ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಶಿಕಲಾ ನಟರಾಜನ್ ಆರೋಗ್ಯ ಸ್ಥಿರವಾಗಿದೆ: ಟಿಟಿವಿ ದಿನಕರನ್

|
Google Oneindia Kannada News

ಬೆಂಗಳೂರು,ಜನವರಿ 22: ಕೊರೊನಾ ಸೋಂಕಿಗೆ ಒಳಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಶಿಕಲಾ ನಟರಾಜನ್ ಅವರ ಆರೋಗ್ಯ ಸ್ಥಿರವಾಗಿದೆ ಯಾರೂ ಆತಂಕಪಡಬೇಕಿಲ್ಲ ಎಂದು ಅವರ ಸಂಬಂಧಿ ಟಿಟಿವಿ ದಿನಕರನ್ ಮಾಹಿತಿ ನೀಡಿದ್ದಾರೆ.

63 ವರ್ಷದ ಶಶಿಕಲಾ ಅವರು ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಆಪ್ತರಾಗಿದ್ದರು. ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಶಶಿಕಲಾ ನಟರಾಜನ್ ಅಸ್ವಸ್ಥ, ಬೌರಿಂಗ್ ಆಸ್ಪತ್ರೆಗೆ ದಾಖಲುಶಶಿಕಲಾ ನಟರಾಜನ್ ಅಸ್ವಸ್ಥ, ಬೌರಿಂಗ್ ಆಸ್ಪತ್ರೆಗೆ ದಾಖಲು

2019ರಲ್ಲಿ ಆದಾಯ ತೆರಿಗೆ ಇಲಾಖೆ ಮಾಜಿ ಎಐಎಡಿಎಂಕೆ ನಾಯಕಿ ಕೂಡ ಆಗಿರುವ ಶಶಿಕಲಾ ಅವರಿಗೆ ಸೇರಿದ 1,600 ಕೋಟಿ ರೂ.ಗಳ ಆಸ್ತಿಯನ್ನು ಬೆನಾಮಿ ವಹಿವಾಟು (ನಿಷೇಧ) ಕಾಯ್ದೆ ಪ್ರಕರಣದಲ್ಲಿ ಲಗತ್ತಿಸಿತ್ತು. ಈ ಪ್ರಕರಣದಲ್ಲಿ ಶಶಿಕಲಾ ಅವರಿಗೆ ಶಿಕ್ಷೆ ಕೂಡ ಆಗಿತ್ತು. ಅಂತೆಯೇ ಜೈಲಿನಲ್ಲಿ ಶಶಿಕಲಾ ಅವರಿಗೆ ವಿಶೇಷ ಆತಿಥ್ಯ ಸಿಗುತ್ತಿದೆ ಎಂಬ ಸುದ್ದಿ ಕೂಡ ವ್ಯಾಪಕ ಚರ್ಚೆಗೀಡಾಗಿತ್ತು.

Sasikalas Health Is Stable, Informs Nephew TTV Dhinakaran After Hospitalisation

ಟಿಟಿವಿ ದಿನಕನ್ ಅವರು, ನಾನು ಬೆಂಗಳೂರಿನ ಸ್ನೇಹಿತರಿಂದ ಮಾಹಿತಿ ಪಡೆದಿದ್ದೇನೆ. ಶಶಿಕಲಾ ಅವರ ಆರೋಗ್ಯ ಸ್ಥಿರವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ. ಆಸ್ಪತ್ರೆಯಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ನುರಿತ ವೈದ್ಯರು ಶಶಿಕಲಾ ಅವರ ಆರೋಗ್ಯದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಶಶಿಕಲಾ ಅವರಿಗೆ ಆಮ್ಲಜನಕದ ಅಗತ್ಯವಿದೆ ಎಂದು ದಿನಕರನ್ ಹೇಳಿದ್ದಾರೆ.

Recommended Video

ಸಿದ್ದು ನರಿ ಬುದ್ದಿ ನೋಡಿ ರಾಹುಲ್ ಶಾಕ್!! | Oneindia Kannada

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜೆ. ಜಯಲಲಿತಾ ಅವರ ಆಪ್ತೆ ವಿಕೆ ಶಶಿಕಲಾ ಅವರು ಸೆರೆವಾಸ ಮುಗಿಸಿ ಜನವರಿ 27ಕ್ಕೆ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಆದರೆ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲೇ ಆರೋಗ್ಯದಲ್ಲಿ ಏರುಪೇರಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

English summary
All India Anna Dravida Munnetra Kazhagam (AIADMK) leader VK Sasikala, who was shifted from the Central Jail in Bengaluru to the Lady Curzon Hospital after complaining of fever, is in a stable condition, as informed by her nephew in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X