ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯನಗರದಲ್ಲಿ ಪುರಂದರೋತ್ಸವ-2015, ಸಂಗೀತ ನೃತ್ಯೋತ್ಸವ

By Vanitha
|
Google Oneindia Kannada News

ಬೆಂಗಳೂರು, ಅಕ್ಟೋಬರ್, 10 : ಕರ್ನಾಟಕ ಸಂಗೀತ ಪಿತಾಮಹ, ದಾಸ ಸಾಹಿತ್ಯದ ಮೇರು ದಿಗ್ಗಜ ಪುರಂದರದಾಸರ 450ನೇ ಜನ್ಮೋತ್ಸವದ ಪ್ರಯುಕ್ತ ಸಂಗೀತ ಸಂಭ್ರಮ ಸಂಸ್ಥೆಯು ಅಕ್ಟೋಬರ್ 10ರ ಶನಿವಾರ ಮತ್ತು 11ರ ಭಾನುವಾರದಂದು ಜಯನಗರದ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಲ್ಲಿ ಪುರಂದರೋತ್ಸವ-2015 ಹಮ್ಮಿಕೊಂಡಿದೆ.

ಸತತವಾಗಿ ಎರಡು ದಿನ ನಡೆಯುವ ಪುರಂದರೋತ್ಸವ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಜರುಗಲಿದ್ದು, ಈ ಕಾರ್ಯಕ್ರಮದ ಜವಾಬ್ದಾರಿಯನ್ನು ಸಂಗೀತ ಸಂಭ್ರಮದ ನಿರ್ದೇಶಕಿಯಾದ ಪಿ. ರಮಾ ವಹಿಸಿಕೊಂಡಿದ್ದಾರೆ.[ಕ್ಯಾನ್ಸರಿಗೆ ಬಲಿಯಾದ ವೇಣು ವಾದಕ ಎನ್ ರಮಣಿ]

Sangeeta Sambrama organize Purandarotsava-2015 on Saturday and Sunday

ಪುರಂದರೋತ್ಸವದ ಮೊದಲ ದಿನ ಅಕ್ಟೋಬರ್ 10ರ ಶನಿವಾರದಂದು ನವರತ್ನ ಮಾಲಿಕಾ ತಂಡದ 2000 ಕಲಾವಿದರು ಕರೌಕೆ (karaoke) ಸಂಗೀತದಲ್ಲಿ ಶ್ರೀನಿವಾಸ ಕಲ್ಯಾಣ ಕಥೆಯನ್ನು ಪ್ರಸ್ತುತ ಪಡಿಸಲಿದ್ದಾರೆ. ಎರಡನೇ ದಿನವಾದ ಭಾನುವಾರದಂದು 60 ಮಂದಿ ನೃತ್ಯ ಕಲಾವಿದರಿಂದ 6 ನೃತ್ಯಗಳು ಜರುಗಲಿದ್ದು, ಇವರು ಪ್ರಸಿದ್ಧ ಸಂಗೀತಗಾರರ ದನಿಗೆ ಹೆಜ್ಜೆ ಹಾಕಲಿದ್ದಾರೆ.

ಈ ನೃತ್ಯ ಸಂಭ್ರಮದಲ್ಲಿ ನೃತ್ಯಾಂತರ ತಂಡದ ಕಲಾವಿದರು ಒಡಿಸ್ಸಿ ನೃತ್ಯ ಪ್ರದರ್ಶಿಸಲಿದ್ದು, ಎರಡು ದಿನದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮಧುಲಿತಾ ಮಹೋಪಾತ್ರ 9972530600 ಸಂಪರ್ಕಿಸಬಹುದು.

English summary
Sangeeta Sambrama troup organizes Purandarotsava-2015 on Saturday and Sunday in Chandragupta stadium, Jayanagar, Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X