ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಮೇಶ್ ಜಾರಕಿಹೊಳಿ ವಿರುದ್ಧ ಸತೀಶ್ 'ವಿಡಿಯೋ' ಚಮಕ್

|
Google Oneindia Kannada News

ಬೆಂಗಳೂರು, ನವೆಂಬರ್ 19: ಅಣ್ಣ ರಮೇಶ್ ಜಾರಕಿಹೊಳಿ ವಿರುದ್ಧ ಸತೀಶ್ ಜಾರಕಿಹೊಳಿ ವಿಡಿಯೋ ಚಮಕ್ ಕೊಟ್ಟಿದ್ದಾರೆ.

ಗೋಕಾಕ್ ಕ್ಷೇತ್ರದ ಉಪ ಚುನಾವಣೆ ಸನ್ನಿಹಿತವಾಗುತ್ತಿದೆ. ಅಣ್ಣ ತಮ್ಮಂದಿರ ನಡುವೆಯೇ ಸಮರ ಆರಂಭವಾಗಿದೆ. ಹಿನ್ನೆಲೆಯಲ್ಲಿ ನಿತ್ಯ ಒಂದಲ್ಲಾ ಒಂದು ವಿಷಯದಲ್ಲಿ ರಮೇಶ್ ಜಾರಕಿಹೊಳಿ ಕಾಲೆಳೆಯುತ್ತಿರುವ ಸತೀಶ್ ಈಗ ವಿಡಿಯೋ ಒಂದನ್ನು ಹರಿಬಿಟ್ಟಿದ್ದಾರೆ.

ಲಖನ್ ಜಾರಕಿಹೊಳಿ ಜೊತೆ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆಲಖನ್ ಜಾರಕಿಹೊಳಿ ಜೊತೆ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ

ಆ ವಿಡಿಯೋ ಮೂಲಕ ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟಿದ್ದಾರೆ.ಬಾಲಾ ಬಾಲಾ' ಹಾಡಿಗೆ ಮೀಮ್ಸ್ ಡ್ಯಾನ್ಸ್ ವೈರಲ್ ಮಾಡಿದ್ದಾರೆ. ಹೀಗೆ ಹೊಸದಾಗಿ ಮಿಮ್ಸ್ ಮಾಡಿ ರಮೇಶ್ ಜಾರಕಿಹೊಳಿ ತಾಳಕ್ಕೆ ಯಾವ ರೀತಿ ಕುಣಿಯಬೇಕೆಂದು ಸತೀಶ್ ಹೇಳಿದ್ದಾರೆ. ಇತ್ತಿಚೇಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಾಡಿಗೆ ರಮೇಶ್ ಕಾರ್ಯವೈಖರಿಯನ್ನು ಹೋಲಿಕೆ ಮಾಡಲಾಗಿದೆ.

Satish Jarakihioli Video Chamak Against Ramesh

ರಮೇಶ್ ಜಾರಕಿಹೊಳಿ ಹೇಳಿದಂತೆ ಕುಣಿಯಬೇಕು. ಅಂದಾಗ ಮಾತ್ರ ಆತ ಒಳ್ಳೆಯವನಾಗುತ್ತಾನೆ. ರಮೇಶ್ ಗೆ ವಿರೋಧ ಮಾಡಿದರೆ ಯಾವುದೋ ಒಂದು ಹಣೆ ಪಟ್ಟಿ ಕಟ್ಟುತ್ತಾನೆ. ರಮೇಶ್ ಜಾರಕಿಹೊಳಿ ಹೇಳಿದಂತೆ ಕುಣಿಯಬೇಕು. ಯಾವ ರೀತಿ ಕುಣಿಯಬೇಕು ಅಂದ್ರೆ ಈ ಚಿತ್ರದ ರೀತಿ". ಹೀಗೆ ರಮೇಶ್ ವಿರುದ್ಧ ವಾಗ್ದಾಳಿ ನಡೆಸಿ ಆ ನಂತರ ಮಿಮ್ಸ್ ಗೆ ಲಿಂಕ್ ಮಾಡಲಾಗಿದೆ.

ಬಿಜೆಪಿ ಅಭ್ಯರ್ಥಿಯಾಗಿ ರಮೇಶ್ ಜಾರಕಿಹೊಳಿ ಸ್ಪರ್ಧಿಸಿದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಕಣದಲ್ಲಿದ್ದಾರೆ. ಹೀಗಾಗಿ ಅಣ್ಣ-ತಮ್ಮಂದಿರು ಮಾತಿನ ಏಟು-ಎದುರೇಟು ನೀಡುತ್ತಿದ್ದರು.

English summary
Gokak Assembly by-elections are imminent. Satish Jarakihioli Video Chamak Against Ramesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X