• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಕ್ಕಳ ಮೇಲೆ ಕಾನೂನು ಕತ್ತಿ: ಪೊಲೀಸರಿಗೆ ಪೋಷಕರ ಪ್ರಶ್ನೆಗಳು

|

ಬೆಂಗಳೂರು, ಫೆಬ್ರವರಿ 06: ಬೀದರ್‌ ನಲ್ಲಿ ಸಿಎಎ-ಎನ್‌ಸಿಆರ್ ವಿರುದ್ಧ ನಾಟಕ ಮಾಡಿದ ಮಕ್ಕಳನ್ನು ವಿಚಾರಣೆ ನಡೆಸಿ ಪೋಷಕರನ್ನು ಜೈಲಿಗೆ ಅಟ್ಟಿರುವ ಕ್ರಮದ ಬಗ್ಗೆ ಆಕ್ರೋಶ ಹೆಚ್ಚಾಗುತ್ತಿದೆ.

ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದ್ದು, ಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು ಶಾಲಾ ವಿದ್ಯಾರ್ಥಿನಿಯೊಬ್ಬಳ ತಾಯಿಯ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿರುವುದನ್ನು ವಿರೋಧಿಸಿ ಇಂದು ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ.

ಪ್ರತಿಭಟನಾಕಾರರು ಪೊಲೀಸರಿಗೆ, ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಹಾಕಿದ್ದು, ಉತ್ತರಕ್ಕಾಗಿ ಒತ್ತಾಯಿಸಿದ್ದಾರೆ.

ಸಿಎಎ ವಿರುದ್ಧ ವಿದ್ಯಾರ್ಥಿಗಳ ನಾಟಕ ಮಾಡಿದ್ದಕ್ಕೆ ಬಿತ್ತು ಕೇಸ್!

ಮಕ್ಕಳು ನಾಟಕ ಪ್ರದರ್ಶನ ಮಾಡಿದಕ್ಕಾಗಿ ಅವರ ತಾಯಿಯನ್ನು ಹಾಗು ಶಿಕ್ಷಕಿಯರನ್ನು ಬಂಧಿಸಿದ್ದಾರಲ್ಲ, ವ್ಯವಸ್ಥೆಯನ್ನು ಪ್ರಶ್ನಿಸುವ ಮಕ್ಕಳಿಗೆ ಕರ್ನಾಟಕ ಪೊಲೀಸರು ಭಯಪಡುತ್ತಾರೆಯೇ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

ನಾಟಕ ಮಾಡುವುದು ದೇಶದ್ರೋಹ ಹೇಗಾಗುತ್ತದೆ?

ನಾಟಕ ಮಾಡುವುದು ದೇಶದ್ರೋಹ ಹೇಗಾಗುತ್ತದೆ?

ಪ್ರಸ್ತುತ ಕಾನೂನಿನ ಪ್ರಕಾರ ದೇಶದ್ರೋಹ ಯಾವುದು ಎಂಬುದರ ಪರೀಕ್ಷೆಯನ್ನು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಪದಗಳು ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ಸರ್ಕಾರಕ್ಕೆ ದ್ವೇಷವನ್ನು ಉಂಟುಮಾಡುವ ಉದ್ದೇಶ ಮತ್ತು ಪ್ರವೃತ್ತಿಯನ್ನು ಹೊಂದಿದ್ದರೆ ಮಾತ್ರ ದೇಶದ್ರೋಹವನ್ನು ವಿಧಿಸಬಹುದು. ಸರ್ಕಾರದ ನೀತಿಯನ್ನು ಟೀಕಿಸುವ 10 ವರ್ಷದ ಮಕ್ಕಳು ಜಾರಿಗೆ ತಂದ ಶಾಲಾ ನಾಟಕವು ಈ ಮಾನದಂಡವನ್ನು ಹೇಗೆ ಪೂರೈಸುತ್ತದೆ? ಎಂಬ ಪ್ರಶ್ನೆ ಎಸೆದಿದ್ದಾರೆ.

ಬೀದರ್; ಮೋದಿಗೆ ಅವಮಾನ; ಶಿಕ್ಷಣ ಸಂಸ್ಥೆ ಮೇಲೆ ಕೇಸು

ಮಕ್ಕಳನ್ನು ಐದು ದಿನ ಹೇಗೆ ಪ್ರಶ್ನೆ ಮಾಡಿದಿರಿ?

ಮಕ್ಕಳನ್ನು ಐದು ದಿನ ಹೇಗೆ ಪ್ರಶ್ನೆ ಮಾಡಿದಿರಿ?

ಕಾನೂನಿನ ಯಾವ ಕಾರ್ಯವಿಧಾನದಡಿಯಲ್ಲಿ, ಸುಮಾರು 9 ರಿಂದ 11 ವರ್ಷ ವಯಸ್ಸಿನ ಮಕ್ಕಳನ್ನು 5 ದಿನಗಳಲ್ಲಿ ಹಲವಾರು ಗಂಟೆಗಳ ಕಾಲ ಪ್ರಶ್ನಿಸಲಾಗುತ್ತದೆ? ಮಕ್ಕಳಿಗೆ ಉಂಟಾದ ಆಘಾತಕ್ಕೆ ಯಾರು ಉತ್ತರಿಸುತ್ತಾರೆ? ಎಂದು ಪೊಲೀಸರ ಕ್ರಮವನ್ನು ಪ್ರಶ್ನಿಸಿದ್ದಾರೆ.

ಮನೆಗೆಲಸದ ಮಹಿಳೆ ಮೇಲೆ ದೇಶದ್ರೋಹದ ಪ್ರಕರಣ!

ಮನೆಗೆಲಸದ ಮಹಿಳೆ ಮೇಲೆ ದೇಶದ್ರೋಹದ ಪ್ರಕರಣ!

ಇಬ್ಬರು ಮಹಿಳೆಯರು, ಅವರಲ್ಲಿ ಒಬ್ಬರು ಮನೆಕೆಲಸ, ಅವರಲ್ಲಿ ಒಬ್ಬ ಶಿಕ್ಷಕಿ, ಅವರನ್ನು ಏಕೆ ಬಂಧಿಸಲಾಯಿತು ? ಅವರಿಂದ ಯಾವ ಭದ್ರತಾ ಬೆದರಿಕೆ ಇದೆ ? ಎಂದಿದ್ದಾರೆ ಪ್ರತಿಭಟನಕಾರರು.

ಸರ್ಕಾರವು ವಾಕ್ ಸ್ವಾತಂತ್ರ್ಯ ಪ್ರೋತ್ಸಾಹಿಸಬೇಕು

ಸರ್ಕಾರವು ವಾಕ್ ಸ್ವಾತಂತ್ರ್ಯ ಪ್ರೋತ್ಸಾಹಿಸಬೇಕು

ಸರ್ಕಾರವು ವಾಕ್ ಸ್ವಾತಂತ್ರ್ಯವನ್ನು ರಕ್ಷಿಸುವುದಷ್ಟೇ ಅಲ್ಲ, ಅದನ್ನು ಸಕ್ರಿಯವಾಗಿ ಪ್ರೋತ್ಸಾಹಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕರ್ನಾಟಕ ಪೊಲೀಸರು ಸುಪ್ರೀಂ ಕೋರ್ಟ್‌ನ ಆದೇಶಗಳಿಗೆ ವಿರುದ್ಧವಾಗಿ ಏಕೆ ವರ್ತಿಸುತ್ತಿದ್ದಾರೆ? ಎಂದು ಸರ್ಕಾರದ ದಮನಕಾರಿ ನೀತಿಯನ್ನು ಪ್ರಶ್ನೆ ಮಾಡಿದ್ದಾರೆ.

ಜೈಲಿಗೆ ಭೇಟಿ ನೀಡಿದ್ದ ಕಾಂಗ್ರೆಸ್‌ ನಾಯಕರು

ಜೈಲಿಗೆ ಭೇಟಿ ನೀಡಿದ್ದ ಕಾಂಗ್ರೆಸ್‌ ನಾಯಕರು

ಎರಡು ದಿನ ಹಿಂದಷ್ಟೆ ಬೀದರ್ ಜೈಲಿಗೆ ಭೇಟಿ ನೀಡಿದ್ದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಹಾಗೂ ಇತರರು ದೇಶದ್ರೋಹ ಪ್ರಕರಣದಡಿ ಬಂಧನಕ್ಕೆ ಒಳಗಾಗಿರುವ ಶಿಕ್ಷಕಿ ಮತ್ತು ಪೋಷಕಿಯನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.

English summary
Two women jailed under sedition case in Bidar following a anti CAA-NRC play. People protest in front of Karnataka police DIG office Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more