ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದ್ವಿತೀಯ ಪಿಯು ಪರೀಕ್ಷೆ: 3700 ವಿದ್ಯಾರ್ಥಿಗಳು ಅನರ್ಹ!

|
Google Oneindia Kannada News

ಬೆಂಗಳೂರು, ಫೆಬ್ರವರಿ 28 : ದ್ವಿತೀಯ ಪಿಯು ಪರೀಕ್ಷೆಗಳು ಗುರುವಾರದಿಂದ ಆರಂಭವಾಗಲಿದ್ದು, ಮಾರ್ಚ್ 17 ರವರೆಗೆ ನಡೆಯಲಿದೆ. ಕನಿಷ್ಠ ಹಾಜರಾತಿ ಪಡೆಯದ 3700 ಪಿಯು ವಿದ್ಯಾರ್ಥಿಗಳು ಈ ಬಾರಿಗೆ ಪರೀಕ್ಷೆಗೆ ಅನರ್ಹರಾಗಿದ್ದಾರೆ. ಮಾ.1 ರಿಂದ17 ರವರೆಗೆ ನಡೆಯಲಿರುವ ಪರೀಕ್ಷೆಯಿಂದ ವಂಚಿತರಾಗಲಿದ್ದಾರೆ.

ಮೊದಲ ಹಂತದಲ್ಲಿ 1,700 ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿಗಳು ಮಾಹಿತಿ ಕಳುಹಿಸಿ ಕನಿಷ್ಠ ಹಾಜರಾತಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಹೀಗಾಗಿ ಅಂಥವರ ಪ್ರವೇಶ ಪತ್ರ ಮುದ್ರಿಸುವ ಗೋಜಿಗೆ ಇಲಾಖೆ ಹೋಗಿಲ್ಲ. ಇದರ ಹೊರತಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ಕೂಡ ಕನಿಷ್ಠ ಹಾಜರಾತಿ ಇಲ್ಲದವರ ಪಟ್ಟಿ ರೂಪಿಸುತ್ತಿದ್ದು ಇದರಲ್ಲಿ ಸುಮಾರು2 ಸಾವಿರ ವಿದ್ಯಾರ್ಥಿಗಳಿದ್ದಾರೆ.

2017-18 ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ2017-18 ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಕಳೆದ ವರ್ಷ 4,204 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅರ್ಹತೆ ಕಳೆದುಕೊಂಡಿದ್ದರು. ಕರ್ನಾಟಕ ಶಿಕ್ಷಣ ಕಾಯ್ದೆ ಪ್ರಕಾರ ಪ್ರತಿ ವಿಷಯದಲ್ಲೂ ಕನಿಷ್ಠ ಶೇ.75 ಹಾಜರಾತಿ ಇರಬೇಕು. ಗೈರು ಹಾಜರಾತಿಯಿಂದ ಪರೀಕ್ಷೆ ಪ್ರವೇಶ ಕಳೆದುಕೊಂಡ ವಿದ್ಯಾರ್ಥಿಗಳು ಮುಂಬರುವ ಮರು ಪರೀಕ್ಚೆಗೂ ಹಾಜರಾಗುವಂತಿಲ್ಲ. 2019 ನೇ ಸಾಲಿನ ವಾರ್ಷಿಕ ಪರೀಕ್ಷೆ ವರೆಗೆ ಕಾಯಬೇಕಿದೆ.

Second PU exams: 3,700 students not eligible to attend

ಸೂಚನೆ ನೀಡಿದರೂ ನಿರ್ಲಕ್ಷ್ಯ: ಪಿಯು ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಸೆಪ್ಟೆಂಬರ್ ನಿಂದ ಜನವರಿವರೆಗೂ ನಾಲಕು ಬಾರಿ ಹಂತ ಹಂತವಾಗಿ ಕನಿಷ್ಠ ಹಾಜರಾತಿಯ ಬಗ್ಗೆ ಸೂಚನೆ ನೀಡಲಾಗಿದೆ. ಈ ವರ್ಷ ಮೊದಲ ಬಾರಿಗೆ ಪಾಲಕರ ವಿಳಾಸಕ್ಕೂ ಪತ್ರ ರವಾನೆಯಾಗಿತ್ತು. ಕೆಲವು ಖಾಸಗಿ ಕಾಲೇಜುಗಳಲ್ಲಿ ಪಾಲಕರ ಮೊಬೈಲ್ ಸಂಖ್ಯೆಗೆ ಸಂದೇಶ ರವಾನಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಇಷ್ಟಾದರೂ ವಿದ್ಯಾರ್ಥಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ. ಶಿಖಾ ತಿಳಿಸಿದ್ದಾರೆ.

ಮೌಲ್ಯಮಾಪನ ಬಹಿಷ್ಕಾರ: ಪಿಯು ಶಿಕ್ಷಕರ ಎಚ್ಚರಿಕೆಮೌಲ್ಯಮಾಪನ ಬಹಿಷ್ಕಾರ: ಪಿಯು ಶಿಕ್ಷಕರ ಎಚ್ಚರಿಕೆ

ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿಯಲ್ಲಿ ಉಚಿತ ಪ್ರಯಾಣದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿಯಲ್ಲಿ ಉಚಿತ ಪ್ರಯಾಣ

English summary
Second year of pre university exams will be start from March 1 and this time over 3,700 students will not be able to attend due to short of minimum attendance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X