ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಬೆನ್ನಲ್ಲೇ ಹಂದಿ ಜ್ವರದ ಭೀತಿ: ಬಾಗಿಲು ಮುಚ್ಚಿದ ಸಾಫ್ಟ್‌ವೇರ್ ಕಂಪೆನಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 21: ಜಗತ್ತಿನಾದ್ಯಂತ ಮಾರಕ ಕೊರೊನಾ ವೈರಸ್ ಹಾವಳಿಯಿಂದ ಜನರು ಆತಂಕಕ್ಕೆ ಒಳಗಾಗಿರುವ ಬೆನ್ನಲ್ಲೇ ಹಂದಿ ಜ್ವರದ (ಎಚ್‌1ಎನ್1) ಭೀತಿ ಶುರುವಾಗಿದೆ. ತನ್ನ ಇಬ್ಬರು ಉದ್ಯೋಗಿಗಳಲ್ಲಿ ಎಚ್‌1ಎನ್1 ಪತ್ತೆಯಾದ ಹಿನ್ನೆಲೆಯಲ್ಲಿ ಜರ್ಮನಿ ಮೂಲದ ಸಾಫ್ಟ್‌ವೇರ್ ಕಂಪೆನಿ ಸ್ಯಾಪ್ (SAP) ದೇಶದಾದ್ಯಂತ ತನ್ನ ಕಚೇರಿಗಳಿಗೆ ಬೀಗ ಹಾಕಿದೆ.

ಬೆಂಗಳೂರು, ಗುರುಗ್ರಾಮ ಮತ್ತು ಮುಂಬೈನಲ್ಲಿರುವ ತನ್ನ ಕಚೇರಿಗಳನ್ನು ಸ್ಯಾಪ್ ತಾತ್ಕಾಲಿಕವಾಗಿ ಮುಚ್ಚಿದ್ದು, ಎಲ್ಲ ಉದ್ಯೋಗಿಗಳೂ ಕೆಲವು ಸಮಯದವರೆಗೂ ಮನೆಯಿಂದಲೇ ಕಾರ್ಯನಿರ್ವಹಣೆ ಮಾಡುವಂತೆ ಕಂಪೆನಿ ಗುರುವಾರ ಸೂಚನೆ ನೀಡಿದೆ.

ಸ್ಯಾಪ್ ಇಂಡಿಯಾದ ಬೆಂಗಳೂರು ಇಕೋ ವರ್ಲ್ಡ್ ಕಚೇರಿಯಲ್ಲಿನ ಇಬ್ಬರು ಉದ್ಯೋಗಿಗಳಲ್ಲಿ ಎಚ್‌1ಎನ್1 ವೈರಸ್ ಇರುವುದು ದೃಢಪಟ್ಟಿದೆ. ಇದರಿಂದ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಇದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನೀವು ಮನೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗುತ್ತಿದೆ' ಎಂದು ಕಂಪೆನಿ ತನ್ನ ಉದ್ಯೋಗಿಗಳಿಗೆ ಹೇಳಿದೆ.

ಮನೆಯಿಂದಲೇ ಕೆಲಸ ಮಾಡಿ

ಮನೆಯಿಂದಲೇ ಕೆಲಸ ಮಾಡಿ

'ನಮ್ಮ ಉದ್ಯೋಗಿಗಳು ಮತ್ತು ಅವರ ಕುಟುಂಬದವರ ಆರೋಗ್ಯ ನಮಗೆ ಬಹಳ ಆದ್ಯತೆಯ ವಿಚಾರವಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು, ಗುರುಗ್ರಾಮ ಮತ್ತು ಮುಂಬೈನ ಎಲ್ಲ ಸ್ಯಾಪ್ ಕಚೇರಿಗಳನ್ನು ತೀವ್ರ ಸ್ವಚ್ಛಕಾರ್ಯಕ್ಕಾಗಿ ಮುಚ್ಚಲಾಗುತ್ತಿದೆ. ಹೀಗಾಗಿ ಈ ಸ್ಥಳಗಳಲ್ಲಿನ ಎಲ್ಲ ಸ್ಯಾಪ್ ಉದ್ಯೋಗಿಗಳೂ ಮುಂದಿನ ಸೂಚನೆಯವರೆಗೂ ಮನೆಯಿಂದಲೇ ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಲಾಗುತ್ತಿದೆ' ಎಂದು ತಿಳಿಸಿದೆ.

ವೈದ್ಯರನ್ನು ಸಂಪರ್ಕಿಸಿ

ವೈದ್ಯರನ್ನು ಸಂಪರ್ಕಿಸಿ

ಎಚ್‌1ಎನ್1 ಸೋಂಕು ತಗುಲಿದ್ದ ಉದ್ಯೋಗಿಗಳ ಜತೆಗೆ ಸಂಪರ್ಕ ಹೊಂದಿದ್ದಿರಬಹುದಾದ ಸಹೋದ್ಯೋಗಿಗಳನ್ನು ಪತ್ತೆಹಚ್ಚಲು ವಿಸ್ತೃತವಾದ ಪರಿಶೀಲನೆ ನಡೆಸಲಾಗುತ್ತಿದೆ ಎಂದೂ ಕಂಪೆನಿ ತಿಳಿಸಿದೆ.

'ನಿಮ್ಮ ಮತ್ತು ನಿಮ್ಮ ಕುಟುಂಬದ ಯಾವುದೇ ಸದಸ್ಯರಲ್ಲಿ ಶೀತ, ಜ್ವರ ಮತ್ತು ಕೆಮ್ಮಿನ ಲಕ್ಷಣಗಳು ಕಂಡುಬಂದರೆ ದಯವಿಟ್ಟು ವೈದ್ಯಕೀಯ ಸಲಹೆ ಪಡೆದುಕೊಳ್ಳಿರಿ' ಎಂದು ಸಲಹೆ ನೀಡಿದೆ.

ಅಪಾಯಕಾರಿಯಾಗಿಲ್ಲ

ಅಪಾಯಕಾರಿಯಾಗಿಲ್ಲ

ಕಳೆದ ವರ್ಷಕ್ಕೆ ಹೋಲಿಸಿದರೆ ಎಚ್‌1ಎನ್1 ಪ್ರಕರಣಗಳು ತೀರಾ ಕಡಿಮೆ ಇದೆ. ಹಾಗೂ ಈ ಬಾರಿ ಯಾವುದೇ ಆತಂಕಕಾರಿ ಸ್ವರೂಪದಲ್ಲಿ ಕಾಣಿಸಿಕೊಂಡಿಲ್ಲ. ಇದು ಸ್ವಯಂ ಮಿತಿಯ ಕಾಯಿಲೆಯಾಗಿದ್ದು, ಕೆಲವೇ ಕೆಲವು ಪ್ರಕರಣಗಳು ಸಂಕೀರ್ಣಗೊಳ್ಳುವ ಸಾಧ್ಯತೆ ಇದೆ. ಇದಕ್ಕಾಗಿ ಈ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಸ್ಯಾಪ್ ಕಂಪೆನಿ ಏಕೆ ಈ ರೀತಿ ನಿರ್ಧಾರ ತೆಗೆದುಕೊಂಡಿದೆಯೋ ತಿಳಿದಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿಕೆ ನೀಡಿದೆ.

ರಾಜ್ಯದಲ್ಲಿ ಎಚ್‌1ಎನ್1 ಪ್ರಮಾಣ

ರಾಜ್ಯದಲ್ಲಿ ಎಚ್‌1ಎನ್1 ಪ್ರಮಾಣ

ರಾಜ್ಯದಲ್ಲಿ 2010ರಿಂದ ಇದುವರೆಗೂ ಎಚ್‌1ಎನ್1ನ 85,091 ಪ್ರಕರಣಗಳು ಕಂಡುಬಂದಿದ್ದು, ಅದರಲ್ಲಿ 14,831 ಮಂದಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಹತ್ತು ವರ್ಷಗಳಲ್ಲಿ 529 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 2020ರಲ್ಲಿ 1648 ಮಂದಿ ಎಚ್‌1ಎನ್1 ತಪಾಸಣೆಗೆ ಒಳಗಾಗಿದ್ದು, 175 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. 2019ರಲ್ಲಿ 15,140 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿತ್ತು. 2030 ಮಂದಿಯಲ್ಲಿ ಸೋಂಕು ಇರುವುದ ದೃಢಪಟ್ಟಿದ್ದು, ಎಚ್‌1ಎನ್1ನಿಂದ 96 ಮಂದಿ ಬಲಿಯಾಗಿದ್ದರು ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶ ತಿಳಿಸಿದೆ.

English summary
SAP India shuts down its all offices across India for temporarily after two of its employees tested positive for the H1N1 or Swine Flu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X