• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಟಿ ಸಂಜನಾ ಗಲ್ರಾನಿ ಸಿಸಿಬಿ ಪೊಲೀಸರ ವಶಕ್ಕೆ

|

ಬೆಂಗಳೂರು, ಸೆಪ್ಟೆಂಬರ್ 08: ಬಹುಭಾಷಾ ನಟಿ ಸಂಜನಾ ಗಲ್ರಾನಿ ನಿವಾಸದ ಮೇಲೆ ಸಿಸಿಬಿ ಪೊಲೀಸರು ಮಂಗಳವಾರ ಮುಂಜಾನೆ ದಾಳಿ ಮಾಡಿದ್ದರು. ದಾಳಿಯ ಬಳಿಕ ಸಂಜನಾರನ್ನು ವಶಕ್ಕೆ ಪಡೆದಿದ್ದು, ಸಿಸಿಬಿ ಕಚೇರಿಗೆ ಕರೆದುಕೊಂಡು ಹೋಗುತ್ತಿದ್ದಾರೆ.

   ಕೊನೆಗೂ CCB ಪೋಲೀಸರ ಕೈಗೆ ತಗಲಾಕೊಂಡ Sanjjanaa Galrani | Oneindia Kannada

   ಬೆಂಗಳೂರು ನಗರದಲ್ಲಿ ಮಾದಕ ದ್ರವ್ಯ ಪೂರೈಕೆ ಜಾಲದ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಇಂದಿರಾ ನಗರದಲ್ಲಿರುವ ನಟಿ ಸಂಜನಾ ಗಲ್ರಾನಿ ನಿವಾಸದ ಮೇಲೆ ದಾಳಿ ನಡೆಸಿದ್ದರು. ದಾಳಿಯ ಬಳಿಕ ಅವರನ್ನು ವಶಕ್ಕೆ ಪಡೆದಿದ್ದಾರೆ.

   ನಟಿ ಸಂಜನಾ ಗಲ್ರಾನಿ ನಿವಾಸದ ಮೇಲೆ ಸಿಸಿಬಿ ದಾಳಿ

   ಮಂಗಳವಾರ ಬೆಳಗ್ಗೆ 8 ಸಿಸಿಬಿ ಅಧಿಕಾರಿಗಳು ಸಂಜನಾ ಗಲ್ರಾನಿ ನಿವಾಸದ ಮೇಲೆ ದಾಳಿ ಮಾಡಿದ್ದರು. ಪರಿಶೀಲನೆಗಳನ್ನು ಮುಗಿಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ಸಂಜನಾರನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ಸಿಸಿಬಿ ಕಚೇರಿಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗುತ್ತದೆ.

   ನಟಿ ರಾಗಿಣಿ ಮತ್ತೆ 5 ದಿನ ಸಿಸಿಬಿ ಪೊಲೀಸರ ವಶಕ್ಕೆ

   ನಟಿ ಸಂಜನಾ ಆಪ್ತರಾದ ರಾಹುಲ್ ಎಂಬಾತನನ್ನು ಇದೇ ಪ್ರಕರಣದಲ್ಲಿ ಸಿಸಿಬಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದರು. ಅವರು ನೀಡಿದ ಮಾಹಿತಿ ಅನ್ವಯ ಸಂಜನಾ ನಿವಾಸದ ಮೇಲೆ ದಾಳಿ ಮಾಡಲಾಗಿತ್ತು.

   ರಾಗಿಣಿ ದ್ವಿವೇದಿ ಆರೋಪಿ ನಂ.2, ರವಿಶಂಕರ್ ಹೆಸರು ನಾಪತ್ತೆ?

   ಸಂಜನಾ ಆಪ್ತರಾದ ಪೃಥ್ವಿ ಶೆಟ್ಟಿಯನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ನೈಟ್ ಪಾರ್ಟಿಗಳನ್ನು ಅವರು ಆಯೋಜನೆ ಮಾಡುತ್ತಿದ್ದರು. ಈ ಪಾರ್ಟಿಗಳಲ್ಲಿ ಡ್ರಗ್ಸ್‌ ಪೂರೈಕೆ ಆಗುತ್ತಿತ್ತು ಎಂಬ ಆರೋಪವೂ ಇದೆ.

   ಸಿಸಿಬಿ ಪೊಲೀಸರು ಇದೇ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿಯನ್ನು ಬಂಧಿಸಿದ್ದರು. ಮೊದಲು 3 ದಿನ ಸಿಸಿಬಿ ವಶಕ್ಕೆ ಪಡೆಯಲಾಗಿತ್ತು. ಸೋಮವಾರ ನ್ಯಾಯಾಲಯ ಮತ್ತೆ ಅವರನ್ನು 5 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.

   English summary
   CCB police who probing drug case detained Sanjjana Galrani after raid on Kannada actress house in Bengaluru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X