ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಹಿತಿ ತಂತ್ರಜ್ಞಾನದ ತಾಯಿ ಬೆಂಗಳೂರು: ಪರಿಕ್ಕರ್

|
Google Oneindia Kannada News

ಬೆಂಗಳೂರು, ಜ. 1: ಬೆಂಗಳೂರು ಭಾರತದ ತಂತ್ರಜ್ಞಾನ ಮತ್ತು ಸಂಶೋಧನೆಯ ಮೂಲ ನೆಲೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಬಣ್ಣಿಸಿದರು.

ಅದಮ್ಯ ಚೇತನ ಸಂಸ್ಥೆ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ 'ಅದಮ್ಯ ಚೇತನ ಸೇವಾ ಉತ್ಸವ' ದಲ್ಲಿ ಮಾತನಾಡಿ, 2014 ಕಳೆದು ಹೋಗಿದೆ, ಆದರೆ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಚ್ಚಳಿಯದ ಸಾಧನೆ ಮಾಡಿದೆ. ಮಂಗಳಯಾನದ ಯಶಸ್ಸಿನ ಮೂಲ ಬೀಜ ಬೆಂಗಳೂರಿನದ್ದು. ಸಂಶೋಧನೆಯ ಕೊಂಡಿ ಉದ್ಯಾನನಗರಿ ಎಂದು ಹೇಳಿದರು.[ಮಂಗಳನ ಅಂಗಳದಲ್ಲಿ ಕೆರೆ!]

parikkar

ಮಂಗಳನ ಅಂಗಳ ತಲುಪಿದ್ದು ಸಾಮಾನ್ಯ ಸಂಗತಿಯಲ್ಲ. ಮಂಗಳಯಾನಕ್ಕೆ ನೂರು ದಿನ ತುಂಬಿದ್ದು ಅದರ ಯಶಸ್ಸಿಗೆ ಕಾರಣರಾದ ವಿಜ್ಞಾನಿಗಳನ್ನು ಸನ್ಮಾನಿಸಿದ್ದು ನಿಜಕ್ಕೂ ಸಂತಸ ತಂದಿದೆ ಎಂದು ಹೇಳಿದರು.

ವಿಜ್ಞಾನಿ ಪ್ರೊ ಯು.ಆರ್. ರಾವ್ ಮಾತನಾಡಿ ಭಾರತ ಬಡದೇಶವಲ್ಲ. ನಮ್ಮನ್ನು ಹಾಗೆ ಚಿತ್ರಿಸಲಾಗುತ್ತಿದೆ. ದೇಶದ ಉತ್ಪಾದನಾ ಪ್ರಮಾಣ ಹೆಚ್ಚಳ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.[ಇಸ್ರೋ ಅಧ್ಯಕ್ಷ ಸ್ಥಾನದಿಂದ ರಾಧಾಕೃಷ್ಣನ್ ನಿವೃತ್ತಿ]

parikkar 2

ಸೂತ್ತುರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೇಂದ್ರ ರಸಗೊಬ್ಬರ ಸಚಿವ ಅನಂತ ಕುಮಾರ್, ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ನಿಘಂಟು ತಜ್ಞ ಪ್ರೊ. ಜಿ.ವೆಂಕಟಸುಬ್ಬಯ್ಯ ಹಾಜರಿದ್ದರು. ಡಾ. ಕೋಟೆ ಹರಿನಾರಾಯಣ, ಡಾ. ಸಿಜಿಕೆ ನಾಯರ್, ಡಾ. ಶಿವಕುಮಾರ್, ಡಾ. ತಮಿಳ್ ಮಣಿ ಮುಂತಾದ ವಿಜ್ಞಾನಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
parikkar

ಅದಮ್ಯ ಚೇತನ ಸಂಸ್ಥೆ
ಅನ್ನ-ಅಕ್ಷರ-ಆರೋಗ್ಯ ಎಂಬ ಧ್ಯೇಯದೊಂದಿಗೆ ಅದಮ್ಯ ಚೇತನ ಸಂಸ್ಥೆ ಕಳೆದ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸಚಿವ ಅನಂತಕುಮಾರ್ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸಂಸ್ಥೆ ಸರ್ಕಾರದ ನೆರವಿನಲ್ಲಿ ಪ್ರತಿದಿನ 2 ಲಕ್ಷ ಮಕ್ಕಳಿಗೆ ಬಿಸಿಯೂಟ ಒದಗಿಸುತ್ತಿದೆ. ಆಟ ಪಾಠದ ಜತೆಗೆ ಆರೋಗ್ಯ, ಚಿಣ್ಣರ ಚೇತನ, ಗೋಡೆ ಪತ್ರಿಕೆ, ಗ್ರಾಮೀಣಾಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿಯೂ ಸೇವೆ ಸಲ್ಲಿಸುತ್ತಿದೆ. ಬೆಂಗಳೂರು, ಹುಬ್ಬಳ್ಳಿ. ಕಲಬುರಗಿ ಮತ್ತು ಜೋಧಪುರದಲ್ಲಿ ಸಂಸ್ಥೆಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

English summary
'Bengaluru is the real origin of information and technology. And mother land of Indian space research' said by Manohar Parikkar, union minister for defense. He attend the programme of 'Adamya Chetana Seva Utsva' at Basavanagudi national college stadium on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X