ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದು ಮೇಯರ್ ಚುನಾವಣೆ: ಮಹಾಪೌರ ಸ್ಥಾನಕ್ಕೆ ಸಂಪತ್ ರಾಜ್ ಆಯ್ಕೆ ನಿಶ್ಚಿತ

|
Google Oneindia Kannada News

Recommended Video

Bengaluru | Mayor And Deputy Mayor Election | Oneindia Kannada

ಬೆಂಗಳೂರು, ಸೆಪ್ಟೆಂಬರ್ 28: ಬೆಂಗಳೂರು ಮಹಾಪೌರ ಹಾಗೂ ಉಪ ಮಹಾಪೌರರ ಸ್ಥಾನಗಳಿಗೆ ಸೆ. 28ರಂದು ಚುನಾವಣೆ ನಡೆಯಲಿದ್ದು, ಮೇಯರ್ ಸ್ಥಾನಕ್ಕೆ ಕೊನೆಯ ಕ್ಷಣದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಮಧ್ಯಾಹ್ನ 12 ಗಂಟೆಗೆ ಚುನಾವಣೆ ನಡೆಯಲಿದೆ.

ಬಿಬಿಎಂಪಿ ಮೇಯರ್ ಹುದ್ದೆಗೇರಲು ಪೈಪೋಟಿ ಆರಂಭಬಿಬಿಎಂಪಿ ಮೇಯರ್ ಹುದ್ದೆಗೇರಲು ಪೈಪೋಟಿ ಆರಂಭ

ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನ ನಾಯಕ ಹಾಗೂ ಡಿಜೆ ಹಳ್ಳಿ ವಾರ್ಡ್ ಕಾರ್ಪೊರೇಟರ್ ಆಗಿರುವ ಆರ್. ಸಂಪತ್ ರಾಜ್ ಅವರು ಆಯ್ಕೆಯಾಗುವುದು ಬಹುತೇಕ ನಿಶ್ಚಿತ ಎನ್ನಲಾಗಿದೆ. ಆದರೂ, 'ಕೈ' ಪಾಳಯದಲ್ಲಿ ಕೊನೆಯ ಕ್ಷಣದ ಲಾಬಿಗೆ ಕೆಲ ಕಾಂಗ್ರೆಸ್ ಕಾರ್ಪೊರೇಟರ್ ಗಳು ಪ್ರಯತ್ನಿಸುತ್ತಿದ್ದಾರೆಂದು ಕೆಲ ಮೂಲಗಳು ತಿಳಿಸಿವೆ.

Sampath Raj set to be made Bengaluru Mayor; Rameela Umashankar will be his deputy

ಇನ್ನು, ಉಪ ಮೇಯರ್ ಪಟ್ಟ ರಮಿಳಾ ಉಮಾಶಂಕರ್ ಅವರು ಆಯ್ಕೆಯಾಗುವುದು ನಿಶ್ಚಿತವಾಗಿದೆ. ಇವರು ಜೆಡಿಎಸ್ ನಾಯಕಿಯಾಗಿದ್ದು ಬಿಬಿಎಂಪಿಯಲ್ಲಿ ಕಾವೇರಿಪುರವನ್ನು ಪ್ರತಿನಿಧಿಸುತ್ತಿದ್ದಾರೆ.

ನೀವು ಬೆಂಗಳೂರು ಮೇಯರ್ ಆದರೆ? ಲೇಖನ ಸ್ಪರ್ಧೆ, ಬಹುಮಾನ ಗೆಲ್ಲಿನೀವು ಬೆಂಗಳೂರು ಮೇಯರ್ ಆದರೆ? ಲೇಖನ ಸ್ಪರ್ಧೆ, ಬಹುಮಾನ ಗೆಲ್ಲಿ

ಬೆಂಗಳೂರು ಮಹಾ ನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಏರ್ಪಟ್ಟಿರುವ ಕಾಂಗ್ರೆಸ್- ಜೆಡಿಎಸ್ ಜುಗಲ್ ಬಂದಿಯಲ್ಲಿ ಮೇಯರ್ ಸ್ಥಾನಕ್ಕಾಗಿ ಕೆಲ ದಿನಗಳಿಂದಲೇ ಹಗ್ಗ ಜಗ್ಗಾಟ ನಡೆದೇ ಇತ್ತು. ಈ ಹಗ್ಗ ಜಗ್ಗಾಟದಲ್ಲಿ ಮೇಯರ್ ಪಟ್ಟವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಸಫಲವಾಗಿತ್ತು.

English summary
DJ Halli corporator R. Sampath Raj is set to be elected for Bengaluru Mayor's post in the Bengaluru Mayor election 2017 on September 28. JDS leader and Kaveri ward's corporator Rameela Umashankar is set to be elected as Deputy Mayor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X