ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ಶಾಲಾ ಮಕ್ಕಳಿಗೆ ಕಿಟ್ ನೀಡಿದ ಸ್ಯಾಮ್ ಸಂಗ್!

ಸ್ಯಾಮ್ ಸಂಗ್ ಇಂಡಿಯಾ, ರಾಜ್ಯದ ಬೆಂಗಳೂರು, ದೊಡ್ಡಬಳ್ಳಾಪುರ, ಕೋಲಾರ ಮತ್ತು ಮುಳಬಾಗಿಲು ಜಿಲ್ಲೆಗಳಾದ್ಯಂತ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಬೆಂಬಲಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ‘ಶಾಲೆ ಕಿಟ್ ಕಾರ್ಯಕ್ರಮ'ದಲ್ಲಿ ಸಹಭಾಗಿಯಾಗಿದೆ.

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 05: ಬೆಂಗಳೂರು, ದೊಡ್ಡಬಳ್ಳಾಪುರ, ಕೋಲಾರ ಮತ್ತು ಮುಳಬಾಗಿಲು ಜಿಲ್ಲೆಗಳಾದ್ಯಂತ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಬೆಂಬಲಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ 'ಶಾಲೆ ಕಿಟ್ ಕಾರ್ಯಕ್ರಮ'ದಲ್ಲಿ ಸ್ಯಾಮ್ ಸಂಗ್ ಇಂಡಿಯಾ ಸಹಭಾಗಿಯಾಗಿದೆ.

ಬೆಂಗಳೂರಿನ ಸ್ಯಾಮ್‍ಸಂಗ್ ಆರ್‍ಅಂಡ್‍ಡಿ ಸಂಸ್ಥೆಯ ಸ್ವಯಂಸೇವಕರು ಎರಡು ದಿನ, 500 ಕ್ಕು ಹೆಚ್ಚು ಶಾಲೆಗಳನ್ನು ಭೇಟಿ ಮಾಡಿ, ಅಗತ್ಯ ವಸ್ತುಗಳನ್ನು ಮೂವತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿತರಿಸಿದರು.

Samsung India Partners Government of Karnataka for ‘School Kit Programme

ವಿದ್ಯಾರ್ಥಿಗಳಿಗೆ ವಿತರಿಸಿದ ಲೇಖನಸಾಮಗ್ರಿಗಳಲ್ಲಿ 3,000 ನಿಘಂಟುಗಳು, 14,000 ಲೇಖನ ಚೀಲಗಳು, 300 ಬ್ಯಾಗುಗಳು, 18,000 ಪರೀಕ್ಷೆ ಪ್ಯಾಡುಗಳು ಮತ್ತು ರೇಖಾಗಣಿತದ ಪೆಟ್ಟಿಗೆಗಳು ಒಳಗೊಂಡಿತ್ತು.

ಸಮಾರಂಭದಲ್ಲಿ ಮಾತನಾಡುತ್ತ, ಬೆಂಗಳೂರಿನ ಸ್ಯಾಮ್‍ಸಂಗ್ ಆರ್‍ಅಂಡ್‍ಡಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ದೀಪೇಶ್ ಶಾಹ್, "ಸ್ಯಾಮ್‍ಸಂಗ್‍ನಲ್ಲಿ ಅರ್ಥಪೂರ್ಣ ಆವಿಷ್ಕಾರಗಳು ಮತ್ತು ಗುಣಮಟ್ಟದ ಉತ್ಪನ್ನಗಳಿಂದ ನಮ್ಮ ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸುವುದು ನಮ್ಮ ಗುರಿಯಾಗಿದೆ. ನಾವು ಸಮಾಜಕ್ಕೂ ಹಿಂತಿರುಗಿ ಕೊಡಲು ಬಯಸುತ್ತೇವೆ, ಆದ್ದರಿಂದ ಭಾರತೀಯ ಸಮಾಜದ ಕಡಿಮೆ ಸಂಪನ್ಮೂಲ ಇರುವ ವಿದ್ಯಾರ್ಥಿಗಳಿಗೆ ಕೈಚಾಚುತ್ತೇವೆ. ಇಂದು ನಾವು ಮೂವತ್ತು ಸಾವಿರಕ್ಕು ಹೆಚ್ಚು ವಿದ್ಯಾರ್ಥಿಗಳಿಗೆ ತಲುಪಿದ್ದೇವೆ." ಎಂದು ಹೇಳಿದರು.

Samsung India Partners Government of Karnataka for ‘School Kit Programme

ಸ್ಯಾಮ್‍ಸಂಗ್ ಎಲೆಕ್ಟ್ರಾನಿಕ್ ಕಂಪನಿ ಲಿಮಿಟೆಡ್ ಬಗ್ಗೆ
ಸ್ಯಾಮ್‍ಸಂಗ್ ಎಲೆಕ್ಟ್ರಾನಿಕ್ ಕಂಪನಿ ಲಿಮಿಟೆಡ್, ವಿಶ್ವಕ್ಕೆ ಸ್ಪೂರ್ತಿ ನೀಡುತ್ತದೆ ಮತ್ತು ಅದರ ಪರಿವರ್ತಕ ಕಲ್ಪನೆಗಳು ಮತ್ತು ತಂತ್ರಜ್ಞಾನದಿಂದ ಭವಿಷ್ಯವನ್ನು ರೂಪಿಸುತ್ತದೆ. ಕಂಪನಿಯು ಟಿವಿ, ಸ್ಮಾರ್ಟ್‍ ಫೋನ್ ಗಳು, ತೊಡಬಹುದಾದಂತಹ ಸಾಧನಗಳು, ಟ್ಯಾಬ್ಲೆಟ್‍ಗಳು, ಕ್ಯಾಮೆರಾಗಳು, ಡಿಜಿಟಲ್ ಯಂತ್ರೋಪಸಾಧನಗಳು, ವೈದ್ಯಕೀಯ ಉಪಕರಣಗಳು, ಜಾಲ ವ್ಯವಸ್ಥಾಪನೆಗಳು ಮತ್ತು ಅರೆವಾಹಕ ಮತ್ತು ಎಲ್‍ಇಡಿ ಪರಿಹಾರಗಳ ಜಗತ್ತನ್ನು ಮರುವ್ಯಾಖ್ಯಾನಿಸಿದೆ.

English summary
Samsung India has collaborated with the Government of Karnataka for a two-day ‘School Kit Programme’ that aims to extend support to students from government schools across Bengaluru, Dodballapura, Kolar and Mulbaghal districts in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X