• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಲಿಕಾನ್ ವ್ಯಾಲಿ-ಸಿಲಿಕಾನ್ ಸಿಟಿ ನಡುವೆ ನೇರ ವಿಮಾನ

|

ಬೆಂಗಳೂರು, ನವೆಂಬರ್ 25: ಸಿಲಿಕಾನ್ ವ್ಯಾಲಿ ಮತ್ತು ಸಿಲಿಕಾನ್ ಸಿಟಿ ನಡುವೆ ಏರ್ ಇಂಡಿಯಾ ನೇರ ವಿಮಾನ ಸಂಪರ್ಕವನ್ನು ಕಲ್ಪಿಸಲಿದೆ. 2021ರ ಜನವರಿ 11ರಿಂದ ಈ ವಿಮಾನ ಸೇವೆ ಆರಂಭವಾಗಲಿದೆ.

   Cyclone Nivar Effect: ಮಳೆ ಮಳೆ ... ಎಚ್ಚರ!! | Oneindia Kannada

   ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಬೆಂಗಳೂರು ನಡುವೆ ಏರ್ ಇಂಡಿಯಾ ತಡೆ ರಹಿತ ನೇರ ವಿಮಾನ ಸೇವೆಯನ್ನು ಆರಂಭ ಮಾಡುವುದಾಗಿ ಘೋಷಣೆ ಮಾಡಿದೆ. ಬೆಂಗಳೂರಿನ ಐಟಿ ಉದ್ಯಮಕ್ಕೆ ಇದು ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

   ಡಿಸೆಂಬರ್ 10ರಿಂದ ಮೈಸೂರು-ಮಂಗಳೂರು ವಿಮಾನ ಸೇವೆ

   ಸ್ಯಾನ್ ಫ್ರಾನ್ಸಿಸ್ಕೋ ರಾಜ್ಯದ ಸಿಲಿಕಾನ್ ವ್ಯಾಲಿ ಮತ್ತು ಸಾಫ್ಟ್‌ವೇರ್‌ ರಫ್ತಿನಲ್ಲಿ ಭಾರತದಲ್ಲಿಯೇ ಮುಂಚೂಣಿಯಲ್ಲಿರುವ ಬೆಂಗಳೂರು ನಗರದ ನಡುವೆ ನೇರ ವಿಮಾನ ಸೇವೆ ಆರಂಭವಾಗಲಿದೆ. ವಾರದಲ್ಲಿ ಮೂರು ದಿನಗಳ ಕಾಲ ಈ ವಿಮಾನ ಹಾರಾಟ ನಡೆಸಲಿದೆ.

   ಜನವರಿ 1ರಿಂದ ಹುಬ್ಬಳ್ಳಿ-ತಿರುಪತಿ ವಿಮಾನ ಹಾರಾಟ

   ಇದರಿಂದಾಗಿ ಕರ್ನಾಟಕದಲ್ಲಿನ ಐಟಿ ಉದ್ಯಮದ ಬೆಳವಣಿಗೆಗೆ ಇನ್ನಷ್ಟು ಉತ್ತೇಜನ ಸಿಕ್ಕಂತೆ ಆಗಲಿದೆ. ಸ್ಟಾರ್ಟ್‌ ಅಪ್ ಕ್ಷೇತ್ರದಲ್ಲಿಯೂ ಬೆಂಗಳೂರು ಬೆಳವಣಿಗೆ ಹೊಂದುತ್ತಿದ್ದು, ನೇರ ವಿಮಾನ ಸೇವೆಯಿಂದ ಕಂಪನಿಗಳು ನೇರವಾಗಿ ಸಿಲಿಕಾನ್ ಸಿಟಿ ಜೊತೆ ಸಂಪರ್ಕ ಸಾಧಿಸಲು ಸಹಾಯಕವಾಗಲಿದೆ.

   ಕಲಬುರಗಿ ದೆಹಲಿ ನಡುವೆ ವಿಮಾನ ಯಾನ ಆರಂಭ

   2020ರಲ್ಲಿಯೇ ನೇರ ವಿಮಾನ ಸೇವೆ ಆರಂಭವಾಗಬೇಕಿತ್ತು. ಆದರೆ, ಕೋವಿಡ್ ಪರಿಸ್ಥಿತಿಯ ಕಾರಣದಿಂದಾಗಿ ಅದು ಮುಂದಕ್ಕೆ ಹೋಯಿತು. 2021ರ ಜನವರಿಯಲ್ಲಿ ವಿಮಾನ ಸಂಚಾರ ಆರಂಭವಾಗಲಿದೆ.

   English summary
   Air India announced non-stop flight to San Francisco from Bengaluru twice in a week from January 11, 2021. Flight will connecting the world’s two tech hubs.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X