ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಯು ಪರೀಕ್ಷೆ: ಅರ್ಥಶಾಸ್ತ್ರ-ಭೌತಶಾಸ್ತ್ರ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಮಾರ್ಚ್ 1 : ಒಂದೆಡೆ ತುಂಬಿದ ಆತ್ಮವಿಶ್ವಾಸ, ಆದರೂ ಸಮಯ ಸಾಕಾಗುತ್ತಿಲ್ಲ ಎಂಬ ದುಗುಡ, ಇನ್ನೊಂದೆಡೆ ಈಗಾಗಲೇ ಬರೆದ ಉತ್ತರ ಸರಿ ಇದೆಯಾ ಎಂಬ ಅನುಮಾನ. ಇನ್ನೂ ಸ್ವಲ್ಪ ಬರೆಯಬಹುದಿತ್ತು ಎಂಬ ಸ್ವಗತದ ಸಮಜಾಯಿಷಿ. ಹೊರಗೆ ಮಗಳನ್ನೇ ಎದುರು ನೋಡುತ್ತಾ ಕಾತುರದಿಂದ ಕಾಯುತ್ತಿರುವ ಪಾಲಕರ ಕಣ್ಗಳು....

ರಾಜ್ಯಾದ್ಯಂತ ಗುರುವಾರ ಆರಂಭಗೊಂಡಿದ್ದ ದ್ವಿತೀಯ ವರ್ಷದ ಪದವಿಪೂರ್ವ ಪರೀಕ್ಷೆಗಳ ಮೊದಲ ದಿನದ ಸಂದರ್ಭದಲ್ಲಿ ಕಂಡುಬಂದ ಕ್ಷಣಗಳಿವು. ಇಂದು ಅರ್ಥಶಾಸ್ತ್ರ ಹಾಗೂ ಭೌತಶಾಸ್ತ್ರ ವಿಷಯಗಳ ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳಿಂದ ದುಗುಡ ಮಿಶ್ರಿತ ಸಂತಸ ಕಂಡುಬಂತು. ಕೆಲ ವಿದ್ಯಾರ್ಥಿಗಳು ತುಂಬಾ ಸಲೀಸಾಗಿತ್ತು ಎನ್ನುವಂತೆ ತಲೆ ಅಲ್ಲಾಡಿಸಿದರೆ ಇನ್ನೂ ಕೆಲವರು ಟೈಮೇ ಸಾಕಾಗಿಲ್ಲ ಮೇಡಂ ಎಂದು ಹೂಂಗುಟ್ಟಿದರು. ಇದೇ ಮೊದಲ ಬಾರಿಗೆ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಿಸಿಟಿವಿ ಅಳವಡಿಸಲಾಗಿದ್ದು, ವಿದ್ಯಾರ್ಥಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಂಡು ಬರಲಿಲ್ಲ.

ಮೈಸೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶುಭವಾಗಲಿ...ಮೈಸೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶುಭವಾಗಲಿ...

ಮಾರ್ಚ್ 2 ರಂದು ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ ನೆಸ್ ಪರೀಕ್ಷೆಗಳು ನಡೆಯಲಿವೆ.

ವಿದ್ಯಾರ್ಥಿಗಳಿಗೆ ಒಂದೆಡೆ ಖುಷಿ, ಒಂದೆಡೆ ಆತಂಕ

ವಿದ್ಯಾರ್ಥಿಗಳಿಗೆ ಒಂದೆಡೆ ಖುಷಿ, ಒಂದೆಡೆ ಆತಂಕ

ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯ ಎನ್ನುವುದಕ್ಕಿಂತ ಪರೀಕ್ಷೆ ಮುಗಿದ ಮೇಲೆ ಪೋಷಕರ ಮಾತುಗಳನ್ನು ಹೇಗೆ ಎದುರಿಸಬೇಕು ಎನ್ನುವುದೇ ದೊಡ್ಡ ಪ್ರಶ್ನೆಯಾಗಿರುತ್ತದೆ. ಮಕ್ಕಳು ಬಂದ ಮೇಲೆ ಪ್ರಶ್ನೆಪತ್ರಿಕೆ ತೆಗೆದುಕೊಂಡು ದಾರಿ ಮಧ್ಯದಲ್ಲೇ ನಿಂತು ಪಶ್ನೆ ಕೇಳುವ ತಾಯಂದಿರು ಒಂದು ಕಡೆಯಾದರೆ, ಅಷ್ಟು ಓದಿದ್ದೆ ಆದರೂ ಯಾಕೆ ಬರೆಯಲು ಸಾಧ್ಯವಾಗಿಲ್ಲ ಎನ್ನುವ ಪೋಷಕರು ಇನ್ನೊಂದು ಕಡೆ ಇದೆಲ್ಲದರ ಮಧ್ಯೆ ನೀನು ಪಾಸ್ ಆದರೆ ಸಾಕು ಅದೇ ಸಂತೋಷ ಎನ್ನುವ ಪೋಷಕರೂ ಕೂಡ ಇದ್ದಾರೆ.

ಪರೀಕ್ಷೆ ವಿಷಯಬಿಟ್ಟು ಪೋಷಕರ ಬಳಿ ಬೇರೆ ಮಾತುಗಳೇ ಇಲ್ಲ

ಪರೀಕ್ಷೆ ವಿಷಯಬಿಟ್ಟು ಪೋಷಕರ ಬಳಿ ಬೇರೆ ಮಾತುಗಳೇ ಇಲ್ಲ

ಇನ್ನು ಪರೀಕ್ಷೆಗಳು ಮುಗಿಯುವವರೆಗೂ ವಿದ್ಯಾರ್ಥಿಗಳಿಗೆ ಪುಸ್ತಕ, ಅದರಲ್ಲಿರುವ ವಿಷಯ ಬಿಟ್ಟರೆ ಪೋಷಕರ ಬಳಿ ಮಾತನಾಡಲು ಏನೂ ವಿಷಯಗಳೇ ಇರುವುದಿಲ್ಲ, ಒಂದೊಂದು ಪರೀಕ್ಷೆಯು ಮುಗಿದಂತೆ ಮತ್ತೊಂದು ಪರೀಕ್ಷೆಯನ್ನು ಎದುರಿಸುವುದು ಹೇಗೆ ಎನ್ನುವ ಗೊಂದಲದಲ್ಲೇ ಪರೀಕ್ಷೆಯನ್ನು ಬರೆಯುತ್ತಾರೆ.

ಎಷ್ಟೇನು ಕಷ್ಟವಿರಲಿಲ್ಲ ಅರ್ಥಶಾಸ್ತ್ರ ಸುಲಭ ಇತ್ತು

ಎಷ್ಟೇನು ಕಷ್ಟವಿರಲಿಲ್ಲ ಅರ್ಥಶಾಸ್ತ್ರ ಸುಲಭ ಇತ್ತು

ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಮೊದಲ ದಿನದ ಪರೀಕ್ಷೆ ಮುಗಿಸಿ ಹೊರ ಬಂದ ಕಲಾ ವಿಭಾಗದ ವಿದ್ಯಾರ್ಥಿನಿ ತುಳಸಿ ತನ್ನ ಅನುಭವ ಹೇಳಿದ್ದು ಹೀಗೆ... ವಿಷಯ ಅಷ್ಟೇನೂ ಟಫ್ ಇರಲಿಲ್ಲ. ಆದರೆ ಸಮಯ ಸಾಕಾಗಲಿಲ್ಲ ಅನಿಸಿತು. ಆದರೂ ಎಲ್ಲಾ ಪ್ರಶ್ನೆಗಳಿಗೆತೃಪ್ತಿಕರವಾಗಿ ಬರೆದಿದ್ದೇನೆ. ಕೊನೆಯ ಉತ್ತರಕ್ಕೆ ಇನ್ನಷ್ಟು ಸಮಯ ಸಿಕ್ಕಿದ್ದರೆ ಮತ್ತಷ್ಟು ವಿವರವಾಗಿ ಬರೆಯ ಬಹುದಿತ್ತು ಎಂದಳು.

ಮುಂದಿನ ವಿಯಗಳೂ ಹೀಗೆ ಇದ್ದರೆ ಸಾಕಪ್ಪ

ಮುಂದಿನ ವಿಯಗಳೂ ಹೀಗೆ ಇದ್ದರೆ ಸಾಕಪ್ಪ

ಇನ್ನು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ರೇಚಲ್ ಅತ್ಯಂತ ಆತ್ಮವಿಶ್ವಾಸದಿಂದ ಮಾತನಾಡುತ್ತ, ನಾನು ಹೇಗೆ ಪ್ರಿಪೇರ್ ಆಗಿದ್ದೇನೋ ಅದೇ ರೀತಿಯ ಪ್ರಶ್ನೆಗಳಿದ್ದವು. ಟೈಮ್ ಮ್ಯಾನೇಜ್‌ಮೆಂಟ್ ಕೂಡ ಚೆನ್ನಾಗಿಯೇ ಮಾಡಿದ್ದೀನಿ. ಮೂರು ಪ್ರಶ್ನೆಗಳಿಗೆ ಬರೆಯುವಾಗ ಸ್ವಲ್ಪ ಟ್ ಇದೆ ಎನಿಸಿತು. ಅದನ್ನು ಬಿಟ್ಟರೆ ಉಳಿದೆಲ್ಲ 85 ಅಂಕಗಳಿಗೆ ಅತ್ಯಂತ ನಿಖರ ಉತ್ತರ ಬರೆದಿದ್ದೇನೆ. ಮುಂದಿನ ನಾಲ್ಕೂ ವಿಷಯಗಳೂ ಹೀಗೆ ಆಗಬೇಕು ಎಂದು ಪ್ರಾರ್ಥಿಸಿಕೊಳ್ಳುವೆ ಎಂದಳು.

ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ: ವಿದ್ಯಾರ್ಥಿಗಳೇ ಆಲ್ ದಿ ಬೆಸ್ಟ್ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ: ವಿದ್ಯಾರ್ಥಿಗಳೇ ಆಲ್ ದಿ ಬೆಸ್ಟ್

2017-18 ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ2017-18 ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ

English summary
Deep breath taking of students after first day of second year PU exams was witnessed at many exam centers in Bengaluru on Thursday. Students were expressed mixture of happiness and tension on the exams of Physics and Economics subjects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X