ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2018-19ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

|
Google Oneindia Kannada News

ಬೆಂಗಳೂರು, ಮಾರ್ಚ್ 6; 2018 ಹಾಗೂ 2019ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯು ಶುಕ್ರವಾರ ಪ್ರಕಟಿಸಿದೆ. ಶುಕ್ರವಾರ ಅಧ್ಯಕ್ಷ ಡಾ.ಬಿ.ವಿ. ವಸಂತಕುಮಾರ್ ನೇತೃತ್ವದಲ್ಲಿ ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ತೆಗೆದು ಕೊಳ್ಳಲಾಗಿದೆ.

2019ನೇ ಸಾಲಿನ ಗೌರವ ದತ್ತಿ ಪ್ರಶಸ್ತಿಯನ್ನು ಕೆ.ಜಿ.ನಾಗರಾಜಪ್ಪ, ಬಾಬು ಕೃಷ್ಣಮೂರ್ತಿ, ಉಷಾ ಪಿ.ರೈ, ಲಕ್ಷ್ಮಣ ತೆಲಗಾವಿ, ಡಾ. ವೀರಣ್ಣ ರಾಜೂರ ಅವರಿಗೆ ನೀಡಲಾಗಿದೆ.

2019ನೇ ಸಾಲಿನ ಸಾಹಿತ್ಯ ಪ್ರಶಸ್ತಿಯನ್ನು ಡಾ. ಅಮರೇಶ ನುಗಡೋಣೆ, ಡಾ. ವಿ.ಎಸ್.ಮಾಳಿ, ಸುಬ್ಬು ಹೊಲೆಯಾರ್, ಡಾ. ಶಾರದಾ ಕುಪ್ಪಂ, ಪಿ.ಶಿವಣ್ಣ, ಡಾ. ಎಂ.ಎಸ್.ವೇದಾ, ಎಫ್.ಟಿ. ಹಳ್ಳಿಕೇರಿ, ಡಾ. ಮಾಧವ ಪೆರಾಜೆ, ವಸುಧೇಂದ್ರ, ಡಾ. ಜಿ.ಪ್ರಶಾಂತ ನಾಯಕ ಅವರಿಗೆ ನೀಡಲಾಗಿದೆ.

Sahitya Akademi Award Announcement 2018-19

ಇದೇ ವೇಳೆ 10 ಜನರಿಗೆ 2019ನೇ ಸಾಲಿನ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿ, 2018ರ ವರ್ಷದ ಪುಸ್ತಕ ಬಹುಮಾನ ಮತ್ತು 2018ರ ವರ್ಷದ ಅಕಾಡೆಮಿಯ 9 ದತ್ತಿನಿಧಿ ಬಹುಮಾನ ಘೋಷಿಸಲಾಯಿತು. 2018ರ ವರ್ಷದ ಪುಸ್ತಕ ಬಹುಮಾನಕ್ಕೆೆ ಕಾವ್ಯ, ಕಾದಂಬರಿ, ಸಣ್ಣ ಕತೆ, ನಾಟಕ, ಲಲಿತ ಪ್ರಬಂಧ, ಪ್ರವಾಸ ಸಾಹಿತ್ಯ, ಆತ್ಮಕಥೆ, ಮಕ್ಕಳ ಸಾಹಿತ್ಯ, ವಿಜ್ಞಾನ, ಅನುವಾದ, ಅಂಕಣ ಬರಹ ಸೇರಿ 19 ವಿಭಾಗದಿಂದ ಪುಸ್ತಕಗಳನ್ನು ಆರಿಸಿಕೊಳ್ಳಲಾಗಿದೆ.

ಪ್ರಶಸ್ತಿಯು 25 ಸಾವಿರ ರೂ. ಪ್ರಮಾಣ ಪತ್ರ ಒಳಗೊಂಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ 2019ನೇ ಸಾಲಿನ ವರ್ಷದ ಗೌರವ ಪ್ರಶಸ್ತಿ 50 ಸಾವಿರ ರು. ನಗದು, ಫಲಕ ಮತ್ತು ಪ್ರಮಾಣ ಪತ್ರವನ್ನೊೊಳಗೊಂಡಿರುತ್ತದೆ. ಸಾಹಿತ್ಯ ಶ್ರೀ ಪ್ರಶಸ್ತಿಯು 25 ಸಾವಿರ ರು. ನಗದು, ಪ್ರಮಾಣಪತ್ರವನ್ನೊೊಳಗೊಂಡಿದೆ.

ಸಾಹಿತ್ಯಾಾಸಕ್ತರು ಸ್ಥಾಪಿಸಿದ 9 ದತ್ತಿ ಬಹುಮಾನ

ಕಾವ್ಯ-ಹಸ್ತಪ್ರತಿ (ಚಿ. ಶ್ರೀನಿವಾಸರಾಜು ದತ್ತಿನಿಧಿ)ಯಲ್ಲಿ ಒಂದು ಅಂಕ ಮುಗಿದು ಕೃತಿಗಾಗಿ ಸ್ಮಿತಾ ಮಾಕಳ್ಳಿ, ಕಾದಂಬರಿ (ಚದುರಂಗ ದತ್ತಿಿನಿಧಿ)ಯಲ್ಲಿ ಅತೀತ ಲೋಕದ ಮಹಾಯಾತ್ರಿಕ ಕೃತಿ ಬರೆದ ಡಾ. ಲೋಕೇಶ ಅಗಸನಕಟ್ಟೆೆ, ಲಲಿತಪ್ರಬಂಧ (ವಿ.ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ಬಹುಮಾನ) ವಿಭಾಗದಲ್ಲಿ ಚಿದಾನಂದ ಸಾಲಿ ಬರೆದ ಮೂರನೇ ಕಣ್ಣು, ಚಂದ್ರಶೇಖರ ಸುಭಾಸಗೌಡ ಪಾಟೀಲ್ ರಚಿಸಿದ ಬೇಸಾಯದ ಕತಿ ಎಂಬ ಜೀವನ ಚರಿತ್ರೆೆ (ಸಿಂಪಿ ಲಿಂಗಣ್ಣ ದತ್ತಿನಿಧಿ), ಸಾಹಿತ್ಯ ವಿಮರ್ಶೆ (ಪಿ. ಶ್ರೀನಿವಾಸರಾವ್ ದತ್ತಿನಿಧಿ)ಯಲ್ಲಿ ಸುರೇಶ್ ನಾಗಲಮಡಿಕೆ ಬರೆದ ಹಲವು ಬಣ್ಣದ ಹಗ್ಗ ಕೃತಿ, ಅನುವಾದ-1 (ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ) ರವೀಂದ್ರ ಗದ್ಯ ಸಂಚಯ ಕೃತಿ ರಚಿಸಿದ ಜಿ. ರಾಮನಾಥ ಭಟ್, ಲೇಖಕರ ಮೊದಲ ಸ್ವತಂತ್ರ ಕೃತಿ (ಮಧುರಚೆನ್ನ ದತ್ತಿನಿಧಿ) ವಿಭಾಗದಲ್ಲಿ ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ ಪುಸ್ತಕಕ್ಕಾಾಗಿ ಡಾ.ಲಕ್ಷ್ಮಣ ವಿ.ಎ., ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ (ಅಮೆರಿಕನ್ನಡ ದತ್ತಿಿನಿಧಿ)ದಲ್ಲಿ ಎನ್. ತಿರುಮಲ ಭಟ್‌ರ ದಿ ಅದರ್ ಫೇಸ್ ಹಾಗೂ ವೈಚಾರಿಕ/ ಅಂಕಣ ಬರಹ (ಬಿ.ವಿ. ವೀರಭದ್ರಪ್ಪ ದತ್ತಿನಿಧಿ)ಕ್ಕಾಾಗಿ ಮಹಾಭಾರತ ಅನುಸಂಧಾನದ ಭಾರತ ಯಾತ್ರೆೆ ರಚಿಸಿದ ಲಕ್ಷ್ಮೀಶ ತೋಳ್ಪಾಾಡಿಯವರಿಗೆ ಅಕಾಡೆಮಿಯಲ್ಲಿ ಸಾಹಿತ್ಯಾಾಸಕ್ತ ದಾನಿಗಳು ಸ್ಥಾಾಪಿಸಿರುವ 9 ದತ್ತಿ ಬಹುಮಾನ ದೊರೆತಿದೆ.

English summary
Karnataka Sahitya Akademi Award Announcement 2018-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X