ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭೀಕರ ವಿಡಿಯೋ: ಧರ್ಮಪುರಿ ಬಳಿ ಅಪಘಾತಕ್ಕೆ ನಾಲ್ವರು ಬಲಿ

|
Google Oneindia Kannada News

ಧರ್ಮಪುರಿ, ಡಿ.13: ಬೆಂಗಳೂರು-ಸೇಲಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟು, 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸುಮಾರು 14ಕ್ಕೂ ಅಧಿಕ ವಾಹನಗಳು ಜಖಂಗೊಂಡಿದ್ದು, ಭೀಕರ ಅಪಘಾತದ ಚಿತ್ರ, ವಿಡಿಯೋಗಳು ಇದೀಗ ಲಭ್ಯವಾಗಿದೆ.

ಧರ್ಮಪುರಿ ಸಮೀಪ ತೊಪ್ಪೂರು ಘಾಟ್ ಬಳಿ ಸಿಮೆಂಟ್ ಹೊತ್ತೊಯ್ಯುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಸಂಭವಿಸಿದ ಅಫಘಾತ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜೊತೆಗೆ ಘಟನೆ ನಡೆದ ಕೆಲವು ಕ್ಷಣದಲ್ಲಿ ನೂರಾರು ಮಂದಿ ನೆರೆದು ವಿಡಿಯೋ ತೆಗೆದು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಆಂಧ್ರಪ್ರದೇಶದಿಂದ ಹೊರಟ್ಟಿದ್ದ ಸಿಮೆಂಟ್ ಟ್ರಕ್ ಸೇಲಂ ತಲುಪಬೇಕಾಗಿತ್ತು. ಮಾರ್ಗಮಧ್ಯದಲ್ಲಿ ಈ ಅಪಘಾತಕ್ಕೆ ಕಾರಣವಾಗಿದ್ದು, 12 ಕಾರು, ಒಂದು ಮಿನಿವ್ಯಾನ್, ಒಂದು ಬೈಕನ್ನು ಉಜ್ಜಿಕೊಂಡು ಸುಮಾರು ದೂರ ಸಾಗಿದ್ದು, ನಂತರ ಸಂಚಾರ ದಟ್ಟಣೆಯಲ್ಲಿ ನಿಂತಿದ್ದ ವಾಹನಗಳನ್ನು ನಜ್ಜುಗುಜ್ಜಾಗಿಸಿದೆ.

Salem-Bengaluru National Highway accident: Four killed, many injured near Dharmapuri

ಘಟನೆ ಸಂಭವಿಸಿದ ಕೆಲ ಕ್ಷಣಗಳಲ್ಲೇ ಸಂಚಾರ ದಟ್ಟಣೆ ಅಧಿಕವಾಗಿತ್ತು. ಆದರೆ, ಹೆದ್ದಾರಿ ಪೆಟ್ರೋಲ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿ ನಿಭಾಯಿಸಿದರು.

ಈ ದುರ್ಘಟನೆಯಲ್ಲಿ ಒಮಲೂರಿನ ಮದನ್ ಕುಮಾರ್ (42), ಪಗಲ್ ಪಟ್ಟಿಯ ಟಿ ಕಾರ್ತಿಕ್ (38), ಕೊಯಮತ್ತೂರಿನ ನಿತ್ಯಾನಂದನ್ (35) ಹಾಗೂ ಕಾರಿನಲ್ಲಿದ್ದ ಮತ್ತೊಬ್ಬರು ಪೆರಂಬಾಲೈನ ಜಿ ಕಣ್ಣನ್(42) ಧರ್ಮಪುರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 8 ಮಂದಿಯನ್ನು ಸಕ್ರಾರಿ ಆಸ್ಪತ್ರೆಗೆ ದಾಖಲಿಸಲಾಗಿಸಿ, ಚಿಕಿತ್ಸೆ ಕೊಡಿಸಲಾಗಿದೆ ಎಂದು ಎಸ್ಪಿ ಪ್ರವೇಶ್ ಕುಮಾರ್ ಹೇಳಿದರು.

Salem-Bengaluru National Highway accident: Four killed, many injured near Dharmapuri

ಘಟನಾ ಸ್ಥಳಕ್ಕೆ ಆಗಮಿಸಿದ ಧರ್ಮಪುರಿ ಜಿಲ್ಲಾಧಿಕಾರಿ ಎಸ್. ಪಿ ಕಾರ್ತಿಕಾ ಅವರು ರಕ್ಷಣಾ ಕಾರ್ಯಾಚಾರಣೆ, ಸಂಚಾರ ಸುಗಮಗೊಳಿಸಲು ಕೈಗೊಂಡ ಕ್ರಮದ ಬಗ್ಗೆ ಪರಿಶೀಲಿಸಿದರು.

ಹೆದ್ದಾರಿಗಳಲ್ಲಿ ವಾಹನಗಳ ವೇಗಮಿತಿ ಪರಿಶೀಲಿಸಲು ಕ್ಯಾಮೆರಾ ಅಳವಡಿಕೆ, ಹೆದ್ದಾರಿ ಪಕ್ಕದಲ್ಲಿ ಬದಲಿ ಮಾರ್ಗಕ್ಕಾಗಿ ಬೇಡಿಕೆ ಇಡಲಾಗಿದೆ, ತೊಪ್ಪೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಕಾರಣವಾದ ಟ್ರಕ್ ಚಾಲಕ ನಾಪತ್ತೆಯಾಗಿದ್ದಾನೆ ಎಂದು ಹೇಳಿದರು.

Recommended Video

ಕರ್ನಾಟಕ: ಉಲ್ಟಾ ಹೊಡೆದ ಸಾರಿಗೆ ನೌಕರರ ಸಂಘದ ಮುಖಂಡರು, ಮತ್ತೆ ಮುಷ್ಕರ ಮುಂದುವರೆಸುವುದಾಗಿ ಘೋಷಣೆ | Oneindia Kannada

ಸೇಲಂ -ಬೆಂಗಳೂರು ಹೆದ್ದಾರಿಯಲ್ಲಿ ಅಪಘಾತ ತಪ್ಪಿಸಲು ಬದಲಿ ಮಾರ್ಗ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, 140 ಕೋಟಿ ರು ವೆಚ್ಚದ ಯೋಜನಾ ವಿವರಗಳನ್ನು ಸಲ್ಲಿಸಲಾಗಿದೆ ಆದರೆ, ಹಾಲಿ ಬಳಕೆಯಲ್ಲಿರುವ ರಸ್ತೆಗಳನ್ನು 6ಲೇನ್ ರಸ್ತೆಯನ್ನಾಗಿಸುವುದಾಗಿ ಕೇಂದ್ರ ಭರವಸೆ ನೀಡಿತ್ತು. ಆದರೆ, ಎರಡು ಕೂಡಾ ಇನ್ನೂ ಕೈಗೊಂಡಿಲ್ಲ ಎಂದು ಸಂಸದ ಅನ್ಬುಮಣಿ ರಾಮದಾಸ್ ಬೇಸರ ವ್ಯಕ್ತಪಡಿಸಿದ್ದಾರೆ.

English summary
Four killed, many injured When a truck hit 14 vehicles near Dharmapuri on Salem-Bengaluru National Highway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X