• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಮನ್ವಿತಕ್ಕೆ ಹತ್ತರ ಸಂಭ್ರಮ: ಬಿದಿರಿನಗಳ ಸೇರಿ ಹಲವು ಪುಸ್ತಕಗಳ ಬಿಡುಗಡೆ

|

ಬೆಂಗಳೂರು, ಜುಲೈ 12: ಸಮನ್ವಿತ ಸಂಸ್ಥೆಯು ಹತ್ತು ವರ್ಷಗಳ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದು, ಅದರ ಅಂಗವಾಗಿ ಸಾಹಿತ್ಯ ಕೃತಿಗಳನ್ನೂ ಪ್ರಕಟಿಸುತ್ತಿದೆ. ಗ್ರೀಷ್ಮ, ವಸಂತ ಸಂಗೀತ ಶಿಬಿರಗಳ ಮೂಲಕ ಸಂಗೀತ ತರಬೇತಿ ಕಮ್ಮಟಗಳು, ಇಂಟರ್ಯಾಕ್ಟ್ ಕಾರ್ಯಕ್ರಮದಲ್ಲಿ ಕಲಾವಿದರ ಮಾರ್ಗದರ್ಶನದಲ್ಲಿ ಚಿತ್ರರಚನಾ ಶಿಬಿರವನ್ನು ಆಯೋಜಿಸಲಾಗಿದೆ.

ಕ್ಯಾನ್ಸರ್ ಪೀಡಿತರಿಗೆ ವಿಗ್ ಮಾಡಿಸಿಕೊಡುವ ಸಲುವಾಗಿ ವೇಣಿದಾನ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಸುಮಾರು 15ದಾನಿಗಳ ಕೂದಲುಗಳನ್ನು ಸಂಗ್ರಹಿಸಿ, ಹೇರ್ ಫಾರ್ ಹೋಪ್ ಸಂಸ್ಥೆ ಮೂಲಕ ವಿಗ್ತಯಾರಿಸಲು ಒದಗಿಸಿಕೊಡಲಾಗಿದೆ.

ಸಾಹಿತ್ಯ ಪರಿಷತ್ತಿನಲ್ಲಿ ಟೆಕ್ ಲೋಕ ಹಾಗೂ ವಿತ್ತಜಗತ್ತಿನ ಅನಾವರಣ

ಪರಿಸರಕ್ಕೆ ಹಾನಿಯಾಗದಂತೆ ಜೇಡಿ ಮಣ್ಣಿನ ಗಣಪನನ್ನು ತಯಾರಿಸುವ ಆಂದೋಲನವನ್ನು ಬೆಂಗಳೂರು ದಕ್ಷಿಣದಲ್ಲಿ ಪ್ರತಿವರ್ಷ ಗಣೇಶೋತ್ಸವಕ್ಕೆ ಮುನ್ನ ಆಯೋಜಿಸಲಾಗುತ್ತಿದ್ದು, ಪ್ರತಿವರ್ಷ ನೂರಾರು ಜನ ಕಲಾವಿದರ ಮಾರ್ಗದರ್ಶನದಲ್ಲಿ ತಾವೇ ಸ್ವತಃ ಕೈಯ್ಯಾರೆ ತಯಾರಿಸಿದ ಗಣಪನನ್ನು ಪೂಜಿಸುವ ಮೂಲಕ ಕೆಮಿಕಲ್ ಬಣ್ಣ, ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪತಿಯ ಹಾವಳಿ ತಗ್ಗಿಸಿ ಪರಿಸರ ಸ್ನೇಹಿ ವಿಧಾನಗಳಲ್ಲಿ ಹಬ್ಬ ಆಚರಿಸುತ್ತಿದ್ದಾರೆ.

ರಂಗಚಟುವಟಿಕೆಗಳ ಭಾಗವಾಗಿ ಅವನಿ ಎಂಬ ಪೌರಾಣಿಕ ಕಥಾವಸ್ತು ಮೂಲಕ ಸಮಕಾಲೀನ ಸ್ತ್ರೀ ಸಮಾಜಸ ಸವಾಲುಗಳನ್ನು ಚರ್ಚಿಸುವ ನಾಟಕ ರಚಿಸಿ ಪ್ರದರ್ಶಿಸಲಾಗಿದೆ. ಅಲ್ಲದೆ ತಂಡದ ಐದು ಕಲಾವಿದೆಯರು ಮನಸ್ವಿನಿ ಎಂಬ ಏಕವ್ಯಕ್ತಿ ನಾಟಕವನ್ನು ಸಹ ಪ್ರದರ್ಶಿಸುತ್ತಿದ್ದಾರೆ.

ಬಿದಿರಿನ ಗಳ: ಸುಮಾರು 1900-1970ರ ನಡುವಿನ ಕಾಲಮಾನವನ್ನು ಆಧಾರವಾಗಿ ತೆಗೆದುಕೊಂಡು ಮೈಸೂರು ಸಂಸ್ಥಾನದ ಒಂದು ಹಳ್ಳಿಯ ಚಿತ್ರಣವನ್ನು ಕಟ್ಟಿಕೊಡುತ್ತ ಗ್ರಾಮದ ವಾತಾವರಣ, ಅಲ್ಲಿನ ಜನರ ಅಕಾರಣ ಪ್ರೀತಿ, ದ್ವೇಷಗಳ ಚಿತ್ರಣವನ್ನು ಕಟ್ಟಿಕೊಡುತ್ತದೆ.

ಬಿದಿರು ಹಳ್ಳಿಯ ಜನಜೀವನದ ಆಧಾರ, ತೊಟ್ಟಿಲಿನಿಂದ ಚಟ್ಟದವರೆಗೆ ಮನುಷ್ಯರ ಜೊತೆಜೊತೆಗೆ ಸಾಗಿಬರುವ ಬಿದಿರು ಬದುಕಿನ ಒಟ್ಟಂದವೂ ಹೌದು. ನುಡಿಸಿದರೆ ಕೊಳಲು, ದನ ಅದ್ದರಿಸಲು ಬಳಸುವ ಕೋಲು, ನದಿ ದಾಟಲು ಬಳಸುವ ಹರಿಗೋಲು, ರೈತಾಪಿ ಜನವರ್ಗದ ಬದುಕಿನ ಅವಿಭಾಜ್ಯ ಭಾಗವೇ ಬಿದಿರು. ಹೀಗೆ ಇಡಿಯ ಬದುಕನ್ನು ಕಟ್ಟಿಕೊಟ್ಟು ತೋರಿಸುವ ವಿಶಿಷ್ಟ ಕಥನ ಶೈಲಿಯ ಕಾದಂಬರಿ ಬಿದಿರಿನ ಗಳ. ಇಲ್ಲಿ ಮಾಟ ಮಂತ್ರ, ಕೃಷಿ, ಗ್ರಾಮ್ಯ ಬದುಕು, ಅನುಬಂಧಗಳು, ಕೃಷಿ, ಹೀಗೆ ಹಲವು ಮುಖಗಳ ಚಿತ್ರಣವಿದೆ.

ಮೂರು ತಲೆಮಾರುಗಳ ಕಥೆಯಲ್ಲಿ ಹಳ್ಳಿಯ ಬದುಕು, ಅಲ್ಲಿಂದ ಮುನ್ನಡೆದು ಊರು ಬಿಟ್ಟು ಪಟ್ಟಣ ಸೇರಿದ, ಸಾಗರೋಲ್ಲಂಘನ ಮಾಡಿ ಹೊರ ದೇಶ ಸೇರಿದ ಸ್ಥಿತ್ಯಂತರಗಳನ್ನು ಸಮರ್ಥವಾಗಿ ಕಟ್ಟಿಕೊಡುವ ಕಾದಂಬರಿ ನಮವಮ ವರ್ತಮಾನದ ಬದುಕಿಗೂ ಹೊಸ ಒಳನೋಟಗಳನ್ನು ದೊರಕಿಸಿಕೊಡಬಲ್ಲ ಕಥಾವಸ್ತು ಹೊಂದಿದೆ. ಲೇಖಕರಾದ ರಘು .ವಿ ಅವರು ವಿವೇಕಹಂಸದ ಸಂಪಾದಕರಾಗಿ ಕಳೆದ ಇಪ್ಪತ್ತೈದು ವರ್ಷಗಳಿಂದ ಸಾಂಸ್ಕೃತಿಕ ಪತ್ರಿಕೋದ್ಯಮದ ಭಾಗವಾಗಿದ್ದಾರೆ.

ನಿಯತಕಾಲಿಕೆಗಳಿಗೆ ಶಿಕ್ಷಣ, ಉದ್ಯೋಗ, ಸಂಸ್ಕೃತಿಗಳ ಬಗ್ಗೆ ಮಾರ್ಗದರ್ಶಿ ಅಂಕಣಗಳನ್ನು ನಿಯಮಿತವಾಗಿ ಬರೆಯುವ ಇವರು ಈಗಾಗಲೇ ಹಲವು ವ್ಯಕ್ತಿತ್ವ ವಿಕಸನ ಮತ್ತು ರಘುವೀರೇಶ್ವರ ವಚನಗಳು ಎಂಬ ವಿಶಿಷ್ಟ ವಚನ ಸಂಕಲನವನ್ನು ಧ್ವನಿ ಮತ್ತು ಪಠ್ಯಮಾದರಿಯಲ್ಲಿ ಸಹ ಹೊರತಂದಿದ್ದಾರೆ.

ಟೆಕ್ ಲೋಕದ ಹತ್ತು ಹೊಸ ಮುಖಗಳು: ಟ್ರಂಕ್ ಕಾಲ್ ವ್ಯವಸ್ಥೆಯಿಂದ ಅಂಗೈಯಲ್ಲಿ ನಲಿಯುವ ಮೊಬೈಲ್ ಟಚ್ ಸ್ಕ್ರೀನ್ ಮೂಲಕ ಬೆರಳ ತುದಿಯಲ್ಲಿ ಇಡಿಯ ಜಗತ್ತನ್ನು ಅವಲೋಕಿಸುವ ವ್ಯವಸ್ಥೆಯವರೆಗೆ ಪ್ರತಿದಿನ ತಂತ್ರಜ್ಞಾನವು ಬದಲಾಗುತ್ತಲೇ ಸಾಗಿದೆ. ಆಧುನಿಕತೆಯ ಹೊಸ ಮಜಲುಗಳನ್ನು ನಾಗರಿಕತೆಗೆ ತೆರೆದುಕೊಡುತ್ತಿರುವ ಈ ಕಾಲಘಟ್ಟದಲ್ಲಿ ಭವಿಷ್ಯವನ್ನು ರೂಪಿಸುತ್ತಿರುವುದು ತಂತ್ರಜ್ಞಾನದ ನೆಲೆಗಳೇ ಆಗಿದೆ.

ತಂತ್ರಜ್ಞಾನ ಇಂದು, ಶಿಕ್ಷಣ, ಆರೋಗ್ಯ ಸೇರಿದಂತೆ ಬದುಕಿನ ಎಲ್ಲ ಮಜಲುಗಳಿಗೆ ತಲುಪಿದೆ. ನಮಗೆ ಅರಿವೇ ಇಲ್ಲದೆ ನಾವು ಮೊಬೈಲಿನಲ್ಲಿ ಬಳಸುವ ಟಚ್ ಸ್ಕ್ರೀನ್ ಸೆನ್ಸರ್ ಗಳು ನಮ್ಮ ಸ್ಪರ್ಶದ ಜ್ಞಾನದಿಂದಲೇ ಕಾರ್ಯನಿರ್ವಹಿಸುತ್ತವೆ. ದತ್ತಾಂಶಗಳನ್ನು ಶೇಖರಿಸಿಡಲು ಮೊದಮೊದಲು ದೊಡ್ಡ ಕೋಣೆಗಳು ಬೇಕಿತ್ತು. ಮಳೆ ತರಿಸದ ಮೋಡಗಳೆಂದೇ ವಿನೋದವಾಗಿ ಉಲ್ಲೇಖಿಸುವ ಕ್ಲೌಡ್ ಮೂಲಕ ದತ್ತಾಂಶಗಳನ್ನು ಸಂರಕ್ಷಿಸಿ ಇಡಲಾಗುತ್ತಿದೆ.

5 ಜಿ ತಂತ್ರಜ್ಞಾನ ಮುಂದಿನ ಬದುಕಿನ ಎಷ್ಟು ಭಾಗವನ್ನುಆಚರಿಸುತ್ತದೆ ಎಂಬಂತಹ ಕೌತುಕ ವಿಷಯಗಳನ್ನು ಟೆಕ್ ಲೋಕದಲ್ಲಿ ಹತ್ತು ಹೊಸ ಬೆಳವಣಿಗೆಗಳನ್ನು ದಾಖಲಿಸುವ ವಿಶಿಷ್ಟ ವಿಚಾರಸಾಹಿತ್ಯ ಕೃತಿ ಟೆಕ್ ಲೋಕದ ಹತ್ತು ಹೊಸ ಮುಖಗಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Samanvita completing 10 year, in the vocation They are organising book release program on July 14 in Kannada sahitya Parishath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more