ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಯಾಂಡಲ್ ವುಡ್ ಡ್ರಗ್ ಡೀಲ್ ಪ್ರಕರಣ: ಡ್ರಗ್ ಪೆಡ್ಲರ್ ಸೆರೆ

|
Google Oneindia Kannada News

ಬೆಂಗಳೂರು, ಜನವರಿ 18: ಸ್ಯಾಂಡಲ್ ವುಡ್ ಡ್ರಗ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಟಿಗಳಿಗೆ ಡ್ರಗ್ ಪೂರೈಸುತ್ತಿದ್ದ ವಿದೇಶಿ ಡ್ರಗ್ ಪೆಡ್ಲರ್ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಚಿಡಿಬೈರ್ ಅಯಮರೂಸ್ ಬಂಧಿತ ಆರೋಪಿ. ಈತನನ್ನು ಸ್ಯಾಂಡಲ್ ವುಡ್ ಡ್ರಗ್ ಡೀಲ್ ಪ್ರಕರಣದಲ್ಲಿ 21 ನೇ ಆರೋಪಿಯಾಗಿದ್ದಾನೆ.

Bengaluru; sandalwood drug deal: Drug peddler arrested

Recommended Video

karkala , nippani , ಬೆಳಗಾವಿ ಮಹಾರಾಷ್ಟ್ರ ಗೆ ಸೇರಬೇಕಂತೆ !! | Oneindia Kannada

ವಿದೇಶಿ ಡ್ರಗ್ ಪೆಡ್ಲರ್ ಚಿಡಿಬೈರ್ ನನ್ನು ಬಂಧಿಸಿದ ವೇಳೆ ಹತ್ತು ಗ್ರಾಂ ಎಲ್‌ಎಸ್‌ಡಿ ಪತ್ತೆಯಾಗಿದೆ. ಲೂಮ್ ಪೆಪ್ಪರ್ ಮತ್ತು ಬೊನಾಲ್ಟ್ ಜತೆಗೆ ಚಿಡಿಬೇರ್ ಡ್ರಗ್ ಪೂರೈಸುತ್ತಿದ್ದ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಸ್ಯಾಂಡಲ್ ವುಡ್ ಡ್ರಗ್ ಡೀಲ್ ಪ್ರಕರಣದಲ್ಲಿ ಬಂಧಿತ ಆರೋಪಿಗಳಿಗೆ ಡ್ರಗ್ ಪೂರೈಸುತ್ತಿದ್ದ. ಕೆಲವು ನಟಿ ಮಣಿಯರು ಪಾಲ್ಗೊಳ್ಳುತ್ತಿದ್ದ ಪಾರ್ಟಿಗಳಿಗೆ ಮಾದಕ ವಸ್ತು ಪೂರೈಸಿದ್ದಾಗಿ ಸಿಸಿಬಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಈತನ ಬಂಧನ ಬಳಿಕ ಡ್ರಗ್ ಪಾರ್ಟಿ ಆಯೋಜನೆ ಬಗ್ಗೆ ಸ್ಫೋಟಕ ಮಾಹಿತಿ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ. ಇದು ಕೆಲವರಲ್ಲಿ ನಡುಕ ಉಂಟು ಮಾಡಿದೆ.

English summary
Bengaluru; CCB police have been arrested a drug peddler in connection with sandalwood drug deal case, know more..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X