ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓದು ಜನಮೇಜಯ, ಕನ್ನಡದ ಕುರಿತ ಒಂದು ಚರ್ಚೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 28: ಕನ್ನಡ ರಾಜ್ಯೋತ್ಸವದ ಪ್ರಯುಕ್ತ 'ಓದು ಜನಮೇಜಯ' ಕನ್ನಡ ಕುರಿತು ಒಂದು ಚರ್ಚೆಯನ್ನು ಸಪ್ನ ಬುಕ್‌ ಹೌಸ್ ನವೆಂಬರ್ 1 ರಂದು ಆಯೋಜಿಸಿದೆ.

ಗಾಂಧಿಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಬೆಳಗ್ಗೆ 10 ಗಂಟೆಯಿಂದ ಚರ್ಚೆ ಆರಂಭವಾಗಲಿದೆ.

ಇನ್‌ಫೋಸಿಸ್ ಪ್ರತಿಷ್ಠಾನ ಅಧ್ಯಕ್ಷೆ ಡಾ. ಸುಧಾಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ, ಖ್ಯಾತ ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ಅವರು ಅಧ್ಯಕ್ಷತೆವಹಿಸಲಿದ್ದಾರೆ.

Sapna Book House Organising A Discussion On Kannada

ಮುಖ್ಯ ಅತಿಥಿಗಳಾಗಿ ದಿನ ಪತ್ರಿಕೆಗಳ ಮುಖ್ಯಸ್ಥರುಗಳಾದ ವಿಶ್ವೇಶ್ವರ ಭಟ್, ರವೀಂದ್ರ ಭಟ್ಟ, ರವಿ ಹೆಗಡೆ, ಶ್ರೀವತ್ಸ ನಾಡಿಗ್, ಹುಣಸವಾಡಿ ರಾಜನ್, ಹರಿಪ್ರಕಾಶ್ ಕೋಣೆಮನೆ, ಚನ್ನೇಗೌಡ ಕೆ.ಎನ್., ವಿನಾಯಕ ಭಟ್ ಮೂರೂರು ಅವರು ಆಗಮಿಸಲಿದ್ದಾರೆ.

ಪ್ರಸ್ತಾವನೆ- ಜೋಗಿ, ಅನುವಾದ ಎಂಬ ಮಂತ್ರ ದಂಡದ ಕುರಿತು ವಸುಧೇಂದ್ರ ಮಾತು, ಹೊಸ ಓದುಗನ ಜಗತ್ತು ಕುರಿತು ಕರಣಂ ಪವನ್ ಪ್ರಸಾದ್, ಪ್ರಕಾಶನ ಮತ್ತು ಮಾರುಕಟ್ಟೆ ಕುರಿತು ಜಿ.ಎನ್ ಮೋಹನ್, ಡಿಜಿಟಲೀ ಯುವರ್ಸ್ ಕುರಿತು ವಿಶ್ವೇಶ್ವರ ಭಟ್, ನಮ್ಮ ತಪ್ಪುಗಳೇನು ಕುರಿತು ಕೆವಿ ಅಕ್ಷರ ಮಾತನಾಡಲಿದ್ದಾರೆ. ಡಾ, ಸಿದ್ಧಲಿಂಗಯ್ಯ ಚರ್ಚೆಯ ಅಧ್ಯಕ್ಷತೆವಹಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಡಾ. ಎಂ ಚಿದಾನಂದಮೂರ್ತಿ, ಡಾ. ಕಮಲಾ ಹಂಪನಾ, ಡಾ. ಎಚ್‌ಎಸ್ ವೆಂಕಟೇಶಮೂರ್ತಿ, ಡಾ. ಹಂಪ ನಾಗರಾಜಯ್ಯ, ಡಾ. ದೊಡ್ಡರಂಗೇಗೌಡ, ಡಾ. ವಸುಂಧರಾ ಭೂಪತಿ, ಡಾ.ಕೆ. ಮರುಳಸಿದ್ದಪ್ಪ, ಎಚ್‌. ಡುಂಡಿರಾಜ್ ಪಾಲ್ಗೊಳ್ಳಲಿದ್ದಾರೆ.

English summary
Sapna Book House has organized a discussion on Kannada 'Odhu Janamejaya' on November 1 at Gandhi Bhavan Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X