ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ 'ಶಾಲಾ ಡೈರಿ' ಕಡ್ಡಾಯ!

By Nayana
|
Google Oneindia Kannada News

ಬೆಂಗಳೂರು, 14: ಇನ್ನುಮುಂದೆ ಎಲ್ಲಾ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಡೈರಿಕಡ್ಡಾಯವಾಗಲಿದೆ. ಇಲ್ಲಿಯವರೆಗೆ ಖಾಸಗಿ ಶಾಲಾ ಮಕ್ಕಳು ಮಾತ್ರ ಸ್ಕೂಲ್‌ ಡೈರಿಯನ್ನು ಬಳಸುತ್ತಿದ್ದರು. ಈ ಶಾಲಾ ಡೈರಿಯಿಂದ ಶಿಕ್ಷಕರು ಮಕ್ಕಳಿಗೆ ನೀಡಿರುವ ಮನೆ ಕೆಲಸ ಮತ್ತು ಇತರೆ ವಿಷಯಗಳನ್ನು ಪಾಲಕರು ನೋಡಲು ಸಹಕಾರಿಯಾಗಲಿದೆ.

ರಾಜ್ಯದಲ್ಲಿ 67,579 ಶಾಲೆಗಳಿವೆ. 1ರಿಂದ 10ನೇ ತರಗತಿಯವರೆಗೆ ಸುಮಾರು 6.6 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ ಶಾಲಾ ಡೈರಿ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ.

ಆರ್‌ಟಿಇ: ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡಿದರೆ ದೂರು ನೀಡಿ!ಆರ್‌ಟಿಇ: ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡಿದರೆ ದೂರು ನೀಡಿ!

ರೂಪುರೇಷೆ: ಸರ್ಕಾರಿ ಶಾಲೆಯು ಇದೇ ಮೊದಲ ಬಾರಿಗೆ ಶಾಲಾ ಡೈರಿಯನ್ನು ಪರಿಚಯಿಸುತ್ತಿದ್ದು, ಇದರ ರೂಪುರೇಷೆ ಹೇಗಿರಬೇಕೆಂಬ ಕುರಿತು ಚಿಂತನೆ ನಡೆಯುತ್ತಿದೆ. ಇದು ಡೈರಿ ಮಾತ್ರವಲ್ಲ, ವರ್ಕ್‌ಬುಕ್‌ ಸಹ ಆಗಬೇಕು ಎಂಬುದು ಶಿಕ್ಷಣ ಇಲಾಖೆಯ ಆಶಯವಾಗಿದೆ.

School diary compulsory for govt schools students too

ಹೀಗಾಗಿ ಡೈರಿ ಅಂತಿಮ ರೂಪ ಪಡೆದುಕೊಂಡಿಲ್ಲ, ರಾಜ್ಯ ಶಿಕ್ಷಣ ಸಂಶೊಧನೆ ಮತ್ತು ತರಬೇತಿ ಇಲಾಖೆ ಶಾಲಾ ಡೈರಿ ರೂಪಿಸುವ ಜವಾಬ್ದಾರರಿಯನ್ನು ವಹಿಸಿಕೊಂಡಿದೆ. ಸದ್ಯ ಡೈರಿಯಲ್ಲಿ ಏನೆಲ್ಲಾ ಇರಬೇಕು ಎಂಬುದರ ಬಗ್ಗೆ ತೀರ್ಮಾನವಾಗದಿರುವುದರಿಂದ 2018-19ನೇ ಸಾಲಿನಿಂದ ಶಾಲಾ ಮಕ್ಕಳಿಗೆ ಡೈರಿ ದೊರೆಯುತ್ತದೆ ಎಂಬುದರ ಬಗ್ಗೆ ಖಚಿತವಾಗಿಲ್ಲ.

ಶಾಲಾ ಡೈರಿಯಲ್ಲಿ ಏನೇನಿರಲಿದೆ?: ಶಾಲಾ ಮಕ್ಕಳಿಗೆ ನೀಡುವ ಡೈರಿಯಲ್ಲಿ ಶಾಲೆಯ ಆಡಳಿತ ಮಂಡಳಿಯ ಹೆಸರು, ದೂರವಾಣಿ ಸಂಖ್ಯೆ, ಪ್ರವೇಶದ ನಿಯಮಗಳು, ಪ್ರತಿ ನಿತ್ಯದ ಮನೆ ಪಾಠ, ಶಾಲೆಯ ರಜಾದಿನ ಸೇರಿ ಹಲವು ವಿಷಯಗಳು ಇರಲಿದೆ.

English summary
Department of public instructions has made compulsory of maintaining school diary for government school students as it was practiced in private schools only. It was made an initiative that will increase attendance and quality of students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X