ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಸಿರು ಬೆಂಗಳೂರಿಗಾಗಿ ಅದಮ್ಯ ಚೇತನದಿಂದ 'ಸಸ್ಯಾಗ್ರಹ'

|
Google Oneindia Kannada News

ಬೆಂಗಳೂರು, ಜೂನ್ 5: ಹಸಿರನ್ನು ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ಅದಮ್ಯ ಚೇತನ ಸಂಸ್ಥೆ ನಡೆಸುತ್ತಿರುವ ಸಸ್ಯಾಗ್ರಹ ಪರಿಸರ ಸ್ನೇಹಿ ಭಾನುವಾರದ 75 ನೇ ಕಾರ್ಯಕ್ರಮ ನಿನ್ನೆ (ಜೂನ್ 5) ಬೆಂಗಳೂರಿನ ಬಸವನಗುಡಿ ನ್ಯಾಶನಲ್ ಹೈಸ್ಕೂಲ್ ಪಕ್ಕದ ನಮ್ಮ ಮೆಟ್ರೋ ನಿಲ್ದಾಣದ ಬಳಿ ನಡೆಯಿತು.

ಹಸಿರು ಬೆಂಗಳೂರು 1:1 ಎಂಬ ಈ ಕಾರ್ಯಕ್ರಮದಲ್ಲಿ ಮೀನಾಕ್ಷಿ ನಿರಂಜನ ಟ್ರಸ್ಟ್ ವತಿಯಿಂದ 75 ಸಸಿಗಳನ್ನು ನೆಟ್ಟು ಹಸಿರು ಬೆಂಗಳೂರಿನ ಸಂಕಲ್ಪ ಮಾಡಲಾಯಿತು. ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಹೆಸರಿನಲ್ಲಿ ಬೆಂಗಳೂರಿನಲ್ಲಿ ಸಾಕಷ್ಟು ಮರಗಳು ಧರೆಗುರುಳುತ್ತಿರುವ ಸಂದರ್ಭದಲ್ಲಿ ಅದಮ್ಯ ಚೇತನ ಕೈಗೊಂಡಿರುವ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯವೇ ಸರಿ.[ಪರಿಸರ ದಿನದಂದು 'ಯುನೈಟೆಡ್ ವೇ'ನಿಂದ 10,000 ಸಸಿ ನೆಡುವ ಕಾರ್ಯಕ್ರಮ]

Sasyagriha from adamya chetana for green Bengaluru

ಕಾರ್ಯಕ್ರಮದಲ್ಲಿ ಕೇಂದ್ರ ರಸಗೊಬ್ಬರ ಸಚಿವ ಅನಂತ ಕುಮಾರ್, ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ.ತೇಜಸ್ವಿನಿ ಅನಂತಕುಮಾರ್, ಮೀನಾಕ್ಷಿ ನಿರಂಜನ ಟ್ರಸ್ಟ್ ನ ಕೃಷ್ಣಮೂರ್ತಿ, ಬಿಜೆಪಿ ಮಹಾನಗರ ಅಧ್ಯಕ್ಷ ಸದಾಶಿವ, ಪಾಲಿಕೆ ಸದಸ್ಯ ಡಿ.ಎನ್.ರಮೇಶ್, ಮಾಜಿ ಸದಸ್ಯರಾದ ಕೃಷ್ಣಾರೆಡ್ಡಿ, ಅನಿಲ ಕುಮಾರ್ ಮುಂತಾದವರು ಭಾಗವಹಿಸಿದ್ದರು.

English summary
To create a green Bengaluru, union minister Ananth Kumar and his wife chief of Adamya chethana organisation, Tejaswini ananth kumar, had organised a programme to plant a saplings in a Metro station near Basavanagudi national highschool, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X