ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಶಾಲಾ ಬಸ್ ಡಿಕ್ಕಿ, ಬೆಂಗಳೂರಲ್ಲಿ 16 ವರ್ಷದ ಬಾಲಕಿ ಸಾವು

|
Google Oneindia Kannada News

ಬೆಂಗಳೂರು, ಮೇ 26; ಶಾಲಾ ಬಸ್ ಡಿಕ್ಕಿ ಹೊಡೆದು 16 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಗುರುವಾರ ಬೆಂಗಳೂರು ನಗರದ ದೇವೇಗೌಡ ಪೆಟ್ರೋಲ್ ಬಂಕ್ ಸಮೀಪ ಈ ಅಪಘಾತ ನಡೆದಿದೆ. ಮೃತಪಟ್ಟ ಬಾಲಕಿಯನ್ನು ಹಾರೋಹಳ್ಳಿ ನಿವಾಸಿ ಕೀರ್ತನಾ ಎಂದು ಗುರುತಿಸಲಾಗಿದೆ.

ರಸ್ತೆ, ಶಾಲೆ ಗೋಡೆ, ಮೆಟ್ಟಿಲು ಮೇಲೆ sorry.. sorry..ಬರಹ: ಯುವಕರ ಹುಚ್ಚಾಟ!ರಸ್ತೆ, ಶಾಲೆ ಗೋಡೆ, ಮೆಟ್ಟಿಲು ಮೇಲೆ sorry.. sorry..ಬರಹ: ಯುವಕರ ಹುಚ್ಚಾಟ!

ಬೈಕ್‌ನಲ್ಲಿ ಹರ್ಷಿತಾ, ದರ್ಶನ್ ಮತ್ತು ಕೀರ್ತನಾ ತ್ರಿಬಲ್‌ ರೈಡ್ ಹೋಗುತ್ತಿದ್ದರು. ಆಗ ಹಿಂಬದಿಯಿಂದ ಬಂದ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕೀರ್ತನಾ ಮೃತಪಟ್ಟಿದ್ದಾರೆ.

ಹುಬ್ಬಳ್ಳಿ ರಸ್ತೆ ಅಪಘಾತ: ಕೇಂದ್ರದಿಂದ 2 ಲಕ್ಷ ರೂ, ರಾಜ್ಯದಿಂದ 5 ಲಕ್ಷ ರೂ ಪರಿಹಾರಹುಬ್ಬಳ್ಳಿ ರಸ್ತೆ ಅಪಘಾತ: ಕೇಂದ್ರದಿಂದ 2 ಲಕ್ಷ ರೂ, ರಾಜ್ಯದಿಂದ 5 ಲಕ್ಷ ರೂ ಪರಿಹಾರ

School Bus Accident 16 Year Old Girl Killed In Bengaluru

Recommended Video

Virat ಸಿಡಿಸಿದ ಅದ್ಭುತ ಫೋರ್ ಮತ್ತು ಇದಕ್ಕೆ ಗಂಗೂಲಿ ಕೊಟ್ಟ ರಿಯಾಕ್ಷನ್ ಫುಲ್ ವೈರಲ್ |#cricket|Oneindia Kannada

ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೀರ್ತನಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 82ರಷ್ಟು ಅಂಕಗಳಿಸಿದ್ದಳು. ಪಿಯುಸಿಗೆ ಸೇರ್ಪಡೆಯಾಗುವ ತಯಾರಿಯಲ್ಲಿದ್ದಳು. ಓದುತ್ತಲೇ ಪಾರ್ಟ್‌ ಟೈಂ ಕೆಲವನ್ನು ಮಾಡುತ್ತಿದ್ದ ಕೀರ್ತನಾ ಮನೆ ನಡೆಸಲು ಸಹಾಯವನ್ನು ಮಾಡುತ್ತಿದ್ದಳು.

ಧಾರವಾಡದಲ್ಲಿ ರಸ್ತೆ ಅಪಘಾತ; 5 ಲಕ್ಷ ರೂ. ಪರಿಹಾರಧಾರವಾಡದಲ್ಲಿ ರಸ್ತೆ ಅಪಘಾತ; 5 ಲಕ್ಷ ರೂ. ಪರಿಹಾರ

ಕೀರ್ತನಾ ತಂದೆ ನಾಗರಾಜ್ ಆಟೋ ಚಾಲಕರು. ತಾಯಿ ಮನೆಗೆಳಸ ಮಾಡುತ್ತಾರೆ. ಗುರುವಾರ ಪತ್ನಿ ಮತ್ತು ಮಕ್ಕಳನ್ನು ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಕರೆದುಕೊಂಡು ಬಂದ ನಾಗರಾಜ್ ಮಕ್ಕಳನ್ನು ಇಳಿಸಿ, ಆಟೋದಲ್ಲಿ ಪತ್ನಿಯನ್ನು ಕೆಲಸ ಮಾಡುವ ಸ್ಥಳಕ್ಕೆ ಬಿಡಲು ಹೋಗಿದ್ದರು.

ಬಳಿಕ ಕೀರ್ತನಾ ಸ್ನೇಹಿತ ದರ್ಶನ್‌ಗೆ ಕರೆ ಮಾಡಿ ಮನೆಗೆ ಬೈಕ್‌ನಲ್ಲಿ ಹೊರಟಿದ್ದಳು. ಈ ವೇಳೆ ಶಾಲಾ ಬಸ್ ಡಿಕ್ಕಿ ಹೊಡೆದು ಕೀರ್ತನಾ ಸ್ಥಳದಲ್ಲಿ ಮೃತಪಟ್ಟರೇ ಕೀರ್ತನಾ ಅಕ್ಕ ಹರ್ಷಿತಾ ಮತ್ತು ಸ್ನೇಹಿತ ದರ್ಶನ್‌ಗೆ ಗಾಯಗಳಾಗಿವೆ.

English summary
16 year old girl killed in road accident near Devegowda petrol bunk, Bengaluru. School bus hit the bike on May 26th morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X