ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾಗತಿಕ ಹವಾಮಾನ ಬದಲಾವಣೆಗೆ ಪರಿಹಾರ ಅತ್ಯಗತ್ಯ: ಸುರೇಶ್ ಪ್ರಭು

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ಬೆಂಗಳೂರು, ಸೆ. 25: ಮಾನವ ಸಮುದಾಯವು ಕ್ಷೇಮವಾಗಿ ಬದುಕಿ ಉಳಿಯಬೇಕಾದರೆ ನಾವು ಬಳಸುವ ಇಂಧನ ಮೂಲವನ್ನು ಬದಲಿಸಬೇಕಾಗಿದೆ. ವಿಕೇಂದ್ರೀಕೃತ ಮಾದರಿಯಲ್ಲಿ ಹಸಿರು ಇಂಧನವನ್ನು ಬಳಸುವುದರಿಂದ ಜಾಗತಿಕ ಹವಾಮಾನ ಬದಲಾವಣೆಯಿಂದ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂದು ಕೇಂದ್ರದ ಮಾಜಿ ಸಚಿವರು ಹಾಗೂ ರಿಷಿಹುಡ್ ವಿಶ್ವವಿದ್ಯಾಲಯದ ಕುಲಪತಿ ಸುರೇಶ್ ಪ್ರಭು ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಸೆಲ್ಕೋ ಫೌಂಡೇಶನ್ ವತಿಯಿಂದ ಶನಿವಾರ ನಡೆದ ಸೂರ್ಯ ಮಿತ್ರ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಜಾಗತಿಕ ಹವಾಮಾನ ಬದಲಾವಣೆಗೆ ಗಡಿಗಳ ಹಂಗಿಲ್ಲ. ನದಿಗಳು ಬರಿದಾಗುತ್ತಿವೆ. ಪ್ರವಾಹಗಳಿಂದ ದೇಶಗಳು ತತ್ತರಿಸುವುದನ್ನು ನೋಡಿದ್ದೇವೆ. ಇವೆಲ್ಲವನ್ನು ತಡೆಯಲು ಹಸಿರ ಇಂಧನ ಬಳಕೆ ಸಹಕಾರಿ ಆಗಬಲ್ಲುದು ಎಂದರು.

ಯುವಕರಿಗಾಗಿ ಸೂರ್ಯಮಿತ್ರ ಕೌಶಲ್ಯ ಅಭಿವೃದ್ಧಿ ಯೋಜನೆಯುವಕರಿಗಾಗಿ ಸೂರ್ಯಮಿತ್ರ ಕೌಶಲ್ಯ ಅಭಿವೃದ್ಧಿ ಯೋಜನೆ

ಕೆಲವು ದಶಕಗಳ ಹಿಂದೆ ವಿದ್ಯುತ್ ಉತ್ಪಾದನೆಗೆ ಸರ್ಕಾರದ ಅನುಮತಿ ಬೇಕಾಗಿತ್ತು. ಆಗೆಲ್ಲ ವಿದ್ಯುತ್‌ಗಾಗಿ ಜನರು ಸರ್ಕಾರವನ್ನು ಅವಲಂಬಿಸಬೇಕಾಗಿತ್ತು. ಆದರೆ ಸರ್ಕಾರದ ಉತ್ಪಾದನ ಸಾಮರ್ಥ್ಯ ಸೀಮಿತವಾಗಿತ್ತು.

ಆದರೆ ಸೆಲ್ಕೋದಂತಹ ಸಂಸ್ಥೆಯು 26 ವರ್ಷಗಳ ಹಿಂದೆಯೇ ದೂರದೃಷ್ಟಿಯಿಂದ ಹಸಿರು ಇಂಧನ ಉತ್ಪಾದನೆ ಮತ್ತು ಅದರಿಂದ ಬಡತನ ನಿರ್ಮೂಲನೆಯ ಪ್ರಯತ್ನ ಮಾಡಿದರು. ಇಂದು ಜನಸಾಮಾನ್ಯರೂ ಕೂಡ ವಿದ್ಯುತ್ ಉತ್ಪಾದಿಸಬಹುದಾಗಿದೆ. ಅದರಲ್ಲಿಯೂ ರೈತರಿಗೆ ವಿದ್ಯುತ್ ಒದಗಿಸಿದಲ್ಲಿ ಅತೀ ಹೆಚ್ಚಿನ ಸಹಾಯವಾಗುತ್ತದೆ. ಅಂತಹ ಮಾದರಿಗಳನ್ನು ಸೆಲ್ಕೊ ಬಹಳ ಹಿಂದೆಯೇ ರೂಪಿಸಿದ್ದು ಇಂದು ಅವು ಮಾದರಿಯಾಗಿವೆ ಎಂದರು.

ಸೆಲ್ಕೋ ಇಂಡಿಯಾ

ಸೆಲ್ಕೋ ಇಂಡಿಯಾ

ಇತ್ತೀಚೆಗೆ ಖಾಸಗಿ ವಲಯದ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರೆಲ್ಲರಿಗೂ ಇಂಧನದ ಅಗತ್ಯವಿದೆ. ಆದ್ದರಿಂದ ಹಸಿರು ಇಂಧನದ ಮೇಲೆ‌ ಸರ್ಕಾರವು ತೆರಿಗೆ ವಿಧಿಸುವಾಗ ಕನಿಷ್ಠ ಪ್ರಮಾಣವನ್ನು (ಥ್ರೆಶೋಲ್ಡ್) ನಿಗದಿ ಮಾಡಬೇಕು ಎಂದರು.

2020ರ ಸೂರ್ಯ ಮಿತ್ರ ಪ್ರಶಸ್ತಿಯನ್ನು ನೆವೆಲ್ಲೆ ವಿಲಿಯಮ್ಸ್ ಅವರಿಗೆ, 2021ರ ಸಾಲಿನ ಪ್ರಶಸ್ತಿಯನ್ನು ರಿಚೆಂಡಾ ವಾನ್ ಲೀವೆನ್ ಅವರಿಗೆ ಹಾಗೂ 2022ನೇ ಸಾಲಿನ ಪ್ರಶಸ್ತಿಯನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್‌ಗೆ ನೀಡಲಾಯಿತು.

ನೆವೆಲ್ಲೆ ವಿಲಿಯಮ್ಸ್ ಅವರ ಅನುಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಅವರ ಪರವಾಗಿ ಸೆಲ್ಕೋ ಫೌಂಡೇಷನ್‌ನ ಸಿಇಒ ಡಾ. ಹರೀಶ್ ಹಂದೆ ಅವರು ಮತ್ತು ರಿಚೆಂಡಾ ವಾನ್ ಲೀವೆನ್ ಅವರ ಪರವಾಗಿ ಸೆಲ್ಕೋ ಇಂಡಿಯಾದ ನಿರ್ದೇಶಕರಾದ ಥಾಮಸ್ ಪುಲ್ಲೆಂಕೇವ್ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯ ಪರವಾಗಿ ಎಂ. ಎ. ಬಾಲಸುಬ್ರಮಣ್ಯ ಹಾಗೂ ಸಿಇಒ ಜಿ.ಎಸ್. ಕುಮಾರ್ ಸ್ವೀಕರಿಸಿದರು.

ಸೆಲ್ಕೋ ಇಂಡಿಯಾದ ನಿರ್ದೇಶಕರಾದ ಹರೀಶ್ ಹಂದೆ

ಸೆಲ್ಕೋ ಇಂಡಿಯಾದ ನಿರ್ದೇಶಕರಾದ ಹರೀಶ್ ಹಂದೆ

ಸೆಲ್ಕೋ ಇಂಡಿಯಾದ ನಿರ್ದೇಶಕರಾದ ಹರೀಶ್ ಹಂದೆ ಮಾತನಾಡಿ, "ಶಕ್ತಿಯ ವಿಕೇಂದ್ರೀಕರಣವೊಂದೇ ಹಸಿರು ಇಂಧನವನ್ನು ಬಡವರ ಬಳಿಗೆ ಕೊಂಡೊಯ್ಯಲು ಇರುವ ಪರಿಹಾರ. ಸರ್ಕಾರವು ನೀತಿ ನಿರೂಪಣೆಯಲ್ಲಿ ಹಸಿರ ಇಂಧನದ ಪರವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಮಾಧ್ಯಮಗಳೂ ಸೇರಿದಂತೆ ಸಾಕಷ್ಟು ಒತ್ತಡ ಹಾಕಲಾಗುತ್ತಿದೆ. ನಮ್ಮ ದೇಶದ ಹಳ್ಳಿಯೊಂದರಲ್ಲಿ ರೂಪುಗೊಳ್ಳುವ ಮಾದರಿಯು ವಿದೇಶಗಳಿಗೂ ಮಾದರಿಯಾಗಬೇಕು. ಅದೇ ರೀತಿ ಇಲ್ಲಿನ ವೈಫಲ್ಯಗಳೂ ಇತರರ ಸಾಧನೆಯ ಹಾದಿಯಲ್ಲಿ ಪಾಠವಾಗಬೇಕು ಎಂದರು.

ಸೆಲ್ಕೋ ಇಂಡಿಯಾದ ಸಿಇಒ ಮೋಹನ ಭಾಸ್ಕರ ಹೆಗಡೆ

ಸೆಲ್ಕೋ ಇಂಡಿಯಾದ ಸಿಇಒ ಮೋಹನ ಭಾಸ್ಕರ ಹೆಗಡೆ

ಸೆಲ್ಕೋ ಇಂಡಿಯಾದ ಸಿಇಒ ಮೋಹನ ಭಾಸ್ಕರ ಹೆಗಡೆ ಮಾತನಾಡಿ, ಸಮಾಜದ ಅಂಚಿನಲ್ಲಿರುವ ವರ್ಗವು ಸೌರ ಇಂಧನವನ್ನು ಬಳಸಲು ಮುಂದಾಗುವ ಸಂದರ್ಭದಲ್ಲಿ ಸರ್ಕಾರವು ಹಸಿರು ಇಂಧನದ ಮೇಲೆ ಶೇ. 12 ರಷ್ಟು ಜಿಎಸ್ ಟಿ ಹಾಕಿದೆ. ಆದರೆ ಕಲ್ಲಿದ್ದಲಿನ ಮೇಲೆ ಸಬ್ಸಿಡಿಯನ್ನು ಹೆಚ್ವಿಸಿದೆ. ಈ ತಾರತಮ್ಯ ಹೋಗಬೇಕು. 100 ವ್ಯಾಟ್ ಗಿಂತ ಕಡಿಮೆ ಸಾಮರ್ಥ್ಯದ ಸೌರ ಮಾದರಿಗಳಿಗೆ ಜಿಎಸ್ ಟಿವಿಧಿಸಬಾರದು ಎಂದು ಸರ್ಕಾರವನ್ನು ಆಗ್ರಹಿಸಿದರು.

ಸಾಧನೆಗಳನ್ನು ಬಿಂಬಿಸುವ 'ಶಕ್ತಿಪಥ' ಪುಸ್ತಕ

ಸಾಧನೆಗಳನ್ನು ಬಿಂಬಿಸುವ 'ಶಕ್ತಿಪಥ' ಪುಸ್ತಕ

ಸೆಲ್ಕೋ ಸಂಸ್ಥೆಯ ಸಾಧನೆಗಳನ್ನು ಬಿಂಬಿಸುವ 'ಶಕ್ತಿಪಥ' ಪುಸ್ತಕವನ್ನು ಕೌನ್ಸಿಲ್ ಆನ್ ಎನರ್ಜಿ ಎನ್ವಿರಾನ್ಮೆಂಟ್ ಅಂಡ್ ವಾಟರ್ ನ ಸಿಇಒ ಡಾ. ಅರುಣಾಭ ಘೋಷ್ ಬಿಡುಗಡೆ ಮಾಡಿದರು.

ಸೆಲ್ಕೋ ಫೌಂಡೇಷನ್ ನ ಸಾಧನೆಗಳನ್ನು ಬಿಂಬಿಸುವ 'ಎನರ್ಜೈಸಿಂಗ್ ಲೈವ್ಲಿಹುಡ್' ಪುಸ್ತಕವನ್ನು ಸುರೇಶ್ ಪ್ರಭು ಅವರು ಬಿಡುಗಡೆ ಮಾಡಿದರು.

ಸೆಲ್ಕೋ ಇಂಡಿಯಾದ 2020-21ನೇ ಸಾಲಿನ ಚಾಂಪಿಯನ್ ಪ್ರಶಸ್ತಿ ಹಾಸನ ತಂಡ, 2021-22 ನೇ ಸಾಲಿನ ಚಾಂಪಿಯನ್ ಪ್ರಶಸ್ತಿಯನ್ನು ಚಿಕ್ಕಬಳ್ಳಾಪುರ ತಂಡ ಪಡೆದುಕೊಂಡಿತು.

ವೇದಿಕೆಯಲ್ಲಿ ಸೆಲ್ಕೋ ಇಂಡಿಯಾದ ನಿರ್ದೇಶಕರಾದ ಥಾಮಸ್ ಪುಲ್ಲೆಂಕೇವ್, ಪ್ರೊ. ಎಂ.ಎಸ್. ಶ್ರೀರಾಮ್, ಸೆಲ್ಕೋ ಫೌಂಡೇಷನ್ ನ ನಿರ್ದೇಶಕರಾದ ಹುಧಾ ಜಾಫರ್, ಚೀಫ್ ಫೈನಾನ್ಸ್ ಆಫೀಸರ್ ಜೋಬಿ ವಿ.ಕೆ. ಉಪಸ್ಥಿತರಿದ್ದರು.

English summary
Bengaluru-based nonprofit Selco has announced its Surya Mitra awards for solar energy pioneer Nevelle Williams, Aspen Network executive director Richenda Van Leeuwen and HD Kote-based Swami Vivekananda Youth Movement (SVYM).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X