• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾಲ್ಕು ಗೋಡೆ ನಡುವೆ ನಡೆವ ಆ ಕ್ರಿಯೆ ಅಪರಾಧವಲ್ಲ: RJ ಪ್ರಿಯಾಂಕಾ ಸಂದರ್ಶನ

|

ಬೆಂಗಳೂರು, ಸೆಪ್ಟೆಂಬರ್ 06: "ನಾಲ್ಕು ಗೋಡೆಯ ನಡುವೆ ನಡೆವ ಕ್ರಿಯೆ(ಸಲಿಂಗಕಾಮ) ಅಪರಾಧವಲ್ಲ. ಅದನ್ನು ಸಾರ್ವಜನಿಕಗೊಳಿಸುವುದು ಸರಿಯಲ್ಲ. ಸುಪ್ರೀಂ ಕೋರ್ಟಿನ ಇಂದಿನ ತೀರ್ಪು ನಮ್ಮ ಸಮುದಾಯದ ಮಟ್ಟಿಗೆ ಅತ್ಯಂತ ಮಹತ್ವದ್ದು. ತೀರ್ಪಿನ ಬಗ್ಗೆ ಕೇಳಿ ವ್ಯಕ್ತಪಡಿಸಲಾಗದಷ್ಟು ಸಂತಸವಾಗಿದೆ..."

ಇದು ಪ್ರಪ್ರಥಮ ಟ್ರಾನ್ಸ್ ಜೆಂಡರ್ RJ (ರೇಡಿಯೋ ಜಾಕಿ) ಪ್ರಿಯಾಂಕಾ ಅವರ ಮಾತು. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಆಗಷ್ಟೇ ಟೌನ್ ಹಾಲ್ ನಲ್ಲಿ ನಡೆದ ಸಂಭ್ರಮಾಚರಣೆಯನ್ನು ಮುಗಿಸಿಬಂದ ಪ್ರಿಯಾಂಕಾ, ತಮ್ಮ ಖುಷಿಯನ್ನು 'ಒನ್ಇಂಡಿಯಾ ಕನ್ನಡದ' ಜೊತೆ ಹಂಚಿಕೊಂಡರು.

ನಾನು ಅವನಲ್ಲ ಅವಳು... ಆರ್ ಜೆ ಪ್ರಿಯಾಂಕ ಜೀವನ ಪಯಣ

"ಈ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ ಐದು ನ್ಯಾಯಾಧೀಶರಿಗೆ ನಮ್ಮ ಸಮುದಾಯದ ಪರವಾಗಿ ನಮನಗಳು. ಐಪಿಸಿ ಸೆಕ್ಷನ್ 377 ಎಷ್ಟು ದುರ್ಬಳಕೆಯಾಗುತ್ತಿತ್ತು ಎಂಬುದು ಕೋರ್ಟಿನ ಗಮನಕ್ಕೆ ಬಂದಿದ್ದು ಶ್ಲಾಘನೀಯ. ನಾವು ಯಾವ ತಪ್ಪು ಮಾಡದಿದ್ದರೂ ನಮ್ಮನ್ನು ಈ ಸೆಕ್ಷನ್ ಅಡಿಯಲ್ಲಿ ಹಿಂಸಿಸಲಾಗುತ್ತಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡಿ ನಮ್ಮಷ್ಟಕ್ಕೆ ನಾವು ಸಂತಸ ಹಂಚಿಕೊಳ್ಳುತ್ತಿದ್ದರೂ, ಏನಾದರೂ ಚರ್ಚಿಸುತ್ತಿದ್ದರೂ ನಮ್ಮ ಮೇಲೆ ಸೆಕ್ಷನ್ 377 ಅನ್ನು ಹೇರಲಾಗುತ್ತಿತ್ತು. ಇವೆಲ್ಲಕ್ಕೂ ಈ ತೀರ್ಪು ತಿಲಾಂಜಲಿ ಹಾಕಿದೆ" ಎಂದು ನೆಮ್ಮದಿಯ ನಿಟ್ಟುಸಿರುಬಿಟ್ಟರು ಪ್ರಿಯಾಂಕಾ.

"ನಾವೂ ಎಲ್ಲರಂತೆಯೇ ಮನುಷ್ಯರು. ನಮಗೂ ಹಕ್ಕಿದೆ, ಸ್ವಾತಂತ್ರ್ಯವಿದೆ. ಆದರೆ ಸಮಾಜ ನಮ್ಮನ್ನು ನೋಡುತ್ತಿದ್ದ ದೃಷ್ಟಿಯೇ ಬೇರೆ. ನಾಲ್ಕು ಗೋಡೆಯ ಮಧ್ಯೆ ನಡೆವ ಕ್ರಿಯೆಯನ್ನು ಸಾರ್ವಜನಿಕಗೊಳಿಸುವುದು ಸರಿಯಲ್ಲ. ಅದೂ ಒಂದು ಸಹಜ ಕ್ರಿಯೆಯಷ್ಟೆ. ಅದನ್ನು ಘನ ಸುಪ್ರೀಂ ಕೋರ್ಟ್ ಅರ್ಥಮಾಡಿಕೊಂಡು ನಮಗೆ ನ್ಯಾಯ ನೀಡಿದ್ದಕ್ಕಾಗಿ ಅನಂತಾನಂತ ಧನ್ಯವಾದಗಳು. ನಮ್ಮ ವಿರುದ್ಧ ಸುಖಾಸುಮ್ಮನೆ ಕೇಸು ಜಡಿಯುತ್ತಿದ್ದ, ಹಿಂಸೆ ಮಾಡುತ್ತಿದ್ದ ಪೊಲೀಸರಿಗೂ ಈ ತೀರ್ಪು ಎಚ್ಚರಿಕೆಯ ಗಂಟೆ" ಎಂದು ಪ್ರಿಯಾಂಕಾ ಅಭಿಪ್ರಾಯಪಟ್ಟರು.

ಏನಿದು 377 ಸೆಕ್ಷನ್? ಎಂಥ ಸಂಭೋಗ ಅಪರಾಧವಾಗುತ್ತದೆ?

"ಸೆಕ್ಷನ್ 377 ನಲ್ಲಿ ಇನ್ನೂ ಏನೇನಿದೆ ಎಂಬುದನ್ನು ವಿವರವಾಗಿ ಓದಿ, ನಮ್ಮ ಸಮುದಾಯದ ಹಿತದೃಷ್ಟಿಯಿಂದ ಇನ್ನು ಯಾವ್ಯಾವ ಬದಲಾವಣೆಗಳಾಗಬೇಕು ಎಂಬ ಬಗ್ಗೆ ಚರ್ಚೆ ನಡೆಸುತ್ತೇವೆ. ನಮ್ಮ ಸುಮುದಾಯಕ್ಕೆ ನ್ಯಾಯಾಂಗ ವ್ಯವಸ್ಥೆ ಮೇಲಿನ ಗೌರವ ಇದೀಗ ದುಪ್ಪಟ್ಟಾಗಿದೆ" ಎಂದು ಹೆಮ್ಮೆ ತುಂಬಿದ ಕಣ್ಣಲ್ಲಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು ಪ್ರಿಯಾಂಕಾ.

ಬೆಂಗಳೂರಿನವರೇ ಆದ ಪ್ರಿಯಾಂಕಾ ಪ್ರಪ್ರಥಮ ಮಹಿಳಾ ಆರ್ಜೆಯಾಗಿ, ರೇಡಿಯೋ ಜರ್ನಲಿಸ್ಟ್ ಆಗಿ, ಪ್ರೋಗ್ರಾಂ ಎಗ್ಸಿಕ್ಯೂಟಿವ್ ಆಗಿ, ತೃತೀಯ ಲಿಂಗಿಗಳ ಸಮುದಾಯದ ಧ್ವನಿಯಾಗಿದ್ದಾರೆ.

ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 377ರ ಪ್ರಕಾರ ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸಲಾಗಿತ್ತು. ಈ ಅಪರಾಧಕ್ಕೆ 10 ವರ್ಷಗಳ ವರೆಗೆ ಶಿಕ್ಷೆಯನ್ನೂ ನೀಡಬಹುದಿತ್ತು. ಇದರಿಂದ ಸಲಿಂಗಿಗಳ ಹಕ್ಕಿಗೆ ಧಕ್ಕೆ ಬರುತ್ತದೆ ಎಂದು ದೂರಿ, ಸೆಕ್ಷನ್ 377 ಅನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು.

ಸಹಮತದ ಸಲಿಂಗಕಾಮ ಅಪರಾಧವಲ್ಲ: ಸುಪ್ರೀಂ ತೀರ್ಪಿಗೆ ಗಣ್ಯರೇನಂತಾರೆ?

ಆದರೆ ಸಹಮತದ ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ನ ಪಂಚಸದಸ್ಯ ಪೀಠ ಇಂದು (ಸೆಪ್ಟೆಂಬರ್ 6ರ ಗುರುವಾರ) ಐತಿಹಾಸಿಕ ತೀರ್ಪು ನೀಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Supreme Court of India on IPC Section 377 said, Homosexuality not a crime. here is how Karnataka's first transgender Radio Jackie Bengaluru's Priyanka expresses her happiness about SC's verdict
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more