ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಕೇತಿ ಫುಡ್ಸ್ : ಸಾಂಪ್ರದಾಯಿಕ ಖಾದ್ಯಗಳು ಈಗ ಮಲ್ಲೇಶ್ವರದಲ್ಲೂ ಲಭ್ಯ!

|
Google Oneindia Kannada News

ಬೆಂಗಳೂರು, ಫೆಬ್ರವರಿ 08: ಸಂಕೇತಿ ಫುಡ್ಸ್ ನಗರದ ಮಲ್ಲೇಶ್ವರದಲ್ಲಿ 'ಅಡು ಕಲೆ ಎಕ್ಸ್ ಪೀರಿಯನ್ಸ್ ಸ್ಟೋರ್' ವಿನೂತನ ಮಳಿಗೆಯನ್ನು ಫೆ.11 ರಂದು ಆರಂಭಿಸುತ್ತಿದೆ.

ಜೀವನ, ಒತ್ತಡದ ಬದುಕಿನಲ್ಲಿ, ನಮ್ಮ ಬದುಕಿನ ಅವಿಭಾಜ್ಯ ಅವಶ್ಯಕತೆಯಾದ ಆಹಾರವನ್ನು ಸಿದ್ಧ ಪಡಿಸಿಕೊಳ್ಳಲು ಸಾಕಷ್ಟು ಸಮಯವೇ ದೊರಕುವುದಿಲ್ಲ, ಹಾಗಾಗಿ ಏನೋ ಒಂದು ತಿಂದರಾಯಿತು ಎಂದು. ದಿನ ಕಳೆಯುವ ಅನೇಕ ಅಸಹಾಯಕರಿಗೆ ಸಹಾಯ ಹಸ್ತ ನೀಡುವ ಸಲುವಾಗಿ 8 ವರ್ಷಗಳ ಹಿಂದೆ ಪ್ರಾರಂಭಿಸಿದ ಸಣ್ನ ಮಹಿಳಾ ಉದ್ದಿಮೆ ಸಂಕೇತಿ ಫುಡ್ ಪ್ರಾಡಕ್ಟ್ಸ್ ಅಡುಗೆ ಕಲೆ.

ಯಾವುದೇ ಪ್ರಿಸರ್ವೇಟೀವ್ಸ್ ಗಳಿಲ್ಲದೆ ಕೊಬ್ಬಿನ ಅಂಶವಿಲ್ಲದ ಆಹಾರವನ್ನು ತಯಾರಿಸಲಾಗುತ್ತದೆ. ಗ್ರಾಹಕರ ರುಚಿ-ಶುಚಿ ಆರೋಗ್ಯಕ್ಕೆ ಪ್ರಥಮ ಆದ್ಯತೆ ಇದೆ. ಅವರು ತಯಾರಿಸಿದ 40ಕ್ಕೂ ಹೆಚ್ಚಿನ ಖಾದ್ಯ ವಿದೇಶದಲ್ಲಿಯೂ ಜನನಿತವಾಗಿದೆ ಎಂದು ಮಾಲತಿ ಶರ್ಮಾ ತಿಳಿಸಿದ್ದಾರೆ.

Sankethi food products'Adukale' new outlet now in Malleshwaram

ಅಮ್ಮ-ಅಜ್ಜಿಯರ ಕೈ ಅಡುಗೆಯ ರುಚಿಯನ್ನು, ಇಂದಿನವರೆಗೂ ಉಣಬಡಿಸುವ ಆಶಯ ಹೊತ್ತು ಸಾಂಪ್ರದಾಯಿಕ ರೀತಿಯಲ್ಲಿ ಸಿದ್ಧಪಡಿಸಲಾಗುತ್ತಿರುವ, ನಮ್ಮ ಖಾಧ್ಯ ಪದಾರ್ಥಗಳು ದುಡಿಯುವ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಮತ್ತು ಹಿರಿಯ ನಾಗರೀಕರಿಗೆ ಒಂದು ವರದಾನವಾಗಿ ಲಭಿಸಿದೆ ಎನ್ನುವುದು ನಮ್ಮ ಗ್ರಾಹಕರಿಂದ ಬಂದಿರುವ ಪ್ರಶಂಸೆಯ ನುಡಿಗಳು.

ಎಂಟು ವರ್ಷಗಳ ಹಿಂದೆ ಕೇವಲ ಒಂದು ಸ್ಟವ್ ಬಾಣಲೆ ಹಾಗೂ ಜಾಲರದಿಂದ ನಾಗರಭಾವಿ ರಸ್ತೆಯ ಗಾರ್ಡನ್ ವಿಲ್ಲಾಸ್ ನ ಮನೆಯ ಪುಟ್ಟ ಕೋಣೆಯೊಂದರಲ್ಲಿ ಪ್ರಾರಂಭಗೊಂಡ ಅಡುಗೆಕಲೆ ಈಗ ಅನೇಕರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸಿಕೊಟ್ಟು ಒಂದು ಸಣ್ಣ ಮಹಿಳಾ ಉದ್ಯಮವಾಗಿ ಬೆಳೆದಿದೆ ಎಂದಿದ್ದಾರೆ.

English summary
Sankethi food products Adukale traditional food makers at Nagarabhavi in Bengaluru. Sankethi food products now opens with new outlet in Malleshwaram February 11. Adukale food 4 decades old sanketi products adukale serving for the people of bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X