ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಪ್ತಿಯಾಗಿದ್ದ ಚಿನ್ನ ಕಸ್ಟಮ್ಸ್ ಕೇಂದ್ರ ಕಚೇರಿಯಲ್ಲೇ ಮಿಸ್ಸಿಂಗ್ !

|
Google Oneindia Kannada News

ಬೆಂಗಳೂರು, ಫೆಬ್ರವರಿ 26: ಕಸ್ಟಮ್ಸ್ ಅಧಿಕಾರಿಗಳ ಕೇಂದ್ರ ಕಚೇರಿಯಲ್ಲಿಯೇ ಚಿನ್ನ ಕಳುವು ಆಗಿರುವ ಸಂಗತಿ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಣೆ ಮಾಡುವ ಆರೋಪದಡಿ 2020 ರಲ್ಲಿ ಮಹಿಳೆಯೊಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ವೇಳೆ 150 ಗ್ರಾಂ ತೂಕದ ಮೂರು ಚಿನ್ನದ ಬಳೆಗಳನ್ನು ಜಪ್ತಿ ಮಾಡಿದ್ದರು. ಜಪ್ತಿ ಮಾಡಿದ್ದ ಚಿನ್ನದ ಬಳೆಗಳನ್ನು ಪಂಚೆನಾಮೆ ಮೂಲಕ ಸಿಲ್ ಮಾಡಿ ಕಸ್ಟಮ್ಸ್ ಕೇಂದ್ರ ಕಚೇರಿಯಲ್ಲಿ ಇಟ್ಟಿದ್ದರು.

seized gold missing in customs head office !

ಇದೇ ಫೆಬ್ರವರಿ 23 ರಂದು ಪರಿಶೀಲನೆ ನಡೆಸಿದಾಗ 150 ಗ್ರಾಂ ಚಿನ್ನದ ಬದಲಿಗೆ ನೂರು ಗ್ರಾಂ ಇರುವುದು ಗೊತ್ತಾಗಿದೆ. ಐವತ್ತು ಗ್ರಾಂ ತೂಕದ ಒಂದು ಚಿನ್ನದ ಬಳೆಯೇ ಕಣ್ಮರೆಯಾಗಿದೆ. ಚಿನ್ನದ ಬಳೆ ಕಳುವಾದ ಹಿನ್ನೆಲೆಯಲ್ಲಿ ಕಸ್ಟಮ್ಸ್ ಜಾಗೃತ ದಳದ ಅಧಿಕಾರಿ ರಾಜೀವ್ ಎಂಬುವರು ಕಮರ್ಷಿಲ್ ಪೊಲಿಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಸೀಮಾ ಸುಂಕ ಅಧಿಕಾರಿಗಳ ಕೇಂದ್ರ ಕಚೇರಿ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ ತನಿಖೆ ನಡೆಸುತ್ತಿದ್ದಾರೆ. ಈವರೆಗೂ ಕಣ್ಮರೆಯಾಗಿರುವ ಚಿನ್ನದ ಬಗ್ಗೆ ಸುಳಿವು ಸಿಕ್ಕಿಲ್ಲ. ಸೀಮಾ ಸುಂಕದ ಅಧಿಕಾರಿಗಳು ಪಂಚನಾಮೆಯಾದ ಬಳಿಕ ಅದನ್ನು ಸುರಕ್ಷಿತವಾಗಿ ಇಡಬೇಕಿತ್ತು. ಈ ಕಾರ್ಯ ಮಾಡುವರೇ ಚಿನ್ನ ಎಸಗಿರುವವ ಸಂಶಯ ವ್ಯಕ್ರವಾಗಿದೆ.

English summary
The vigilance officer of customs has lodged a complaint with the Commercial Police Station regarding the gold missing in the customs head office
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X