ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸ್ ಠಾಣೆ ಮುಂಭಾಗ ನಿಲ್ಲಿಸಿದ್ದ ಬೈಕ್‌ನ್ನೇ ಕದ್ದ ಚಾಲಾಕಿ ಕಳ್ಳ

|
Google Oneindia Kannada News

ಬೆಂಗಳೂರು, ಫೆಬ್ರವರಿ 9: ನೀವು ನಿಮ್ಮ ವಾಹನಗಳನ್ನು ನಿಲ್ಲಿಸುವಾಗ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಮನೆಯ ಎದುರಾಗಿರಲಿ, ದೇವಸ್ಥಾನದ ಎದುರಾಗಿರಲಿ, ಪೊಲೀಸ್ ಠಾಣೆ ಎದುರೇ ಆಗಿದ್ದರೂ ಎಚ್ಚರಿಕೆಯಿಂದಿರಬೇಕು.

ಇತ್ತೀಚಿನ ದಿನಗಳಲ್ಲಿ ನಿಲ್ಲಿಸಿದ ವಾಹನಗಳನ್ನು ಕದಿಯುವ ಕಳ್ಳರು ಹೆಚ್ಚಾಗುತ್ತಿದ್ದಾರೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆ ಮುಂಭಾಗ ನಿಲ್ಲಿಸಿದ್ದ ಬೈಕ್‌ನ್ನೇ ಕದ್ದು ಪರಾರಿಯಾಗಿದ್ದಾರೆ. ಆದರೆ ಕಳ್ಳತನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾಗಡಿ ರಸ್ತೆಯ ರಂಗನಾಥಪುರದ ಬಿಜಿ ಲಿಖಿತೇಶ್ ಕುಮಾರ್ ಎಂಬುವವರು ಬೆಂಗಳೂರು ಟರ್ಫ್ ಕ್ಲಬ್ ಬಳಿ ಇರುವ ಪಾರ್ಕಿಂಗ್ ಪ್ರದೇಶದಲ್ಲಿ ಬೈಕ್ ನಿಲ್ಲಿಸಿದ್ದರು.

ಪ್ರಮುಖ ಹೆದ್ದಾರಿಗಳಲ್ಲಿ ಶೀಘ್ರ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಕೇಂದ್ರ ಪ್ರಮುಖ ಹೆದ್ದಾರಿಗಳಲ್ಲಿ ಶೀಘ್ರ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಕೇಂದ್ರ

ಮೂರು ಗಂಟೆಯ ಬಳಿಕ ಆ ಸ್ಥಳಕ್ಕೆ ಬಂದು ನೋಡಿದರೆ ಆ ಸ್ಥಳದಲ್ಲಿ ಬೈಕ್ ಇರಲಿಲ್ಲ. ಪಾರ್ಕಿಂಗ್ ಜಾಗದಲ್ಲಿದ್ದ ಸೆಕ್ಯುರಿಟಿಯನ್ನು ಕೇಳಿದಾಗ ಅವರಿಗೆ ಏನು ತಿಳಿದಿಲ್ಲ ಎಂದು ಗೊತ್ತಾಗಿದೆ. ಬಳಿಕ ಇಡೀ ಪಾರ್ಕಿಂಗ್ ಪ್ರದೇಶವನ್ನೆಲ್ಲಾ ಜಾಲಾಡಿದರೂ ಬೈಕ್ ಕಾಣಿಸಲಿಲ್ಲ. ಬಳಿಕ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Scooter stolen from parking lot in front of police station

ಸಿಸಿಟಿವಿ ಗಮನಿಸಿದಾಗ ತಾಜ್ ವೆಸ್ಟೆಂಡ್ ಹೋಟೆಲ್ ಕಡೆಯಿಂದ ಬಂದಂತಹ ವ್ಯಕ್ತಿ ಈ ಬೈಕ್‌ನ್ನು ಕಳ್ಳತನ ಮಾಡಿರುವುದು ಬಹಿರಂಗಗೊಂಡಿದೆ. ಆ ಪ್ರದೇಶದಲ್ಲಿ ಹಣ ಕೊಟ್ಟು ವಾಹನವನ್ನು ಪಾರ್ಕ್ ಮಾಡಬೇಕು ಆದರೆ ಆ ಹಣಕ್ಕೆ ಯಾವುದೇ ರಶೀದಿ ನೀಡುವುದಿಲ್ಲ ಎಂದು ಆರೋಪಿಸಿದ್ದಾರೆ.

English summary
A parking area may not be safe enough to park vehicle even if it is in front of a police station. a smart theif stole a scooter from a parking lot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X