ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಅ.23 ಕ್ಕೆ ಶಾಲಾ ಮಕ್ಕಳ ಸ್ಕೂಲ್ ವ್ಯಾನ್ ಬರುವುದಿಲ್ಲ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 22: ನಾಳೆ (ಬುಧವಾರ) ಲಘು ವಾಹನ ಚಾಲಕರ ಸಂಘ ಹಾಗೂ ಸಂಯುಕ್ತ ಶಾಲಾ ವಾಹನ ಚಾಲಕರ ಸಂಘವು ಪ್ರತಿಭಟನೆ ನಡೆಸುತ್ತಿದ್ದು, ಶಾಲಾ ಮಕ್ಕಳ ವಾಹನ ಸೇವೆ ಇರುವುದು ಬಹುತೇಕ ಅನುಮಾನ.

ಅಸಂಘಟಿತ ವಲಯ ಚಾಲಕರ ಪ್ರಗತಿಗಾಗಿ ಪ್ರತ್ಯೇಕ ಕಲ್ಯಾಣ ಮಂಡಳಿ ರೂಪಿಸಬೇಕೆಂದು ಲಘು ವಾಹನ ಚಾಲಕರು, ಶಾಲಾ ವಾಹನ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾಗಿ ನಾಳೆ ಬಹುತೇಕ ಕಡೆ ಶಾಲಾ ವಾಹನಗಳು ರಸ್ತೆಗೆ ಇಳಿಯುವುದಿಲ್ಲ.

ಖಾಸಗಿ ಶಾಲೆಗಳು ತಮ್ಮ ಶಾಲಾ ವಾಹನಗಳನ್ನು ಚಲಾಯಿಸಲು ಬೇರೆ ಚಾಲಕರ ವ್ಯವಸ್ಥೆ ಮಾಡಿಕೊಂಡರಷ್ಟೆ ಶಾಲಾ ವಾಹನಗಳು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ವಾಹನಗಳು ಬರಲಿವೆ. ಇದರ ಬಗ್ಗೆ ಪೋಷಕರು ಶಾಲೆಯಿಂದಲೇ ಮಾಹಿತಿ ಪಡೆದುಕೊಳ್ಳಬೇಕಿದೆ.

School Drivers Protest On October 23

Recommended Video

ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಲು ಸೂಚಿಸಿದ ಸರ್ಕಾರ |Oneindia Kannada

ಬೆಂಗಳೂರು ಒಂದರಲ್ಲೇ ಸುಮಾರು 16,000 ಚಾಲಕರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವ ಮರಳಿ ಕರೆದುಕೊಂಡು ಹೋಗುವ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಅವರ ಕಲ್ಯಾಣಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಅಸಮಾಧಾನದಿಂದಾಗಿ ಪ್ರತಿಭಟನೆ ನಡೆಸಲಾಗುತ್ತಿದೆ.

ಖಾಸಗಿ ಶಾಲಾ ವಾಹನಗಳಿಗೆ ಪರ್ಮಿಟ್ ನೀಡುವುದು, ಸಂಚಾರಿ ಪೊಲೀಸರ ಕಿರಿ-ಕಿರಿ ತಪ್ಪಿಸುವುದು, ಸಾರಿಗೆ ಅಧಿಕಾರಿಗಳ ದೌರ್ಜನ್ಯ ತಪ್ಪಿಸುವುದು, ಅಸಂಘಟಿತ ಚಾಲಕರ ಕಲ್ಯಾಣ ಸೇರಿದಂತೆ ಇನ್ನೂ ಕೆಲವು ಬೇಡಿಕೆಗಳು ವಾಹನ ಚಲಾಕರಿಗೆ ಇವೆ.

English summary
Light motor vehicle drivers and school bus drivers protesting tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X