ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸವಿತಾ ಸಮಾಜದ ಅಭಿವೃದ್ದಿ ನಿಗಮಕ್ಕೆ ಶೀಘ್ರವೇ ಅಧ್ಯಕ್ಷರ ನೇಮಕ: ಡಿಸಿಎಂ ಅಶ್ವಥ್

|
Google Oneindia Kannada News

ಬೆಂಗಳೂರು ಅಕ್ಟೋಬರ್‌ 22: ಸವಿತಾ ಸಮಾಜದ ಅಭಿವೃದ್ದಿ ನಿಗಮಕ್ಕೆ ಶೀಘ್ರ ಅಧ್ಯಕ್ಷರನ್ನೂ ನೇಮಕ ಮಾಡಲಾಗುವುದು, ಈ ಮೂಲಕ ಸಮಾಜದ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ ಅಶ್ವಥ್‌ ನಾರಾಯಣ ತಿಳಿಸಿದರು.

ನಗರದಲ್ಲಿಂದು ರಾಜ್ಯ ಸವಿತಾ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ, ನೆರೆದಿದ್ದವರನ್ನು ಉದ್ದೇಶಿಸಿ ಡಾ ಅಶ್ವಥ್‌ ನಾರಾಯಣ ಮಾತನಾಡಿದರು.

ಕ್ಷೌರಿಕರ ಕೈಯಲ್ಲಿ ನನ್ನ ತಲೆಯೆಂಬ ರುಬ್ಬುಗುಂಡು!ಕ್ಷೌರಿಕರ ಕೈಯಲ್ಲಿ ನನ್ನ ತಲೆಯೆಂಬ ರುಬ್ಬುಗುಂಡು!

ಸವಿತಾ ಸಮಾಜ ನಮ್ಮ ಜೀವನದ ದಿನನಿತ್ಯದ ಆಗು ಹೋಗುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾದ ಸ್ವರದ ಮೂಲಕ ನಮ್ಮ ಕಾರ್ಯಕ್ರಮಗಳಿಗೆ ಚಾಲನೆ ನೀಡುವುದು ಹಾಗೂ ನಮ್ಮ ಅಂದವನ್ನು ಹೆಚ್ಚಿಸುವ ಮೂಲಕ ಆತ್ಮವಿಶ್ವಾಸಕ್ಕೆ ಇಂಬು ನೀಡುವ ಕೆಲಸವನ್ನು ಈ ಸಮಾಜ ನಿರ್ವಹಿಸುತ್ತದೆ ಎಂದರು.

ನಮ್ಮೂರಿನ ಕ್ಷೌರಿಕ ಪಿಲ್ಲಣ್ಣ ಕಲಿಸಿದ ಪಾಠಗಳುನಮ್ಮೂರಿನ ಕ್ಷೌರಿಕ ಪಿಲ್ಲಣ್ಣ ಕಲಿಸಿದ ಪಾಠಗಳು

ಇದೇ ಸಂದರ್ಭದಲ್ಲಿ 'ಸವಿತಾ ಸಮಾಜದ ಅಭಿವೃದ್ದಿ ನಿಗಮಕ್ಕೆ ಶೀಘ್ರವಾಗಿ ಅಧ್ಯಕ್ಷರ ನೇಮಕವನ್ನು ಮಾಡಲಾಗುವುದು ಎಂದು' ಭರವಸೆ ನೀಡಿದರು.

ನಮ್ಮ ಅಂದವನ್ನು ಹೆಚ್ಚಿಸುವ ಸವಿತಾ ಸಮಾಜ

ನಮ್ಮ ಅಂದವನ್ನು ಹೆಚ್ಚಿಸುವ ಸವಿತಾ ಸಮಾಜ

ನಮ್ಮ ಅಂದವನ್ನು ಹೆಚ್ಚಿಸುವ ಮೂಲಕ ಆತ್ಮವಿಶ್ವಾಸಕ್ಕೆ ಇಂಬು ನೀಡುವ ಕೆಲಸವನ್ನು ಈ ಸಮಾಜ ನಿರ್ವಹಿಸುತ್ತದೆ. ಈ ಸಮಾಜದ ಅಭಿವೃದ್ದಿಗೆ ಬೇಕಾಗಿರುವ ಅಗತ್ಯ ಸೌಲಭ್ಯಗಳನ್ನು ನೀಡುವುದು ನಮ್ಮ ಜವಾಬ್ದಾರಿ ಆಗಿರುತ್ತದೆ. ಈ ಹಿನ್ನಲೆಯಲ್ಲಿ ಸವಿತಾ ಸಮಾಜದ ಅಭಿವೃದ್ದಿ ನಿಗಮಕ್ಕೆ ಶೀಘ್ರವಾಗಿ ಅಧ್ಯಕ್ಷರ ನೇಮಕವನ್ನು ಮಾಡಲಾಗುವುದು. ಈ ಮೂಲಕವಾಗಿ ಸವಿತಾ ಸಮಾಜ ನಮ್ಮ ಮುಂದೆ ಇಟ್ಟಿರುವ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಕೌಶಲ್ಯ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುವುದು

ಕೌಶಲ್ಯ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುವುದು

ಬ್ಯೂಟಿ ಬ್ಯೂಸಿನೆಸ್‌ ಬಹಳ ತ್ವರಿತವಾಗಿ ಬೆಳೆಯುತ್ತಿರುವ ಹಾಗೂ ಅಮೂಲಾಗ್ರ ಬದಲಾವಣೆಯನ್ನು ಕಾಣುತ್ತಿರುವ ಉದ್ಯಮ. ಈ ಉದ್ಯಮಕ್ಕೆ ಬೇಕಾಗಿರುವ ಕೌಶಲ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೂತನ ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯವಿದೆ. ನಮ್ಮ ದೇಶದಲ್ಲಿ ಕೌಶಲ್ಯತೆಯ ಪ್ರಮಾಣ ಇರುವುದು ಶೇಕಡಾ 4 ರಷ್ಟು ಮಾತ್ರ. ಶಿಕ್ಷಣದ ಜೊತೆಯಲ್ಲಿಯೇ ಉದ್ಯೋಗಕ್ಕೆ ಬೇಕಾಗಿರುವಂತಹ ಕೌಶಲ್ಯವನ್ನು ಹೆಚ್ಚಿಸುವುದರ ಅಗತ್ಯವಿದೆ. ಈ ಅಗತ್ಯತೆಯನ್ನು ಮನಗೊಂಡು ಇದಕ್ಕೆ ಪೂರಕವಾದ ಸಲಹೆಗಳನ್ನು ನೀಡುವಂತೆ ಉಪ ಮುಖ್ಯಮಂತ್ರಿಗಳು ತಿಳಿಸಿದರು.

ಕ್ಷೌರಿಕರಿಗೆ ಸ್ಮಾರ್ಟ್‌ ಕಾರ್ಡ್‌

ಕ್ಷೌರಿಕರಿಗೆ ಸ್ಮಾರ್ಟ್‌ ಕಾರ್ಡ್‌

ಮಹರ್ಷಿ ಸವಿತಾ ಶಿಕ್ಷಣ ಸಂಸ್ಥೆಯು ಸಂಜಯನಗರದಲ್ಲಿ ಸ್ವಂತ ಕಟ್ಟಡದಲ್ಲಿ ನಡೆಸುತ್ತಿರುವ ಕಾಲೇಜಿಗೆ ಪದವಿ ಕಾಲೇಜು ಮಂಜೂರು ಮಾಡುವ ಹಾಗೂ ಕ್ಷೌರಿಕರಿಗೆ ಸ್ಮಾರ್ಟ್‌ ಕಾರ್ಡ್‌ ನೀಡುವ ಭರವಸೆಯನ್ನೂ ಈ ಸಂಧರ್ಭದಲ್ಲಿ ಡಾ ಅಶ್ವಥ್‌ ನಾರಾಯಣ ಅವರು ನೀಡಿದರು.

ಸವಿತಾ ಸಮಾಜದಿಂದ ಬೇಡಿಕೆ ಪಟ್ಟಿ ಸಲ್ಲಿಕೆ

ಸವಿತಾ ಸಮಾಜದಿಂದ ಬೇಡಿಕೆ ಪಟ್ಟಿ ಸಲ್ಲಿಕೆ

ರಾಜ್ಯ ಸವಿತಾ ಸಮಾಜದ ನೂತನ ಅಧ್ಯಕ್ಷರಾದ ಎನ್‌ ಸಂಪತ್‌ ಕುಮಾರ್‌ ಅವರು ಮಾತನಾಡಿ, ನಮ್ಮ ಸಮಾಜದ ಅಭಿವೃದ್ದಿಗೆ ಅಗತ್ಯವಿರುವ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದು ಇವುಗಳ ಈಡೇರಿಕೆಗೆ ರಾಜ್ಯ ಸರಕಾರದ ಜೊತೆ ಕೈಜೊಡಿಸಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಉಪಾಧ್ಯಕ್ಷರಾದ ಶ್ರೀ ಕೃಷ್ಣ ಡಿ. ಆರ್‌ (ಮಾವಳ್ಳಿ ಕೃಷ್ಣ), ಅಶೋಕ್‌ ಗಸ್ತಿ, ಕಿರಣ್‌ ಕುಮಾರ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

English summary
Savitha Samaja Development Board will soon get suitable President said Karnataka DCM Dr Ashwath Narayana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X