ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಭಾನುವಾರ ಅಸಂಖ್ಯ ಪ್ರಥಮರ ಗಣಮೇಳ, ಸರ್ವಶರಣರ ಸಮ್ಮೇಳನ

|
Google Oneindia Kannada News

ಬೆಂಗಳೂರು, ಫೆಬ್ರವರಿ 15: ಚಿತ್ರದುರ್ಗದ ಢಾ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ನಡೆಯಲಿರುವ ಅಸಂಖ್ಯ ಪ್ರಥಮರ ಗಣಮೇಳ ಹಾಗೂ ಸರ್ವಶರಣವ ಸಮ್ಮೇಳದನ ಐತಿಹಾಸಿಕ ಸಮಾವೇಶವಾಗುವುದರಲ್ಲಿ ಅನುಮಾನವಿಲ್ಲ ಎಂದು ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಡಾ.ಎಂ.ವೆಂಕಟಸ್ವಾಮಿ ಹಾಗೂ ಅಂತರ್‌ ರಾಜ್ಯ ಜನನಾಯಕ ಕರ್ಪೂರಿ ಠಾಕೂರ್‌ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಬಿ.ಶಿವಕುಮಾರ್‌ ಹೇಳಿದ್ದಾರೆ.

ನಗರದ ಪ್ರೆಸ್‌ ಕ್ಲಬ್‌ನಲ್ಲಿಂದು ಅಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೌರಿಕ, ಹಡಪದ, ಭಂಡಾರಿ ಹೆಸರುಗಳಲ್ಲಿ ಕರೆಯಲ್ಪಡುತ್ತಿರುವ ಸವಿತಾ ಸಮಾಗದ ಜನರು ಫೆಬ್ರವರಿ 16 ರಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಅಸಂಖ್ಯ ಪ್ರಥಮರ ಗಣಮೇಳದಲ್ಲಿ ಸಾವಿರಾರು ಜನಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಅಂತರ್‌ ರಾಜ್ಯ ಜನನಾಯಕ ಕರ್ಪೂರಿ ಠಾಕೂರ್‌ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಬಿ. ಶಿವಕುಮಾರ್‌ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಡಾ.ಎಂ.ವೆಂಕಟಸ್ವಾಮಿ ಅವರ ನೇತೃತ್ವದಲ್ಲಿ ನೂರಾರು ಮಂಗಳ ವಾದ್ಯಗಳೊಂದಿಗೆ ಗಣ ಮೇಳಕ್ಕೆ ಮಂಗಳ ಬಯುಸುವ ಸಾಂಸ್ಕೃತಿಕ ಮೆರವಣಿಗೆಯಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ನಂದಿಗ್ರೌಂಡ್ಸ್‌ ನಲ್ಲಿ ಜಮಾಯಿಸುತ್ತಿದ್ದೇವೆ.

Sarva Sharanara Sammelana In Bengaluru On February 16

ಅಂದು 12 ನೇ ಶತಮಾನದಲ್ಲಿ ಬಸವಾದಿ ಶರಣರು ಆಯೋಜಿಸಿದ್ದ ಪ್ರಥಮರ ಗಣಮೇಳದ ರೀತಿಯಲ್ಲಿ ಇಂದು ಬಸವಣ್ಣನವರ ರೂಪದಲ್ಲಿ ಸಾಮಾಜಿಕ ಪರಿವರ್ತನೆಯಲ್ಲಿ ತೊಡಗಿಸಿಕೊಂಡಿರುವ ಡಾ.ಶಿವಮೂರ್ತಿ ಮುರುಘಾ ಶರಣರು 16 ನೇ ಫೆಬ್ರವರಿ ಭಾನುವಾರದಂದು ಆಯೋಜಿಸಿರುವ ಗಣಮೇಳವು ಐತಿಹಾಸಿಕ ಸಮಾವೇಶವಾಗುತ್ತದೆ ಎಂದು ಡಾ. ವೆಂಕಟಸ್ವಾಮಿ ಹೇಳಿದರು.

ಸಾಮಾಜಿಕ ಪರಿವರ್ತನೆಯ ಮುಂದುವರಿಕೆಯ ಭಾಗವಾಗಿ ಈ ಐತಿಹಾಸಿಕ ಗಣಮೇಳ ನಡೆಯುತ್ತಿರುವುದರಿಂದ ಸಮಸ್ತ ಶೋಷಿತ ಸಮುದಾಯಗಳು ಆಕರ್ಷಿತಗೊಂಡಿವೆ. ಅಸಂಖ್ಯೆಯಲ್ಲಿ ಈ ಗಣಮೇಳದಲ್ಲಿ ಭಾಗವಹಿಸಬೇಕೆಂದು ಈ ಮೂಲಕ ಕರೆ ನೀಡುತ್ತೇವೆ ಎಂದು ಇದೇ ಸಂಧರ್ಭದಲ್ಲಿ ತಿಳಿಸಿದರು.

English summary
Sarva Sharanara Sammelana and Prathamara Ganamela organized in Bengaluru on on February 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X