ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸನ್ನಡತೆ ಆಧಾರದ ಮೇಲೆ ಬಿಡುಗಡೆ ಬಯಸಿದ್ದ ಶಶಿಕಲಾಗೆ ಹಿನ್ನಡೆ

|
Google Oneindia Kannada News

ಬೆಂಗಳೂರು, ಡಿ. 6: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಮುಖ್ಯಮಂತ್ರಿ ಜಯಲಲಿತಾ ಪರಮಾಪ್ತೆ ಶಶಿಕಲಾ ನಟರಾಜನ್ ಅವರು ಸನ್ನಡತೆ ಆಧಾರದ ಮೇಲೆ ಅವಧಿಗೂ ಮುನ್ನ ಜೈಲಿನಿಂದ ಬಿಡುಗಡೆ ಮಾಡುವಂತೆ ಕೋರಿದ್ದ ಅರ್ಜಿ ತಿರಸ್ಕೃತಗೊಂಡಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾಗೆ ನಾಲ್ಕು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಲಾಗಿದ್ದು, 10 ಕೋಟಿ ರೂ ದಂಡವನ್ನು ಆಕೆ ನ್ಯಾಯಾಲಯಕ್ಕೆ ಕಟ್ಟಬೇಕಿತ್ತು. ಇತ್ತೀಚೆಗೆ ದಂಡವನ್ನು ಡಿಮ್ಯಾಂಡ್ ಡ್ರಾಫ್ಟ್ ರೂಪದಲ್ಲಿ ಕೋರ್ಟಿಗೆ ಪಾವತಿಸಿದ್ದಾರೆ. ದಂಡ ಪಾವತಿಸಿರುವುದರಿಂದ ನಿಗದಿಯಂತೆ ಜನವರಿ 27, 2021ರಂದು ಬಿಡುಗಡೆಯಾಗಬಹುದು.

ಸನ್ನಡತೆ ಆಧಾರದ ಮೇಲೆ ಬಿಡುಗಡೆ ಬಯಸಿದ ಶಶಿಕಲಾಸನ್ನಡತೆ ಆಧಾರದ ಮೇಲೆ ಬಿಡುಗಡೆ ಬಯಸಿದ ಶಶಿಕಲಾ

ಆದರೆ, ನಿಗದಿತ ದಿನಾಂಕಕ್ಕೂ ಮುನ್ನವೇ ಜೈಲಿನಿಂದ ಶಶಿಕಲಾ ಬಿಡುಗಡೆ ಬಯಸಿದ್ದರು. ಬಿಡುಗಡೆ ಆಗಬೇಕಿರುವ ದಿನದ ಹಿಂದಿನ 135 ದಿನಕ್ಕೆ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ, ಈ ರೀತಿ ಅವಧಿಗೂ ಮುನ್ನ ಬಿಡುಗಡೆಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಜೈಲಿನ ಅಧಿಕಾರಿಗಳು ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಯಾವ ಆಧಾರದ ಮೇಲೆ ಅರ್ಜಿ ಹಾಕಲಾಗಿತ್ತು

ಯಾವ ಆಧಾರದ ಮೇಲೆ ಅರ್ಜಿ ಹಾಕಲಾಗಿತ್ತು

ಈ ಕುರಿತಂತೆ ಜೈಲಿನ ಅಧಿಕಾರಿಗಳಿಗೆ ಶಶಿಕಲಾ ಮನವಿ ಪತ್ರ ಸಲ್ಲಿಸಿದ್ದಾರೆ. ಈ ಪತ್ರವನ್ನು ಉನ್ನತಾಧಿಕಾರಿಗಳ ಅವಗಹನೆಗೆ ಕಳಿಸಲಾಗಿದ್ದು, ಈ ಬಗ್ಗೆ ನಿರ್ಧಾರ ಇನ್ನೂ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ. ಕರ್ನಾಟಕದ ಕಾರಾಗೃಹ ನಿಯಮಾವಳಿಗಳ ಪ್ರಕಾರ, ಪ್ರತಿ ತಿಂಗಳು ಸನ್ನಡತೆ ಆಧಾರ ಮೇಲೆ ಮೂರು ದಿನಗಳ ಅವಧಿ ಕಡಿತ ಸಾಧ್ಯತೆಯಿದೆ. ಶಶಿಕಲಾ ಅವರು ಸದ್ಯ 43 ತಿಂಗಳ ಜೈಲುವಾಸ ಪೂರೈಸಿದ್ದು, 135 ದಿನಗಳ ಅವಧಿ ಕಡಿತಕ್ಕೆ ಅರ್ಹರಾಗಿದ್ದಾರೆ ಎಂದು ಶಶಿಕಲಾ ಪರ ವಕೀಲ ಎನ್ ರಾಜ ಸೆಂತೂರ್ ಪಾಂಡಿಯನ್ ಹೇಳಿದ್ದಾರೆ.

ಜೈಲಿನ ಅಧಿಕಾರಿಗಳು ಅನುಸರಿಸಿದ ಕ್ರಮವೇನು?

ಜೈಲಿನ ಅಧಿಕಾರಿಗಳು ಅನುಸರಿಸಿದ ಕ್ರಮವೇನು?

ಶಶಿಕಲಾ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು, ನೀವು ಜೀವಾವಧಿ ಶಿಕ್ಷೆಗೆ ಒಳಗಾದವರೇ, ನಿಮ್ಮನ್ನ ಅವಧಿಗೂ ಮುನ್ನ ಬಿಡುಗಡೆ ಮಾಡಲು ಎಂದು ಮರು ಪ್ರಶ್ನೆ ಹಾಕಿದ್ದಾರೆ. ಅಲ್ಲದೆ, ಕೇವಲ ಜೀವಾವಧಿ ಶಿಕ್ಷೆಗೆ ಒಳಪಡಿಸಿದವರಿಗೆ ಮಾತ್ರ ಅವರ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗುತ್ತದೆ. ಆದ್ರೆ ನಿಮಗೆ ಜೀವಾವಧಿ ಶಿಕ್ಷೆ ಪ್ರಕಟಿಸಿಲ್ಲ ಹೀಗಾಗಿ ಅವಧಿಗೂ ಮುನ್ನವೇ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಜೈಲಿನ ಹಿರಿಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಶಶಿಕಲಾ ಅವರ ಅರ್ಜಿಯನ್ನು ಗೃಹ ಇಲಾಖೆಗೆ ಕಳಿಸಿ, ಕಾನೂನಿನಲ್ಲಿ ಈ ಬಗ್ಗೆ ಅವಕಾಶವಿದೆಯೇ, ಕರ್ನಾಟಕದ ಕಾರಾಗೃಹ ನಿಯಮಾವಳಿಯನ್ನು ಪರಿಶೀಲನೆ ನಡೆಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.

ಜೈಲಿನ ನಿಯಮ ಏನು ಹೇಳುತ್ತದೆ?

ಜೈಲಿನ ನಿಯಮ ಏನು ಹೇಳುತ್ತದೆ?

ಕರ್ನಾಟಕದ ಕಾರಾಗೃಹ ನಡಾವಳಿ ನಿಯಮಗಳ ಪ್ರಕಾರ ಜೀವಾವಧಿ ಶಿಕ್ಷೆಗೆ ಒಳಗಾಗದವರಿಗೆ ಮಾತ್ರ ಈ ರೀತಿ ಬಿಡುಗಡೆ ಮಾಡಬಹುದು..

ಪುರುಷರಿಗೆ 15 ವರ್ಷ, ಮಹಿಳೆಯರಿಗೆ 9-10 ವರ್ಷ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಅವರ ಸನ್ನಡತೆ ಆಧರಿಸಿ ಹಿರಿಯ ಅಧಿಕಾರಿಗಳಿಗೆ ಅಲ್ಲಿನ ಕಿರಿಯ ಅಧಿಕಾರಿಗಳು ಮಾಹಿತಿ ರವಾನಿಸಬೇಕು. ಹಿರಿಯ ಅಧಿಕಾರಿಗಳು ಅದನ್ನೆಲ್ಲಾ ಪರಿಶೀಲಿಸಿ ಅವಧಿಗೂ ಮುನ್ನ ರಿಲೀಸ್ ಮಾಡಬಹುದಾ ಎಂದು ತೀರ್ಮಾನಿಸುತ್ತಾರೆ.

ಆದರೆ, ಶಶಿಕಲಾ ಅರ್ಜಿಯನ್ನು ಹಿರಿಯ ಅಧಿಕಾರಿಗಳು ತಿರಸ್ಕರಿಸಿರುವುದರಿಂದ ನಿಗದಿ ಮಾಡಿರುವ ಅವಧಿ ಪೂರೈಸಿದ ಬಳಿಕವಷ್ಟೇ ಶಶಿಕಲಾ ಬಿಡುಗಡೆಗೊಳ್ಳಲಿದ್ದಾರೆ.

Recommended Video

Dhoni ನಂತರ ಭಾರತ ಸಿಕ್ಕ ಸೂಪರ್ Finisher Hardik Pandya | Oneindia Kannada
ಶಶಿಕಲಾ ಆಪ್ತರ ಬಿಡುಗಡೆ ಯಾವಾಗ?

ಶಶಿಕಲಾ ಆಪ್ತರ ಬಿಡುಗಡೆ ಯಾವಾಗ?

ದಂಡ ವಿಧಿಸಿದ ಬಳಿಕ ಬಿಡುಗಡೆಗೆ ಅರ್ಹ 2014ರ ಸೆಪ್ಟೆಂಬರ್‌ ನಲ್ಲಿ ಸ್ಪೆಷಲ್ ಟ್ರಯಲ್ ಕೋರ್ಟ್ ನ್ಯಾ. ಜಾನ್ ಮೈಕೇಲ್ ಕನ್ಹಾ ಐಪಿಸಿ ಸೆಕ್ಷನ್ 109ರಡಿ ಜೆ ಜಯಲಲಿತಾ, ಶಶಿಕಲಾ, ಸುಧಾಕರನ್, ಇಳವರಸಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರು. ಶಶಿಕಲಾ ದತ್ತು ಪುತ್ರ ವಿಎನ್ ಸುಧಾಕರನ್, ಜೆ ಇಳವರಸಿ ಹಾಗೂ ಶಿಶಿಕಲಾ ಅವರಿಗೆ 2017ರ ಫೆಬ್ರವರಿ 15ರಂದು ಜೈಲುಶಿಕ್ಷೆ ಪ್ರಕಟವಾಗಿತ್ತು. ಈಗ 10 ಕೋಟಿ ರು ದಂಡ ಪಾವತಿಸಿದ ಬಗ್ಗೆ ನ್ಯಾಯಾಲಯದಿಂದ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ ಪತ್ರ ತಲುಪಿದ ಬಳಿಕ ಬಿಡುಗಡೆ ಕುರಿತ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅಧಿಕೃತವಾಗಿ ಮಾಹಿತಿ ಬಂದಿದೆ. ಶಶಿಕಲಾ, ವಿಎನ್ ಸುಧಾಕರನ್, ಜೆ ಇಳವರಸಿ ಅವರಿಗೂ 10ಕೋಟಿ ಪ್ಲಸ್ 10 ಸಾವಿರ ರು ದಂಡ ವಿಧಿಸಲಾಗಿದ್ದು, ಅವರು ಕೂಡಾ ದಂಡ ವಿಧಿಸಿದ ಬಳಿಕ ಬಿಡುಗಡೆಗೆ ಅರ್ಹರಾಗುತ್ತದೆ

English summary
Sasikala Natarajan early remission request rejected by Parappana Agrahara jail authorities. V K Sasikala, serving a four-year jail term on graft charges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X