ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಗಣೇಶ ವಿಸರ್ಜನೆ: ಅಭೂತಪೂರ್ವ ಮೆರವಣಿಗೆಗೆ ಸಿದ್ಧತೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15: ಗಣೇಶ ವಿಸರ್ಜನೆ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಅಹಿತಕರ ಘಟನೆಗಳು ನಡೆದರೆ ಆಯಾ ವ್ಯಾಪ್ತಿಯ ಎಸಿಪಿ, ಡಿಸಿಪಿಗಳನ್ನೇ ಹೊಣೆ ಮಾಡುವುದಾಗಿ ಡಿಸಿಎಂ ಜಿ ಪರಮೇಶ್ವರ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೆ ಸಿಸಿಟಿವಿ ಕ್ಯಾಮರಾಗಳನ್ನು ಕೂಡ ಅಳವಡಿಸಲಾಗಿದೆ.

ಉತ್ತರ ಮತ್ತು ಪೂರ್ವ ಡಿಸಿಪಿ ವಿಭಾಗದಲ್ಲಿ ಸುಮಾರು 80 ಕ್ಕೂ ಹೆಚ್ಚು ಸಂಘಟನೆಗಳು ವಿಘ್ನೇಶ್ವರ ಉತ್ಸವ ಸಮಿತಿ ಆಶ್ರಯದಲ್ಲಿ ಸಾಮೂಹಿಕವಾಗಿ ಗಣೇಶ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಅದ್ದೂರಿ ಸ್ವರ್ಣಗೌರಿ ವ್ರತಕ್ಕೆ 16 ಸಲಹೆ: ಚಿತ್ರಮಾಹಿತಿ ಅದ್ದೂರಿ ಸ್ವರ್ಣಗೌರಿ ವ್ರತಕ್ಕೆ 16 ಸಲಹೆ: ಚಿತ್ರಮಾಹಿತಿ

ಈ ಮೆರವಣಿಗೆಯಲ್ಲಿ ಸುಮಾರು 5 ಸಾವಿರ ಮಂದಿ ಭಾಗವಹಿಸುವ ಸಾಧ್ಯತೆ ಇದೆ ಹೀಗಾಗಿ ದುಷ್ಕರ್ಮಿಗಳು ಈ ಸಂದರ್ಭವನ್ನು ದುರುಪಯೋಗ ಪಡಿಸಿಕೊಳ್ಳದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಮೆರವಣಿಗೆ ಸಾಗುವ ಮಾರ್ಗ

ಮೆರವಣಿಗೆ ಸಾಗುವ ಮಾರ್ಗ

ವಿಘ್ನೇಶ್ವರ ಉತ್ಸವ ಸಮಿತಿಯು ಎಂಜಿ ರಸ್ತೆಯಿಂದ ಮೆರವಣಿಗೆ ಆರಂಭಿಸಿ, ಮುನಿಸ್ವಾಮಪ್ಪ ರಸ್ತೆ, ಶಿವಣ್ಣ ಸರ್ಕಲ್, ಜೆಸಿ ನಗರ ಮುಖ್ಯರಸ್ತೆ ಮಾರ್ಗವಾಗಿ ಟಿಆರ್ ಟಿಸಿ ಜಂಕ್ಷನ್ ವರೆಗೆ ಮೆರವಣಿಗೆ ಹೊರಟು ಅಂತಿಮವಾಗಿ ಹಲಸೂರು ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ವಿಸರ್ಜನೆಯ ಬಳಿಕವೂ ಗಿಡವಾಗಿ ನೆಲೆ ನಿಲ್ಲುವ ಪರಿಸರ ಸ್ನೇಹಿ ಗಣಪ ವಿಸರ್ಜನೆಯ ಬಳಿಕವೂ ಗಿಡವಾಗಿ ನೆಲೆ ನಿಲ್ಲುವ ಪರಿಸರ ಸ್ನೇಹಿ ಗಣಪ

ಮದ್ಯ ನಿಷೇಧಿತ ಪ್ರದೇಶ

ಮದ್ಯ ನಿಷೇಧಿತ ಪ್ರದೇಶ

ಜೆಸಿನಗರ, ಆರ್ ಟಿ ನಗರ, ಹೆಬ್ಬಾಳ, ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಮದ್ಯದಂಗಡಿಗಳು, ಬಾರ್ ಮತ್ತು ವೈನ್ ಶಾಪ್ ಬಂದ್ ಮಾಡಲು ಸೂಚಿಸಲಾಗಿದೆ. ಕೆಜಿ ಹಳ್ಳಿ, ಡಿಜೆ ಹಳ್ಳಿ, ಪುಲಕೇಶಿನಗರ, ಭಾರತೀನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೂಡ ಎಣ್ಣೆ ಬಂದ್ ಆಗಲಿದೆ.

ಗೌರಿ - ಗಣೇಶನನ್ನು ಬರಮಾಡಿಕೊಳ್ಳಲು ಸಜ್ಜಾದ ಸಾಂಸ್ಕೃತಿಕ ನಗರಿ ಗೌರಿ - ಗಣೇಶನನ್ನು ಬರಮಾಡಿಕೊಳ್ಳಲು ಸಜ್ಜಾದ ಸಾಂಸ್ಕೃತಿಕ ನಗರಿ

ಪೊಲೀಸರ ಬಳಿ ಇರುತ್ತೆ ಗುಪ್ತ ಕ್ಯಾಮರಾಗಳು

ಪೊಲೀಸರ ಬಳಿ ಇರುತ್ತೆ ಗುಪ್ತ ಕ್ಯಾಮರಾಗಳು

ಗಣೇಶ ವಿಸರ್ಜನೆಯ ಸಂಭ್ರಮವನ್ನು ಹಾಳು ಮಾಡಲು ಸಾಕಷ್ಟು ಮಂದಿ ಕಾಯುತ್ತಿರುತ್ತಾರೆ, ಅಂತವರ ಮೇಲೆ ನಿಗಾ ಇರಿಸಲು ಪೊಲೀಸರು ಗುಪ್ತ ಕ್ಯಾಮರಾವನ್ನು ಇರಿಸಿದ್ದಾರೆ, ಅಷ್ಟೇ ಅಲ್ಲದೆ ಪೊಲೀಸರು ಮಫ್ತಿಯಲ್ಲಿ ಗಸ್ತು ತಿರುತ್ತಿರುತ್ತಾರೆ.

 ಒಂದೇ ದಿನದಲ್ಲಿ 1.69ಲಕ್ಷ ಗಣೇಶ ಮೂರ್ತಿಗಳ ವಿಸರ್ಜನೆ

ಒಂದೇ ದಿನದಲ್ಲಿ 1.69ಲಕ್ಷ ಗಣೇಶ ಮೂರ್ತಿಗಳ ವಿಸರ್ಜನೆ

ಒಂದೇ ದಿನದಲ್ಲಿ ಬೆಂಗಳೂರಲ್ಲಿ 1.69 ಲಕ್ಷ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಕೆರೆ, ಪುಷ್ಕರಣಿ, ಮೊಬೈಲ್ ಟ್ಯಾಂಕ್ ಗಳು ಮತ್ತು ತಾತ್ಕಾಲಿಕ ಟ್ಯಾಂಕ್ ಗಳಲ್ಲಿ ಗುರುವಾರ ಒಂದೇ ದಿನಕ್ಕೆ ಒಂದೂವರೆ ಲಕ್ಷ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ಗಣೇಶ ಮೂರ್ತಿಗಳ ವಿಸರ್ಜನೆಗೆ 22 ಕೆರೆಗಳು, 174 ಮೊಬೈಲ್ ಟ್ಯಾಂಕ್ ಗಳು ಮತ್ತು 63 ತಾತ್ಕಾಲಿಕ ಟ್ಯಾಕ್ ಗಳ ವ್ಯವಸ್ಥೆ ಮಾಡಲಾಗಿತ್ತು.

English summary
Security has been tightened in Bengaluru as Ganesha idol immersion procession will be held on September 15 evening. CCTV cameras have been installed in strategic points in Bengaluru north.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X