ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಮಾನ ನಿಲ್ದಾಣಕ್ಕೆ ಮೆಟ್ರೋ: ಭಾರಿ ಮೊತ್ತದ ಕಾಮಗಾರಿಗೆ ಸಂಪುಟ ಅಸ್ತು

|
Google Oneindia Kannada News

ಬೆಂಗಳೂರು, ಜನವರಿ 10: ಎರಡನೇ ಬಿ ಹಂತದ ಮೆಟ್ರೋ ಕಾಮಗಾರಿಗೆ ಸಚಿವ ಸಂಪುಟ ಸಭೆ ಇಂದು ಒಪ್ಪಿಗೆ ನೀಡಿತ್ತು. ಕಾಮಗಾರಿಗಳು ಪ್ರಾರಂಭವಾಗಲಿವೆ.

ಎರಡನೇ ಬಿ ಹಂತದ ಮೆಟ್ರೋ ಹಳಿ ನಿರ್ಮಾಣ ಕಾಮಗಾರಿಗೆ 23,093 ಕೋಟಿ ರೂಪಾಯಿ ವೆಚ್ಚದ ಅಂದಾಜು ಮಾಡಲಾಗಿದೆ. ಎರಡನೇ ಬಿ ಹಂತದಲ್ಲಿ ಮೆಟ್ರೋ ಹಳಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ.

ಟೆಂಡರ್‌ನಲ್ಲಿ ತಪ್ಪು ಮಾಹಿತಿ: ಮೆಟ್ರೋ ಗುತ್ತಿಗೆ ಕಂಪನಿಗೆ 1 ವರ್ಷ ನಿಷೇಧಟೆಂಡರ್‌ನಲ್ಲಿ ತಪ್ಪು ಮಾಹಿತಿ: ಮೆಟ್ರೋ ಗುತ್ತಿಗೆ ಕಂಪನಿಗೆ 1 ವರ್ಷ ನಿಷೇಧ

ದೀರ್ಘ ಮಾರ್ಗವಾದ ಇದು ಹಿಲಲಿಗೆ-ಬೈಯಪ್ಪನಹಳ್ಳಿ-ಯಲಹಂಕ-ದೇವನಹಳ್ಳಿ ಗಳನ್ನು ಮೆಟ್ರೋ ಸಂಪರ್ಕಿಸಲಿದೆ. ಇದೇ ಮಾರ್ಗವು ವಿಮಾನ ನಿಲ್ದಾಣಕ್ಕೂ ಪ್ರಯಾಣಿಕರನ್ನು ಹೊತ್ತೊಯ್ಯಲಿದೆ. ಇದು ಕಾರಿಡಾರ್ 4 ಆಗಿದ್ದು ಇದರ ಹಳಿಯ ಉದ್ದ 36 ಕಿ.ಮೀ ಇರಲಿದೆ. ಇದರಲ್ಲಿ 29 ನಿಲ್ದಾಣಗಳು ಇರಲಿವೆ.

35.75 ಕಿ.ಮೀ ಉದ್ದದ ಮೊದಲನೇ ಕಾರಿಡಾರ್‌

35.75 ಕಿ.ಮೀ ಉದ್ದದ ಮೊದಲನೇ ಕಾರಿಡಾರ್‌

ಎರಡನೇ ಬಿ ಹಂತದ ಕಾರಿಡಾರ್ 1 ರಲ್ಲಿ ಕೆಂಗೇರಿ-ಕೆಎಸ್‌ಆರ್ ಬೆಂಗಳೂರು- ಬೆಂಗಳೂರು ಕಂಟೋನ್ಮೆಂಟ್-ಬೈಯಪ್ಪನಹಳ್ಳಿ-ಕೆ.ಆರ್.ಪುರಂ-ವೈಟ್‌ಫೀಲ್ಡ್‌ ಮಾರ್ಗದಲ್ಲಿ ಸಂಚರಿಸಲಿದೆ. ಇದರ ಒಟ್ಟು ಉದ್ದ 35.75 ಕಿ.ಮೀ ಇರಲಿದೆ. ಈ ಮಾರ್ಗದಲ್ಲಿ 11 ನಿಲ್ದಾಣಗಳು ಇರಲಿವೆ.

24 ಕಿ.ಮೀಯ ಎರಡನೇ ಕಾರಿಡಾರ್‌

24 ಕಿ.ಮೀಯ ಎರಡನೇ ಕಾರಿಡಾರ್‌

ಎರಡನೇ ಕಾರಿಡಾರ್‌ ಕೆಎಸ್‌ಆರ್ ಬೆಂಗಳೂರು-ಯಶವಂತಪುರ-ಲೊಟ್ಟೆಗೊಲ್ಲಹಳ್ಳಿ-ಕೊಡಿಗೇಹಳ್ಳಿ-ಯಲಹಂಕ-ರಾಜನಕುಂಟೆ ಮಾರ್ಗಗಳಲ್ಲಿ ಮೆಟ್ರೋ ನಿರ್ಮಾಣವಾಗಲಿದೆ. ಈ ಮಾರ್ಗವು 24.88 ಕಿ.ಮೀ ಇರಲಿದೆ. ಈ ಮಾರ್ಗದಲ್ಲಿ 9 ನಿಲ್ದಾಣಗಳು ಇರಲಿವೆ.

ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಮ್ಮ ಮೆಟ್ರೋ ಮಾರ್ಗ ಬದಲುನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಮ್ಮ ಮೆಟ್ರೋ ಮಾರ್ಗ ಬದಲು

ಮೂರನೇ ಕಾರಿಡಾರ್‌ ಎಲ್ಲೆಲ್ಲಿ

ಮೂರನೇ ಕಾರಿಡಾರ್‌ ಎಲ್ಲೆಲ್ಲಿ

ಮೂರನೇ ಕಾರಿಡಾರ್‌ನಲ್ಲಿ ನೆಲಮಂಗಲ-ಚಿಕ್ಕಬಾಣಾವಾರ-ಯಶವಂತಪುರ-ಮತ್ತಿಕೆರೆ-ಲೊಟ್ಟೆಗೊಲ್ಲಹಳ್ಳಿ-ಹೆಬ್ಬಾಳ-ಬಾಣಸವಾಡಿ-ಬೈಯಪ್ಪನಹಳ್ಳಿ ಮಾರ್ಗಗಗಳಲ್ಲಿ ಮೆಟ್ರೊ ಹಳಿ ನಿರ್ಮಾಣವಾಗಲಿದೆ. ಇದರ ಒಟ್ಟು ಉದ್ದ 38.94 ಕಿ.ಮೀ ಇರಲಿದೆ. ಈ ಮಾರ್ಗದಲ್ಲಿ 24 ನಿಲ್ದಾಣಗಳು ಇರಲಿವೆ.

ಭೂ ಒತ್ತುವರಿ ಆರಂಭ

ಭೂ ಒತ್ತುವರಿ ಆರಂಭ

ಇದು ಬಹು ಭಾರಿ ಗಾತ್ರದ ಮೆಟ್ರೋ ಕಾಮಗಾರಿ ಆಗಿರಲಿದ್ದು, ವೈಟ್‌ಫೀಲ್ಡ್‌ ಹೊರತಾಗಿ ಇನ್ನಾವ ಮಾರ್ಗಗಳಲ್ಲಿಯೂ ಸಹ ಮೆಟ್ರೋ ಕಾಮಗಾರಿ ಪ್ರಾರಂಭವಾಗಿಲ್ಲ. ಎರಡನೇ ಬಿ ಹಂತದ ಕಾಮಗಾರಿ ದೀರ್ಘವಾಗಿರಲಿದ್ದು, ಭೂ ಒತ್ತುವರಿ ಕಾರ್ಯ ಮಾತ್ರವೇ ಈಗ ಆರಂಭವಾಗಿದೆ.

ನಿಧಾನಗತಿಯ ಮೆಟ್ರೋ ಕಾಮಗಾರಿ ಚುರುಕುಗೊಳಿಸಲು ಹೊಸ ವಿಧಾನನಿಧಾನಗತಿಯ ಮೆಟ್ರೋ ಕಾಮಗಾರಿ ಚುರುಕುಗೊಳಿಸಲು ಹೊಸ ವಿಧಾನ

English summary
Karnataka Cabinet gives approval second B stage metro construction. Second B stage has 4 corridor construction. It will be a 29,093 crore big project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X