ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೈನ್ಸ್ ಗ್ಯಾಲರಿ ಬೆಂಗಳೂರಿನಲ್ಲಿ ಮನುಷ್ಯನ ಭಾವನೆ ಆಲೋಚನೆಗಳ ಡಿಜಿಟಲ್ ಪ್ರದರ್ಶನ

|
Google Oneindia Kannada News

ಬೆಂಗಳೂರು, ಏಪ್ರಿಲ್ 19 : ಸೈನ್ಸ್‌ ಗ್ಯಾಲರಿ ಬೆಂಗಳೂರು ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಮಾನವನ ಮನಸ್ಸು, ಆಲೋಚನೆ ಮತ್ತು ಭಾವನೆಯ ಸಂಕೀರ್ಣತೆಗಳ ಕುರಿತಾಗಿ ಡಿಜಿಟಲ್ ಪ್ರದರ್ಶನವನ್ನ ಈಗಾಗಲೇ ಏಪ್ರಿಲ್ 8 ರಿಂದಲೇ ಆರಂಭಿಸಿದ್ದು, ಮೇ 15ರವರೆಗೆ https://psyche.scigalleryblr.orgನಲ್ಲಿ ವೀಕ್ಷಿಸಲು ಲಭ್ಯವಿರುತ್ತದೆ ಅಂತ ತಿಳಿಸಿದೆ. ಈ ಪ್ರದರ್ಶನವು ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸಂದರ್ಭಗಳಲ್ಲಿ ಮಾನವ ಮನಸ್ಸಿನ ಸಂಕೀರ್ಣತೆಗಳನ್ನ ಪರಿಶೋಧಿಸುತ್ತದೆ. ಈ ಕಾರ್ಯಕ್ರಮವನ್ನು ನಿಮಾನ್ಸ್‌, ವೆಲ್‌ಕಮ್ ಟ್ರಸ್ಟ್ ಇಂಡಿಯಾ ಅಲಯನ್ಸ್‌, ದಿ ವೆಲ್‌ಬೀಯಿಂಗ್ ಪ್ರಾಜೆಕ್ಟ್‌ ಮತ್ತು ಮ್ಯೂಸಿಯಂ ಡಾ. ಗಿಸ್ಕೈನ್ ಘೆಂಟ್ ಸಹಯೋಗದಲ್ಲಿ ಈ ಡಿಜಿಟಲ್ ಪ್ರದರ್ಶನವನ್ನ ಆಯೋಜಿಸಲಾಗಿದೆ.

ಸೈನ್ಸ್‌ ಗ್ಯಾಲರಿ ಬೆಂಗಳೂರು ಯುವ ವಯಸ್ಕರನ್ನು ಗುರಿಯಾಗಿಸಿಕೊಂಡು ಆಗಿರುವ ಸಂಶೋಧನಾ ಆಧಾರಿತ ಸಾರ್ವಜನಿಕ ಸಂಸ್ಥೆಯಾಗಿದೆ. ಇದನ್ನ ಕರ್ನಾಟಕ ಸರ್ಕಾರ ಮತ್ತು ಮೂರು ಶೈಕ್ಷಣಿಕ ಪಾಲುದಾರರ ಬೆಂಬಲದೊಂದಿಗೆ ಸ್ಥಾಪಿಸಲಾಗಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್, ಮತ್ತು ಸೃಷ್ಟಿ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿ ಈ ಎರಡು ಸಂಸ್ಥೆಯು ಗ್ಲೋಬಲ್ ಸೈನ್ಸ್ ಗ್ಯಾಲರಿ ನೆಟ್‌ವರ್ಕ್‌ನ ಸದಸ್ಯರಾಗಿದ್ದಾರೆ. ಇನ್ನು ಈ ಸೈನ್ಸ್‌ ಗ್ಯಾಲರಿಗಳು ಅಟ್ಲಾಂಟಾ, ಡೆಟ್ರಾಯಿಟ್, ಡಬ್ಲಿನ್, ಲಂಡನ್, ಮೆಲ್ಬೋರ್ನ್, ರೋಟರ್‌ಡ್ಯಾಮ್ ಮತ್ತು ಬರ್ಲಿನ್‌ನಲ್ಲಿಯೂ ಇದೆ.

ಸೈನ್ಸ್ ಗ್ಯಾಲರಿ ಬೆಂಗಳೂರು ಸಂಸ್ಥೆಯು ವಿಜ್ಞಾನವನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಭಾಷೆಯ ಸಮಸ್ಯೆಯಿಂದ ಉಂಟಾಗುವ ಸಮಸ್ಯೆಗಳನ್ನ ತಪ್ಪಿಸಲು ಬೇರೆ ಬೇರೆ ಭಾಷೆಗಳಲ್ಲೂ ಡಿಜಿಟಲ್ ಪ್ರದರ್ಶನ ನೀಡಲು ಮುಂದಾಗಿದೆ. ಈ ಮೂಲಕ ವಿವಿಧ ಭಾಷೆಯ ಪ್ರೇಕ್ಷಕರನ್ನ ಈ ಕಾರ್ಯಕ್ರಮದಲ್ಲಿ ಒಳಗೊಳ್ಳಲು ಸಂಸ್ಥೆ ಈ ಯೋಜನೆ ಮಾಡಿದೆ. ಸದ್ಯಕ್ಕೆ ಸೈನ್ಸ್‌ ಗ್ಯಾಲರಿಗೆ ಸಂಬಂಧಿಸಿದ 6 ಚಲನಚಿತ್ರಗಳು ಹಾಗೂ 10 ಡಿಜಿಟಲ್ ಪ್ರದರ್ಶನಗಳನ್ನ ನೀಡಲಾಗುತ್ತಿದೆ. ಇದರ ಜೊತೆಗೆ ಕಾರ್ಯಾಗಾರಗಳು, ಮಾಸ್ಟರ್‌ಕ್ಲಾಸ್‌ಗಳು ಮತ್ತು ಸಾರ್ವಜನಿಕ ಉಪನ್ಯಾಸಗಳು ಸೇರಿದಂತೆ ಲೈವ್ ಕಾರ್ಯಕ್ರಮಗಳು ಕೂಡ ನಡೆಯಲಿದೆ.

Science Gallery in Bengaluru Exhibition Presenting Human Feelings in Digital Platform

ಸೈನ್ಸ್ ಗ್ಯಾಲರಿ ಬೆಂಗಳೂರಿನ ಸ್ಥಾಪಕಿ, ನಿರ್ದೇಶಕಿ ಜಾಹ್ನವಿ ಫಾಲ್ಕಿ ಅವರು ಸೈನ್‌ ಗ್ಯಾಲರಿ ಕುರಿತು ಮಾತನಾಡಿದ್ದು, "ಭಾರತೀಯ ಭಾಷೆಗಳಲ್ಲಿ ರೋಮಾಂಚಕ ಬೌದ್ಧಿಕ ಜೀವನವನ್ನು ರಚಿಸಲು ನಾವೆಲ್ಲರೂ ನಮ್ಮ ಕೈಲಾದಷ್ಟು ಮಾಡಬೇಕು. ಭಾಷೆಗಳನ್ನು ಜೀವಂತವಾಗಿಡಲು ಮತ್ತು ನಮ್ಮ ಸಂಸ್ಕೃತಿಗಳನ್ನು ಬೆಳೆಸಲು ಇದು ಏಕೈಕ ಮಾರ್ಗವಾಗಿದೆ. ಇದಕ್ಕಾಗಿ ಸೈನ್ಸ್ ಗ್ಯಾಲರಿ ಬೆಂಗಳೂರಿನಲ್ಲಿ, ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಉತ್ತಮ ಗುಣಮಟ್ಟದ ವಿಷಯವನ್ನು ರಚಿಸಲು ನಮ್ಮ ಸಂಸ್ಥೆ ಬದ್ಧವಾಗಿದೆ. ಅಲ್ಲದೆ ಇದನ್ನ ಇತರ ಭಾರತೀಯ ಭಾಷೆಗಳಿಗೂ ವಿಸ್ತರಿಸುತ್ತೇವೆ. ಒಟ್ಟಾರೆ ಸೈನ್ಸ್‌ ಗ್ಯಾಲರಿಯನ್ನು ಸಾರ್ವಜನಿಕ ಸಂಸ್ಥೆಯಂತೆ ರೂಪಿಸುವುದೇ ನಮ್ಮ ಸಂಸ್ಥೆಯ ಏಕೈಕ ಗುರಿಯಾಗಿದೆ," ಎಂದು ಜಾಹ್ನವಿ ಫಾಲ್ಕಿ ತಿಳಿಸಿದ್ದಾರೆ.

Recommended Video

ಹಿಂದೂ ಆಕ್ಟಿವಿಸ್ಟ್ ಸಾದ್ವಿ ರಿತುಂಬರ್ ಏನ್ ಹೇಳಿದಾರೆ ಗೊತ್ತಾ!! | Oneindia Kannada

English summary
Science Gallery in Bengaluru is presenting a uniquely first online exhibition-season " Human Feelings in Digital Platform"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X