ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಓಲಾದಿಂದ self drive ಬಾಡಿಗೆ ಕಾರು ಸೇವೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 12 : ಓಲಾ ಬೆಂಗಳೂರಿನಲ್ಲಿ ಹೊಸ ಸೇವೆಯೊಂದನ್ನು ಆರಂಭಿಸಲಿದೆ. ಸ್ವತಃ ಡ್ರೈವಿಂಗ್ ಮಾಡಬಹುದಾದ ಕಾರು ಬಾಡಿಗೆ ಸೇವೆಯನ್ನು ನಗರದಲ್ಲಿ ಪ್ರಾಯೋಗಿಕವಾಗಿ ಪರಿಚಯಿಸಲು ತೀರ್ಮಾನಿಸಿದೆ.

self drive ಬಾಡಿಗೆ ಕಾರು ಸೇವೆಯನ್ನು ನಗರದಲ್ಲಿ ಆರಂಭಿಸಲು ಓಲಾ ಕಂಪನಿ ಸರ್ಕಾರದಿಂದ ಒಪ್ಪಿಗೆ ಪಡೆದಿದೆ. ಬೆಂಗಳೂರು ನಗರದಲ್ಲಿ ಇದು ಯಶಸ್ವಿಯಾದರೆ ಬೇರೆ-ಬೇರೆ ರಾಜ್ಯಗಳ ನಗರಗಳಲ್ಲೂ ಇದನ್ನು ಪರಿಚಯಿಸಲು ಓಲಾ ಮುಂದಾಗಿದೆ.

ಓಲಾ, ಊಬರ್‌ ಕ್ಯಾಬ್‌ಗಳಿಗಾಗಿಯೇ ಪ್ರತ್ಯೇಕ ಪಾರ್ಕಿಂಗ್ ಬೇಕುಓಲಾ, ಊಬರ್‌ ಕ್ಯಾಬ್‌ಗಳಿಗಾಗಿಯೇ ಪ್ರತ್ಯೇಕ ಪಾರ್ಕಿಂಗ್ ಬೇಕು

ಬೆಂಗಳೂರು ನಗರದಲ್ಲಿ ಮಾತ್ರ ಸಂಚಾರ ನಡೆಸಲು ಈ ಸೇವೆಯನ್ನು ಪರಿಚಯಿಸಲಾಗುತ್ತಿದೆ. ಝೂಮ್ ಕಾರು ಮಾದರಿಯಲ್ಲಿ ನಗರದ ಹೊರಗೆ ಸಂಚಾರ ನಡೆಸಲು ಅನುಮತಿಯನ್ನು ಸದ್ಯಕ್ಕೆ ನೀಡುವುದಿಲ್ಲ ಎಂಬ ಮಾಹಿತಿ ಸಿಕ್ಕಿದೆ.

ಕರ್ನಾಟಕದಲ್ಲಿ ಓಲಾ ಶೇರ್, ಊಬರ್ ಪೂಲಿಂಗ್ ರದ್ದುಕರ್ನಾಟಕದಲ್ಲಿ ಓಲಾ ಶೇರ್, ಊಬರ್ ಪೂಲಿಂಗ್ ರದ್ದು

Self Driven Car Rental Service By Ola Soon

ಸೆಡಾನ್, ಹ್ಯಾಚ್ ಬ್ಯಾಕ್ ಸೇರಿ ಒಟ್ಟು 10 ಸಾವಿರ ಕಾರುಗಳನ್ನು ಈ ಸೇವೆಗಾಗಿ ಓಲಾ ನಗರದಲ್ಲಿ ಪರಿಚಯಿಸಲಿದೆ. ಡ್ರೈವ್‌ವೇ, ಝೂಮ್ ಸೇರಿದಂತೆ ವಿವಿಧ ಕಂಪನಿಗಳು ಈ ರೀತಿಯ ಸೇವೆಯನ್ನು ಈಗಾಗಲೇ ನೀಡುತ್ತಿವೆ.

ಓಲಾ ನಿಷೇಧ ಹಿಂಪಡೆಯುವ ಹಿಂದಿದ್ದ ಕಾರಣಗಳು, ಷರತ್ತುಗಳೇನು?ಓಲಾ ನಿಷೇಧ ಹಿಂಪಡೆಯುವ ಹಿಂದಿದ್ದ ಕಾರಣಗಳು, ಷರತ್ತುಗಳೇನು?

ಪಿಕಪ್ ಮತ್ತು ಡ್ರಾಪ್ ಪಾಯಿಂಟ್‌ಗಳನ್ನು ಇದಕ್ಕಾಗಿ ನಿಗದಿ ಮಾಡಲಾಗುತ್ತದೆ. ಗ್ರಾಹಕರು ಅಲ್ಲಿಂದ ಕಾರುಗಳನ್ನು ಬಾಡಿಗೆಗೆ ಪಡೆಯಬಹುದು. ಎಸ್‌ಯುವಿಗಳನ್ನು ಸಹ ಪರಿಚಯಿಸಲು ಓಲಾ ಮುಂದಾಗಿದೆ.

ಮುಂದಿನ 2 ವರ್ಷಗಳಲ್ಲಿ ಈ ಯೋಜನೆಗೆ ಹೆಚ್ಚಿನ ಹಣ ಹೂಡಿಕೆ ಮಾಡುವ ಚಿಂತನೆಯಲ್ಲಿ ಕಂಪನಿ ಇದೆ. ಓಲಾ ಕಂಪನಿಯ ಸೇವೆಯನ್ನು ಮತ್ತಷ್ಟು ವಿಸ್ತರಣೆ ಮಾಡಲು ಈ ಸೇವೆ ಪರಿಚಯಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

English summary
Ola all set to launch self driven car rental service in Bengaluru city. Company likely to deploy 10,000 car including SUVs for this service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X