶಕರಾದ ಡಾ. ಡಿ.ಎಸ್.ಸುರೇಶ್ ಕುಮಾರ್ ಮುಂತಾದವರು ಭಾಗವಹಿಸಲಿದ್ದಾರೆ.

English summary
Samaja Sevakara Samithi Bangalore has organized seminar on DV Gundappa political thoughts on the celebration of DV Gundappa 127 birthday. Seminar will be held on Monday, March 17 at Indian Institute of World Culture at 6.30 PM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X