ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೃಕ್ಷಮಾತೆ ಸಾಲುಮರದ ತಿಮ್ಮಕ್ಕರೊಂದಿಗೆ ಪರಿಸರ ದಿನಾಚರಣೆ

By Mahesh
|
Google Oneindia Kannada News

ಬೆಂಗಳೂರು, ಜೂನ್ 05: ನಗರದ ಪ್ರತಿಷ್ಠಿತ ಶಾಲೆಗಳಲ್ಲೊಂದಾದ ಶ್ರೀವಾಣಿ ವಿದ್ಯಾಕೇಂದ್ರದ ಅಂಗಸಂಸ್ಥೆಯಾದ ಮಾಚೋಹಳ್ಳಿಯಲ್ಲಿರುವ ಹನುಮವನ ಶಾಖೆಯಲ್ಲಿ ಪರಿಸರದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಾಡೋಜ ಶ್ರೀಮತಿ ಸಾಲುಮರದ ತಿಮ್ಮಕ್ಕನವರು ಮುಖ್ಯ ಅತಿಥಿಗಳಾಗಿದ್ದರು.

ತಮ್ಮ ಇಳಿವಯಸ್ಸಿನಲ್ಲಿಯೂ ಚೈತನ್ಯಶೀಲರಾಗಿ ಪರಿಸರ ಕಳಕಳಿ, ಕಾಳಜಿ ತೋರುತ್ತಿರುವ ಸಾಲುಮರದ ತಿಮ್ಮಕ್ಕನವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ತಾವು ಮಕ್ಕಳಿಲ್ಲದ ಕೊರತೆಯನ್ನು ಗಿಡಗಳನ್ನು ಬೆಳೆಸಿ ನೀಗಿಕೊಂಡಿರುವುದಾಗಿ ತಿಳಿಸಿದರು. ತಾವು ನೆಟ್ಟು ಬೆಳೆಸಿದ ಮರಗಳ ಸಂಖ್ಯೆಯನ್ನು ತಾವು ಲೆಕ್ಕ ಹಾಕಿಲ್ಲವೆಂದೂ, ಜನರೇ ಲೆಕ್ಕಹಾಕಿ ಹೇಳುತ್ತಾರೆಂದು ಮುಗ್ಧತೆಯಿಂದ, ನಿಗರ್ವಿಗಳಾಗಿ ನುಡಿದರು. [ನಮ್ಮ ವೃಕ್ಷ ಮಹಿಳೆ, ನಮ್ಮ ಹೆಮ್ಮೆ]

Save life by planting a Tree" World environment day celebrations by Sree Vani Vidhya Kendra

ಈ ಶಾಲೆಯಲ್ಲಿ ಇತರೆಡೆಗಳಂತೆ ಬರಿಯ ಆಂಗ್ಲಸಂಸ್ಕೃತಿಯ ಅನುಕರಣೆ ಮಾಡದೇ ಪರಿಸರ, ದೇಶ, ಸಂಸ್ಕೃತಿಗಳ ಬಗ್ಗೆ ಕಾಳಜಿಯನ್ನು ಮಕ್ಕಳಲ್ಲಿ ಬೆಳೆಸುತ್ತಿರುವುದು ತುಂಬಾ ಶ್ಲಾಘ್ಯವಾದ ಕಾರ್ಯವೆಂದು ನುಡಿದರು. ಶಾಲೆಯ ಆವರಣದಲ್ಲಿ ಗಿಡನೆಟ್ಟು, ಜೀವ ಉಳಿಸಿ ಎನ್ನುತ್ತಾ ಪರಿಸರ ದಿನಾಚರಣೆಗೆ ಶುಭಕೋರಿದರು.[ಸಾಲುಮರದ ನೆರಳಿನಲ್ಲೇ ಇರಬಯಸುವ ತಿಮ್ಮಕ್ಕ]

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಚಿತ್ರನಟಿ ಮಾನ್ವಿತಾ ಅವರು ಶಾಲೆಯ ಪರಿಸರ ಕಾಳಜಿಯನ್ನು ಶ್ಲಾಘಿಸಿ, ವಿದ್ಯಾರ್ಥಿಗಳಿಗೆ ಶುಭಕೋರಿದರು. ಮಾನ್ವಿತಾ ಅವರು ನೀಡಿರುವ ಸಂದೇಶವಿರುವ ವಿಡಿಯೋ ಲಿಂಕ್ ಇಲ್ಲಿದೆ:


ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಳ್ಳಿಯ ಪರಿಸರ ಮತ್ತು ದೇಸೀ ಆರ್ಥಿಕತೆಯ ಪರಿಚಯ ಮಾಡಿಸುವುದಕ್ಕಾಗಿ ಸಂತೆಯನ್ನು ಆಯೋಜಿಸಲಾಗಿತ್ತು.

ಶಾಲೆಯ ಮಕ್ಕಳಿಂದ ಚಿತ್ರ ಸಂಯೋಜನೆ, ಭಿತ್ತಿಪತ್ರಗಳು, ತ್ಯಾಜ್ಯವಸ್ತುಗಳಿಂದ ಮಾಡಲಾದ ಅನೇಕ ವಿಜ್ಞಾನದ ಮಾದರಿಗಳನ್ನು ಪ್ರದರ್ಶಿಸಲಾಯಿತು. ಶಾಲೆಯ ಎನ್.ಸಿ.ಸಿ. ವಿಭಾಗದ ಮಕ್ಕಳು ಗಿಡಗಳನ್ನು ನೆಡುವುದರೊಂದಿಗೆ, 'ಪರಿಸರ ಉಳಿಸಿ, ಪರಿಸರ ಬೆಳೆಸಿ ನಿಮಗಾಗಿ' ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

ಶಾಲೆಯ ಅಧ್ಯಕ್ಷರಾದ ಶ್ರೀಮತಿ ಆರ್. ಎಚ್. ಉಷಾರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಂಶುಪಾಲರಾದ ಶ್ರೀಮತಿ ಆರ್. ಎಚ್. ವಾಣೀಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

English summary
Save life by planting a Tree said Nadoja Salumarada Thimmakka during her spech at World environment day celebrations held at Sree Vani Vidhya Kendra, Machohalli, Bengaluru. Actress Manvitha Harish and several other celebrities were also present.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X