ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಪಿಗೆ ರಸ್ತೆ-ನಾಗಸಂದ್ರ ನಡುವೆ ಬೆಳಗ್ಗೆ 5ರಿಂದ ಮೆಟ್ರೋ ರೈಲು

|
Google Oneindia Kannada News

ಬೆಂಗಳೂರು, ಡಿಸೆಂಬರ್ 01 : ಸಂಪಿಗೆ ರಸ್ತೆ-ನಾಗಸಂದ್ರ ನಡುವಿನ ಮಾರ್ಗದಲ್ಲಿ ಮಂಗಳವಾರದಿಂದ ನಮ್ಮ ಮೆಟ್ರೋ ರೈಲು ಬೆಳಗ್ಗೆ 5 ರಿಂದ ರಾತ್ರಿ 11ರ ತನಕ ಸಂಚಾರ ನಡೆಸಲಿದೆ. ಪ್ರಯಾಣಿಕರ ಮನವಿ ಹಿನ್ನಲೆಯಲ್ಲಿ ರೈಲು ಸೇವೆಯನ್ನು 2 ಗಂಟೆಗಳ ಕಾಲ ವಿಸ್ತರಣೆ ಮಾಡಲಾಗಿದೆ.

13 ಕಿ.ಮೀ ಉದ್ದದ ಮಾರ್ಗದಲ್ಲಿ ಡಿಸೆಂಬರ್ 1ರಿಂದಲೇ ಜಾರಿಗೆ ಬರುವಂತೆ ಮೆಟ್ರೋ ರೈಲಿನ ಸೇವೆಯನ್ನು ಎರಡು ಗಂಟೆಗಳ ಕಾಲ ವಿಸ್ತರಣೆ ಮಾಡಲಾಗಿದೆ. ಇಷ್ಟು ದಿನ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ರೈಲು ಸಂಚರಿಸುತ್ತಿತ್ತು. [ಮೆಟ್ರೋ ವೇಳಾಪಟ್ಟಿ ಬದಲಾವಣೆ]

namma metro

ಮೆಟ್ರೋ ರೈಲಿನಲ್ಲಿ ಸಂಚಾರ ನಡೆಸುವ ಪೀಣ್ಯ ಸುತ್ತಮುತ್ತಲಿನ ಜನರಿಗೆ ಅನುಕೂಲವಾಗುವಂತೆ ಬಿಎಂಟಿಸಿ ಬಸ್ ವ್ಯವಸ್ಥೆಯನ್ನು ಮಾಡಿದೆ. ಬೆಳಗ್ಗೆ 5ರಿಂದ 6ರವರೆಗೆ ನಾಲ್ಕು ಬಸ್ಸುಗಳು ಹಾಗೂ ರಾತ್ರಿ 10ರಿಂದ 11ರ ವರೆಗೆ ನಾಲ್ಕು ಬಸ್ಸುಗಳು ಸಂಚಾರ ನಡೆಸಲಿವೆ. [ಮೆಟ್ರೋಕ್ಕೆ ಶಂಕರಣ್ಣ ಹೆಸರು: ಇದು ಓದುಗರ ತೀರ್ಮಾನ]

ಬಸ್ಸಿನ ಮಾರ್ಗಗಳು : ಮೆಟ್ರೋ ರೈಲಿನ ಪ್ರಯಾಣಿಕರಿಗೆ ಅನುಕೂಲವಾಗಲು ಬಿಎಂಟಿಸಿ ಆರಂಭಿಸಿರುವ ಬಸ್ಸುಗಳು ಪೀಣ್ಯ ಇಂಡಸ್ಟ್ರಿ ಮೆಟ್ರೋ ನಿಲ್ದಾಣ, ಜಾಲಹಳ್ಳಿ ಕ್ರಾಸ್‌, ಟಿವಿಎಸ್‌ ಕ್ರಾಸ್‌, ಎನ್‌ಟಿಟಿಎಫ್‌, 14ನೇ ಕ್ರಾಸ್, ಪೀಣ್ಯ 2ನೇ ಹಂತ ಮಾರ್ಗಗಳಲ್ಲಿ ಸಂಚಾರ ನಡೆಸಲಿವೆ. [ಮಾಗಡಿ ರಸ್ತೆ-ಮೈಸೂರು ರಸ್ತೆ ನಮ್ಮ ಮೆಟ್ರೋ ದರ ಪಟ್ಟಿ]

ಪ್ರಾಯೋಗಿಕವಾಗಿ ಸೇವೆ : ಪೀಣ್ಯದ ಕೈಗಾರಿಕಾ ಪ್ರದೇಶದ ಬೇಡಿಕೆ ಅನ್ವಯ ಮೆಟ್ರೋ ರೈಲಿನ ಸೇವೆಯನ್ನು ಎರಡು ಗಂಟೆಗಳ ಕಾಲ ಪ್ರಾಯೋಗಿಕವಾಗಿ ವಿಸ್ತರಣೆ ಮಾಡಲಾಗಿದೆ. 2 ತಿಂಗಳ ಕಾಲ ಈ ವೇಳಾಪಟ್ಟಿ ಜಾರಿಯಲ್ಲಿರುತ್ತದೆ. ನಂತರ ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಸೇವೆ ವಿಸ್ತರಣೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.

ರೈಲುಗಳ ವೇಳಾಪಟ್ಟಿ : ಸಂಪಿಗೆ ರಸ್ತೆ-ನಾಗಸಂದ್ರ ಮಾರ್ಗದಲ್ಲಿ ಬೆಳಗ್ಗೆ 5ರಿಂದ 8ರವರೆಗೆ ಮತ್ತು ರಾತ್ರಿ 8ರಿಂದ 11ರವರೆಗೆ ಪ್ರತಿ 15 ನಿಮಿಷಗಳಿಗೆ ಒಂದರಂತೆ ಹಾಗೂ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಪ್ರತಿ 10 ನಿಮಿಷಗಳಿಗೆ ಒಂದರಂತೆ ರೈಲು ಸಂಚಾರ ನಡೆಸಲಿದೆ.

English summary
Bangalore Metro Rail Corporation (BMRCL) extended Namma metro train services between Sampige Road-Nagasandra route. Train will be available from 5 am to 11 pm. New schedule come into effect from December 1, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X