ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುನ್ನೋಟದಿಂದ 'ಇಗೋ ವಿಜ್ಞಾನ' ಬರಹದ ಸ್ಪರ್ಧೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 10: ಮುನ್ನೋಟವು 'ಇಗೋ ವಿಜ್ಞಾನ' ಎಂಬ ಶೀರ್ಷಿಕೆಯಲ್ಲಿ ವಿಜ್ಞಾನ ಬರಹದ ಸ್ಪರ್ಧೆಯನ್ನು ಆಯೋಜಿಸಿದೆ.

ತಾಯ್ನುಡಿಯಲ್ಲಿ ಕಲಿಕೆಗೆ ಒತ್ತು ಕೊಡುತ್ತ ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಜ್ಞಾನ ಸೃಷ್ಟಿಯತ್ತ ಕೆಲಸ ಮಾಡುತ್ತಿರುವ ಮುನ್ನೋಟ ಟ್ರಸ್ಟ್ ಈ ಬಾರಿಯ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ "ಇಗೋ ವಿಜ್ಞಾನ" ಎನ್ನುವ ವಿಜ್ಞಾನ-ತಂತ್ರಜ್ಞಾನ ಬರಹದ ಸ್ಪರ್ಧೆಯನ್ನು ಏರ್ಪಡಿಸಿದೆ.

ಇದರ ಅನ್ವಯ ಪ್ರಪಂಚದ ಯಾವುದೇ ಮೂಲೆಯಲ್ಲಿರುವ, ಯಾವುದೇ ವಯಸ್ಸಿನ ಕನ್ನಡಿಗರಾದರೂ ಸರಿ ಈ ಹೊತ್ತಿನ ವಿಜ್ಞಾನ ಪ್ರಪಂಚದ ಎಂಟು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಆಯ್ದುಕೊಂಡು, ಅದರ ಮೇಲೆ ಸಾವಿರ ಪದಗಳ ಒಂದು ಬರಹವನ್ನು ಬರೆದು [email protected] ಮಿಂಚೆ ವಿಳಾಸಕ್ಕೆ ಕಳಿಸಬೇಕು.

Science Writing Competition By Munnota Book Store

ಆಯ್ಕೆಯಾದ ಮೊದಲೆರಡು ಬರಹಗಳಿಗೆ ಹತ್ತು ಸಾವಿರ ಹಾಗೂ ಐದು ಸಾವಿರ ರೂಪಾಯಿಗಳ ಬಹುಮಾನವಿದೆ.
ಬರಹ ಮಾಡಬೇಕಾದ ಎಂಟು ವಿಷಯಗಳು:
1- ಮೂಲ ವಿಜ್ಞಾನದ ಮುಂದಿನ ದಿನಗಳು ಹೇಗಿರಲಿವೆ?
2- ಸಾರಿಗೆ ವ್ಯವಸ್ಥೆಯಲ್ಲಿ ಆಗಲಿರುವ ಬದಲಾವಣೆಗಳೇನು?
3- ಅರಿವಿನ ಜಗತ್ತಿಗೆ ಗಣಿತದ ಹೊಸ ಕೊಡುಗೆಗಳು ಹೇಗಿರಲಿವೆ?
4- ವೈದ್ಯಕೀಯ ಕ್ಷೇತ್ರದಲ್ಲಿ ಆಗಲಿರುವ ಮುಂದಿನ ಬದಲಾವಣೆಗಳೇನು?
5-ಸಂಪರ್ಕ ವ್ಯವಸ್ಥೆ ಮುಂದೆ ಹೇಗೆ ಬದಲಾಗಲಿದೆ?
6-ಬೇಸಾಯದಲ್ಲಿ ಆಗಬೇಕಿರುವ ಸುಧಾರಣೆಗಳೇನು?
7- ಬಾನಂಗಳದ ಮುಂದಿನ ದಿನಗಳು ಹೇಗಿರಲಿವೆ?
8-ಯಾವ ತಂತ್ರಜ್ಞಾನಗಳು ಕ್ರಾಂತಿ ಹುಟ್ಟಿಸಲಿವೆ?. ಬರಹವನ್ನು ಕಳುಹಿಸಲು 22 ಫೆಬ್ರವರಿ 2020 ಕೊನೆಯ ದಿನಾಂಕವಾಗಿರಲಿದೆ.

English summary
Munnota Book Store organized a science writing competition titled 'Ego Science' .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X