ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ಷೌರಿಕ ವೃತ್ತಿಗೆ ಸಿದ್ದರಾಮಯ್ಯರಿಂದ ಅವಮಾನ, ಕ್ಷಮೆಗೆ ಆಗ್ರಹ

|
Google Oneindia Kannada News

ಬೆಂಗಳೂರು ನವೆಂಬರ್‌ 29: ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರನ್ನು ಹೀಯಾಳಿಸುವ ಭರದಲ್ಲಿ ಕ್ಷೌರಿಕ ವೃತ್ತಿಗೆ ಅವಮಾನ ಮಾಡುವಂತಹ ಪದ ಬಳಕೆಯನ್ನು ಮಾಡಿರುವುದರ ವಿರುದ್ದ ಕರ್ನಾಟಕ ರಾಜ್ಯ ಸವಿತಾ ಸಮಾಜ ತೀವ್ರ ಆಕ್ಷೇಪ ವ್ಯಪಡಿಸಿದೆ.

ಈ ಬಗ್ಗೆ ಇಂದು ತುರ್ತು ಪತ್ರಿಕಾಗೋಷ್ಠಿಯನ್ನು ನಡೆಸಿದ ರಾಜ್ಯ ಸವಿತಾ ಸಮಾಜದ ರಾಜ್ಯಾಧ್ಯಕ್ಷ ಸಂಪತ್‌ ಕುಮಾರ್‌, ಸಿದ್ದರಾಮಯ್ಯ ಅವರು ಸಾರ್ವಜನಿಕವಾಗಿ ಕ್ಷಮಾಪಣೆ ಕೇಳದೇ ಇದ್ದ ಪಕ್ಷದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಖಜಾಂಚಿ ಆರ್‌ ನಾರಾಯಣ ಸೇರಿದಂತೆ ಹಲವರು ಭಾಗವಹಿಸಿದ್ದರು.

ಸವಿತಾ ಸಮಾಜದ ಅಭಿವೃದ್ದಿ ನಿಗಮಕ್ಕೆ ಶೀಘ್ರವೇ ಅಧ್ಯಕ್ಷರ ನೇಮಕ: ಡಿಸಿಎಂ ಅಶ್ವಥ್ಸವಿತಾ ಸಮಾಜದ ಅಭಿವೃದ್ದಿ ನಿಗಮಕ್ಕೆ ಶೀಘ್ರವೇ ಅಧ್ಯಕ್ಷರ ನೇಮಕ: ಡಿಸಿಎಂ ಅಶ್ವಥ್

ನಾಗರೀಕ ಜಗತ್ತು ನಮ್ಮ ವೃತ್ತಿಯ ಬಗ್ಗೆ ಬಹಳಷ್ಟು ಆದರಣೆ ಹೊಂದಿದೆ. ಜನರನ್ನು ಸ್ವಚ್ಚಗೊಳಿಸುವ ವೃತ್ತಿ ನಮ್ಮದು. ಈ ವೃತ್ತಿಯ ಬಗ್ಗೆ ಅವಹೇಳನಕಾರಿಯಾದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪನವರು ಗೆಜೆಟ್‌ ನಲ್ಲಿ ಪ್ರಕಟಣೆ ಹೊರಡಿಸಿದ್ದಾರೆ.

Savitha Samaja demand apology from Former CM Siddaramaiah

ಆದರೆ, ಇಂತಹ ಮುಖ್ಯಮಂತ್ರಿಗಳ ಸ್ಥಾನವನ್ನು ನಿಭಾಯಿಸಿದ ಸಿದ್ದರಾಮಯ್ಯನವರು ಈ ಪದಗಳನ್ನು ಬಳಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಇಂತಹ ಕೀಳು ಮಟ್ಟದ ಹೇಳಿಕೆಯನ್ನು ನೀಡುವುದನ್ನು ಅವರು ತಕ್ಷಣ ನಿಲ್ಲಿಸಬೇಕು. ಇಲ್ಲದೆ ಇರುವ ಪಕ್ಷದಲ್ಲಿ ನಮ್ಮ ಸಮಾಜದ ವತಿಯಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸವಿತಾ ಸಮಾಜದ ಧರ್ಮಾಧಿಕಾರಿಯಾಗಿ ಶ್ರೀಧರಾನಂಧ ನೇಮಕಸವಿತಾ ಸಮಾಜದ ಧರ್ಮಾಧಿಕಾರಿಯಾಗಿ ಶ್ರೀಧರಾನಂಧ ನೇಮಕ

ರಾಜ್ಯ ಸವಿತಾ ಸಮಾಜದ ರಾಜ್ಯ ಉಪಾಧ್ಯಕ್ಷ ಡಿ ಆರ್‌ ಕೃಷ್ಣ ಮಾತನಾಡಿ, ನಮ್ಮ ವೃತ್ತಿಗೆ ಅದರದೇ ಆದ ಗೌರವವಿದೆ. ಈ ಗೌರವಕ್ಕೆ ಧಕ್ಕೆ ತರುವುದು ಸರಿಯಾಲ್ಲ. ಅದರಲ್ಲೂ ಇಂತಹ ಸಾರ್ವಜನಿಕ ಬದುಕಿನಲ್ಲಿ ಇರುವವರು ತಾವು ಬಳಸುವ ಪದಗಳ ಬಗ್ಗೆ ಗಮನ ಇಟ್ಟುಕೊಳ್ಳುವುದು ಸೂಕ್ತ. ಮಾಜಿ ಮುಖ್ಯಮಂತ್ರಿಗಳು ಈ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

English summary
Karnataka Savitha Samaja has demand apology from Former CM Siddaramaiah for insulting sentiments of the community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X