ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಉಪ ಚುನಾವಣೆ 2019 : ಮೈತ್ರಿಕೂಟ, ಬಿಜೆಪಿಗೆ ತಲಾ 1 ಸ್ಥಾನ

|
Google Oneindia Kannada News

ಬೆಂಗಳೂರು, ಮೇ 31 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎರಡು ವಾರ್ಡ್‌ಗಳಿಗೆ ನಡೆದ ಉಪ ಚುನಾಣೆಯಲ್ಲಿ ಬಿಜೆಪಿಗೆ ಒಂದು ಸ್ಥಾನ, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಒಂದು ಸ್ಥಾನ ಸಿಕ್ಕಿದೆ. ಮೇ 29ರಂದು ಉಪ ಚುನಾವಣೆ ನಡೆದಿತ್ತು.

ಶುಕ್ರವಾರ ಬಿಬಿಎಂಪಿ ಉಪ ಚುನಾವಣೆಯ ಮತ ಎಣಿಕೆ ನಡೆಯಿತು. ಕಾವೇರಿಪುರ ವಾರ್ಡ್‌ನಲ್ಲಿ ಬಿಜೆಪಿಯ ಸಿ.ಪಲ್ಲವಿ ಅವರು ಜಯಗಳಿಸಿದರು. ಸಗಾಯಪುರ ವಾರ್ಡ್‌ನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪಳನಿಯಮ್ಮಾಳ್ ಅವರು ಜಯಗಳಿಸಿದರು.

ಬಿಬಿಎಂಪಿ ಚುನಾವಣಾ ಫಲಿತಾಂಶ : ಸಮಗ್ರ ಮಾಹಿತಿಬಿಬಿಎಂಪಿ ಚುನಾವಣಾ ಫಲಿತಾಂಶ : ಸಮಗ್ರ ಮಾಹಿತಿ

ಜೆಡಿಎಸ್‌ನ ರಮೀಳಾ ಉಮಾ ಶಂಕರ್ ಅವರ ನಿಧನದಿಂದಾಗಿ ಕಾವೇರಿಪುರ, ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಸದಸ್ಯ ಏಳುಮಲೈ ಅವರ ನಿಧನದಿಂದಾಗಿ ಸಗಾಯಪುರ ವಾರ್ಡ್‌ನಲ್ಲಿ ಉಪ ಚುನಾವಣೆ ಎದುರಾಗಿತ್ತು. ಉಪ ಚುನಾವಣೆಯಲ್ಲಿ ಕಾವೇರಿಪುರದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಜೆಡಿಎಸ್ ಕ್ಷೇತ್ರವನ್ನು ಕಳೆದುಕೊಂಡಿದೆ.

ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಪ್ರಕಟ: ಕಾಂಗ್ರೆಸ್ ಮೇಲುಗೈನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಪ್ರಕಟ: ಕಾಂಗ್ರೆಸ್ ಮೇಲುಗೈ

2015ರಲ್ಲಿ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 100, ಕಾಂಗ್ರೆಸ್ 76, ಜೆಡಿಎಸ್ 14, ಇತರೆ ಅಭ್ಯರ್ಥಿಗಳು 8 ಕ್ಷೇತ್ರಗಳಲ್ಲಿ ಜಯಗಳಿಸಿದ್ದರು. ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಾಗಿ ಬಿಜೆಪಿಗೆ ಪಾಲಿಕೆಯ ಅಧಿಕಾರ ಸಿಕ್ಕಿಲ್ಲ.

ಕಾವೇರಿಪುರ ವಾರ್ಡ್‌ ಫಲಿತಾಂಶ

ಕಾವೇರಿಪುರ ವಾರ್ಡ್‌ ಫಲಿತಾಂಶ

ಕಾವೇರಿಪುರ ವಾರ್ಡ್‌ ಉಪ ಚುನಾವಣೆಯಲ್ಲಿ ಬಿಜೆಪಿಯ ಸಿ.ಪಲ್ಲವಿ ಅವರು 9,507 ಮತಗಳನ್ನು ಪಡೆದು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸುಶೀಲಾ ಸುರೇಶ್ ಅವರನ್ನು 78 ಮತಗಳ ಅಂತರದಿಂದ ಸೋಲಿಸಿದ್ದಾರೆ. ಸುಶೀಲ ಸುರೇಶ್ ಅವರು 9,429 ಮತಗಳನ್ನು ಪಡೆದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಬಿಜೆಪಿ ಅಭ್ಯರ್ಥಿ ಸೋಲಿಸಲು ಸಾಧ್ಯವಾಗಿಲ್ಲ.

ಸಗಾಯಪುರ ವಾರ್ಡ್‌ ಮೈತ್ರಿಕೂಟಕ್ಕೆ ಜಯ

ಸಗಾಯಪುರ ವಾರ್ಡ್‌ ಮೈತ್ರಿಕೂಟಕ್ಕೆ ಜಯ

ಸಗಾಯಪುರ ವಾರ್ಡ್‌ನಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಪಳನಿಯಮ್ಮಾಳ್ ಅವರು 6,313 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಜೈರಿಮ್ ಅವರು ಕೇವಲ 431 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಮಾರಿಮುತ್ತು ಅವರು 3,791 ಮತ ಪಡೆದು ಸೋತಿದ್ದಾರೆ. ಗೆಲುವಿನ ಅಂತರ 2,522 ಮತಗಳು.

ಮಾರಿಮುತ್ತು ಸೋಲು

ಮಾರಿಮುತ್ತು ಸೋಲು

ಸಗಾಯಪುರ ವಾರ್ಡ್‌ನಲ್ಲಿ ಜೆಡಿಎಸ್ ಟಿಕೆಟ್ ಕೈ ತಪ್ಪಿದ್ದರಿಂದ ಮಾರಿಮುತ್ತು ಅವರು ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಚುನಾವಣೆಯಲ್ಲಿ ಅವರು 3,791 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.

ಕ್ಷೇತ್ರ ಕಳೆದುಕೊಂಡ ಜೆಡಿಎಸ್

ಕ್ಷೇತ್ರ ಕಳೆದುಕೊಂಡ ಜೆಡಿಎಸ್

ಜೆಡಿಎಸ್‌ನ ರಮೀಳಾ ಉಮಾ ಶಂಕರ್ ಅವರ ನಿಧನದಿಂದಾಗಿ ಕಾವೇರಿಪುರ ವಾರ್ಡ್‌ಗೆ ಉಪ ಚುನಾವಣೆ ಎದುರಾಗಿತ್ತು. ಉಪ ಮೇಯರ್ ಆಗಿದ್ದ ರಮೀಳಾ ಉಮಾ ಶಂಕರ್ ಅವರು ಹೃದಯಾಘಾತದಿಂದಾಗಿ ನಿಧನಹೊಂದಿದ್ದರು. ಉಪ ಚುನಾವಣೆಯಲ್ಲಿ ವಾರ್ಡ್ ಬಿಜೆಪಿ ವಶವಾಗಿದ್ದು ಜೆಡಿಎಸ್ 1 ಕ್ಷೇತ್ರ ಕಳೆದುಕೊಂಡಿದೆ.

English summary
BJP candidate Pallavi won Kaveripura ward and Congress-JD(S) alliance candidate Palaniammal won in Sagayapuram ward BBMP by elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X