• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಂಗ್ಲ ಮಾಧ್ಯಮಕ್ಕಾಗಿ ಕನ್ನಡ ಶಾಲೆಗಳಿಂದ ಅರ್ಜಿ

By Kiran B Hegde
|

ಬೆಂಗಳೂರು, ಜ. 2: ಕಿರಿಯ ಪ್ರಾಥಮಿಕ ತರಗತಿಗಳಲ್ಲಿ (1ರಿಂದ 4) ವಿದ್ಯಾರ್ಜನೆ ಕನ್ನಡ ಮಾಧ್ಯಮದಲ್ಲಿಯೇ ಆಗಬೇಕೆಂದು ಸಾಹಿತಿಗಳು, ಕನ್ನಡ ಪರ ಹೋರಾಟಗಾರರು ಎಷ್ಟೇ ಆಗ್ರಹ ವ್ಯಕ್ತವಾಗಿದ್ದರೂ ಆಂಗ್ಲ ಮಾಧ್ಯಮ ಪ್ರೇಮಿಗಳು ಹೆಚ್ಚುತ್ತಲೇ ಇದ್ದಾರೆ.

ಮುಂದಿನ ಶೈಕ್ಷಣಿಕ ವರ್ಷ (2015-16)ದಿಂದ ಕಿರಿಯ ಪ್ರಾಥಮಿಕ ತರಗತಿಗಳಲ್ಲಿಯೇ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ಅನುಮತಿ ನೀಡಬೇಕೆಂದು ಹಲವು ಶಾಲೆಗಳು ಅರ್ಜಿ ಸಲ್ಲಿಸಿವೆ. ಇದಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಕೂಡ ಅನಿವಾರ್ಯವಾಗಿ ಒಪ್ಪಿಗೆ ಸೂಚಿಸಿದೆ. ಆದರೆ, ಭಾಷಾ ನೀತಿ ಕುರಿತು ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳದ ಕಾರಣ ರಾಜ್ಯ ಸರ್ಕಾರ ಇನ್ನೂ ಅಂತಿಮ ಸೂಚನೆ ನೀಡಿಲ್ಲ. [ಅನಧಿಕೃತ ಶಾಲೆ ಪಟ್ಟಿ : ಆಕ್ಷೇಪಣೆ ಇದ್ದರೆ ಸಲ್ಲಿಸಿ]

ಬೆಂಗಳೂರಿನ 1,096 ಶಿಕ್ಷಣ ಸಂಸ್ಥೆಗಳಿಂದ ಅರ್ಜಿ

ಬೆಂಗಳೂರು ನಗರದಲ್ಲಿಯೇ 1,096 ಶಿಕ್ಷಣ ಸಂಸ್ಥೆಗಳು ಕಿರಿಯ ಪ್ರಾಥಮಿಕ ತರಗತಿಗಳಲ್ಲಿ ಇಂಗ್ಲಿಷ್ ಮಾಧ್ಯಮ ಕಲಿಕೆ ಆರಂಭಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿವೆ. ಅಚ್ಚರಿಯ ವಿಷಯವೆಂದರೆ ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಟ್ಟಕ್ಕಿಂತ ಕಿರಿಯ ಪ್ರಾಥಮಿಕ ಶಾಲೆ ಮಟ್ಟದಲ್ಲಿ ಇಂಗ್ಲಿಷ್ ಮಾಧ್ಯಮ ಕಲಿಕೆಗೆ ಹೆಚ್ಚು ಬೇಡಿಕೆ ಬಂದಿದೆ.

ಅನೇಕ ಶಿಕ್ಷಣ ಸಂಸ್ಥೆಗಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಅನುಮತಿ ಪಡೆದಿದ್ದರೂ ಇಂಗ್ಲಿಷ್ ಮಾಧ್ಯಮದಲ್ಲಿಯೇ ಶಿಕ್ಷಣ ನೀಡುತ್ತಿವೆ. ಇಂತಹ ಶಾಲೆಗಳಿಂದಲೇ ಹೆಚ್ಚು ಅರ್ಜಿ ಬಂದಿವೆ ಎಂದು ಇಲಾಖೆ ಮೂಲಗಳು ತಿಳಿಸಿವೆ. [ಬೆಂಗಳೂರಿನಲ್ಲಿವೆ 1,266 ಅನಧಿಕೃತ ಶಾಲೆಗಳು]

ಪೂರ್ವ ಪ್ರಾಥಮಿಕಕ್ಕೆ ಮಾಧ್ಯಮ ಕಡ್ಡಾಯವಿಲ್ಲ

"ಪೂರ್ವ ಪ್ರಾಥಮಿಕ ಶಾಲೆಗಳಿಗೆ ಯಾವುದೇ ನಿಗದಿತ ಪಠ್ಯ ಇಲ್ಲ. ಆದ್ದರಿಂದ ಈ ಕುರಿತು ಯಾವುದೇ ಮಾಧ್ಯಮವನ್ನು ಕಡ್ಡಾಯಗೊಳಿಸಿಲ್ಲ" ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮದ್ ಮೊಯ್ಸಿನ್ ತಿಳಿಸಿದ್ದಾರೆ.

ಅನಧಿಕೃತ ಶಾಲೆಗಳಿಂದ ಮಾನ್ಯತೆಗೆ ಅರ್ಜಿ

ಬೆಂಗಳೂರು ದಕ್ಷಿಣ ಮತ್ತು ಉತ್ತರದಲ್ಲಿ ಅನಧಿಕೃತ ಎಂದು ಗುರುತಿಸಿದ್ದ 1,266 ಶಾಲೆಗಳಲ್ಲಿ ಹೆಚ್ಚಿನ ಶಾಲೆಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆ ಆರಂಭಿಸಲು ಅರ್ಜಿ ಸಲ್ಲಿಸಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಅರ್ಜಿಗಳ ಕುರಿತು ಯಾವುದೇ ನಿರ್ಧಾರ ಕೈಗೊಳ್ಳಲು ಮೇಲಧಿಕಾರಿಗಳಿಂದ ಇನ್ನೂ ಸೂಚನೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

English summary
There is a huge demand for applications to start lower primary classes in English medium. Department of Public Instruction (DPI) has agreed to consider them. But state government is not clear whether to register these schools as English medium. Because a decision on the language policy is still pending.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more