• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗೆಲ್ಲಿಸಿದ ಮತದಾರರಿಗೆ ಸದಾನಂದಗೌಡ ಬಹಿರಂಗ ಪತ್ರ

|

ಬೆಂಗಳೂರು, ಮೇ 24: ಸದಾನಂದಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಎದುರಾಳಿ ಕೃಷ್ಣಬೈರೇಗೌಡ ಅವರನ್ನು ಸೋಲಿಸಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸದಾನಂದಗೌಡ ಅವರ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ ಎನ್ನಲಾಗಿತ್ತು, ಹಾಗಿದ್ದಾಗ್ಯೂ ಅವರು ಎದುರಾಳಿಯನ್ನು 1.47 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ.

ಗೆದ್ದ ಬಳಿಕ ತಮ್ಮ ಕ್ಷೇತ್ರದ ಮತದಾರರಿಗೆ ಬಹಿರಂಗ ಬರೆದಿರುವ ಸದಾನಂದಗೌಡ ಅವರು, ಗೆಲ್ಲಿಸಿದ್ದಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ. ಸದಾನಂದಗೌಡ ಪತ್ರದ ಪೂರ್ಣ ಒಕ್ಕಣೆ ಇಲ್ಲಿದೆ. ಇದೇ ಪತ್ರವನನ್ನು ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಇಬ್ಬರೇ ಸಂಸದರಿಂದ 303 ಸಂಸದರವರೆಗೆ ಬಿಜೆಪಿ ಬೆಳವಣಿಗೆಯ ರೋಚಕ ಕತೆ

ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ.. ಭಾರತೀಯ ಜನತಾ ಪಾರ್ಟಿಯ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಕೇಂದ್ರದಲ್ಲಿ ಅಧಿಕಾರಿ ಹಿಡಿದಿದೆ. ಈ ಸಂದರ್ಭದಲ್ಲಿ ದೇಶದ, ರಾಜ್ಯದ ಹಾಗು ನನ್ನ ಕ್ಷೇತ್ರದ ಜನತೆಗೆ ನನ್ನ ಹೃದಯ ಪೂರ್ವಕ ಕೃತಜ್ಞತೆಗಳನ್ನ ಸಲ್ಲಿಸುತ್ತೇನೆ.‌

ದೇಶ ಪ್ರಥಮ ಎಂಬ ಘೋಷ ವಾಕ್ಯಕ್ಕೆ ಇಂದು ಜನಾದೇಶ ಸಿಕ್ಕಿದೆ*. *ನರೇಂದ್ರ ಮೋದಿ ಅವರು 5 ವರ್ಷ ಮಾಡಿದ ಆಡಳಿತ ವೈಖರಿ, ಅದರ ಮುಖಾಂತರ ದೇಶದ ಅಭಿವೃದ್ಧಿ, ಜನತೆಯ ಸಮಸ್ಯೆಗಳ ಪರಿಹಾರ ಮತ್ತು ರಾಷ್ಟ್ರದ ಘನತೆ ಗೌರವ ಎತ್ತಿ ಹಿಡುವಂತಹ ಕೆಲಸವನ್ನ ಜನ ಇಂದು ಒಪ್ಪಿಕೊಂಡಿದ್ದಾರೆ..

ನಿಮ್ಮ ಆಶೀರ್ವಾದ ಜವಾಬ್ದಾರಿ ಹೆಚ್ಚಿಸಿದೆ

ಜನರ ಈ ವಿಶೇಷವಾದ ಆಶೀರ್ವಾದ ನಮ್ಮ ಜವಾಬ್ದಾರಿಯನ್ನ ಮತ್ತಷ್ಟು ಹೆಚ್ಚಿಸಿದೆ.. ನಿಮ್ಮಿಂದ ಹೆಚ್ಚು ನಿರೀಕ್ಷೆ ಮಾಡುತ್ತೇವೆ ಎಂಬ ಭಾವನೆಯನ್ನ ಉಂಟು ಮಾಡಿದೆ.. ಈ ಸಂದರ್ಭದಲ್ಲಿ, ನನ್ನ ದೇಶದ ರಾಜ್ಯದ ಕ್ಷೇತ್ರದ ಜನತೆಗೆ ಭವರಸೆ ನೀಡಲು ಇಚ್ಛೆ ಪಡುತ್ತಿದ್ದೇನೆ. ನಿಮ್ಮ ನಿರೀಕ್ಷೆಗೆ ಅನುಗುಣವಾಗಿ ನಡೆದುಕೊಳ್ಳುವ ಕೆಲಸ ಮಾಡುತ್ತೇನೆ.

ಲೋಕಸಭೆ ಚುನಾವಣೆ : ಕರ್ನಾಟಕದಲ್ಲಿ ಸೋತ ಘಟಾನುಘಟಿ ನಾಯಕರು!

'ಬೇಸರವಾಗುವಂತೆ ನಡೆದುಕೊಳ್ಳುವುದಿಲ್ಲ'

ನಿಮಗೆ ಎಂದು ವಿಶ್ವಾಸ ದ್ರೋಹ, ನಿಮ್ಮ ಮನಸ್ಸಿನ ಭಾವನೆಗೆ ಚ್ಯುತಿ ಬರುವಂತಹ ರೀತಿಯಲ್ಲಿ ನಾವು ನಡೆದುಕೊಳ್ಳಲ್ಲ*.. ಈ ಸಂದರ್ಭದಲ್ಲಿ ನನ್ನ ಕ್ಷೇತ್ರದ ಜನಗೆ ವಿಶೇಷವಾಗಿ ಕೃತಜ್ಞತೆಯನ್ನ ಸಲ್ಲಿಸುತ್ತೇನೆ.. ಕಳೆದ 5 ವರ್ಷಗಳಲ್ಲಿ ನಿಮ್ಮ ಸೇವೆಯನ್ನ ಮಾಡಿದ್ದಕ್ಕೆ, ಮತ್ತಷ್ಟು ಕೆಲಸವನ್ನ ನನ್ನಿಂದ ನಿರೀಕ್ಷೆ ಮಾಡುವ ನಿಟ್ಟಿನಲ್ಲಿ ಜನಾದೇಶ ನೀಡಿದ್ದೀರಿ.

ನೂರಾರು ಸಮಸ್ಯೆಗೆ ಸ್ಪಂದಿಸಿದ್ದೇನೆ: ಸದಾನಂದಗೌಡ

ಈ ಕ್ಷೇತ್ರದ ನೂರಾರು ಸಮಸ್ಯೆಗೆ ಸ್ಪಂದನೆ ಮಾಡಿದ್ದೇನೆ ಇನ್ನೂ ಸೇವೆ ಮಾಡಲು ಸಾಕಷ್ಟಿದೆ ಎಂದು ನಂಬಿದ್ದೇನೆ. ದೇಶದಲ್ಲಿಯೇ ಅತ್ಯಂತ ದೊಡ್ಡ ಕ್ಷೇತ್ರವಾದಂತಹ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸುಮಾರು 29 ಲಕ್ಷ ಮತದಾರರ ಆಶೀರ್ವಾದ ಪಡೆದುಕೊಂಡು ಮುಂದೆ ಹೋಗುತ್ತಿದ್ದೇನೆ. ನಾನು ಮನಃ ಪೂರ್ವಕವಾಗಿ ಅಂತಃಕರಣ ಸಾಕ್ಷಿಯಾಗಿ ನನ್ನ ಮತದಾರ ಬಂಧುಗಳಿಗೆ ಅಭಿನಂದನೆಯನ್ನ ಸಲ್ಲಿಸುತ್ತೇನೆ.‌

ಕೋಟಿ ಕೋಟಿ 'ಅಭಿನಂದನ್' ಎಂದ ಮೋದಿ, ಪಾಕಿಸ್ತಾನಕ್ಕೆ ನಡುಕ!

ಏಳು ಜನ ಶಾಸಕರು ವಿರೋಧಿ ಬಣದಲ್ಲಿ

ಒಂದು ಸವಾಲಾಗಿತ್ತು ಈ ಕ್ಷೇತ್ರ.. 7 ಜನ ಶಾಸಕರು ನನ್ನ ವಿರೋಧಿ ಬಣದಲ್ಲಿದ್ರು.. ಒಬ್ಬ ಶಾಸಕರು ಮಾತ್ರ ನನ್ನ ಜೊತೆ ಇದ್ರು.. ಇಡೀ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಗೆಲುವ ಕಷ್ಟ ಎಂಬ ವಾತವರಣ ಸೃಷ್ಟಿಯಾಗಿತ್ತು.. ಆದರೆ ನನ್ನ ಪಕ್ಷದ ಕಾರ್ಯಕರ್ತರು ಈ ಸವಾಲನ್ನ ಅತ್ಯಂತ ಯಶಸ್ವಿಯಾಗಿ ಸ್ವೀಕಾರ ಮಾಡಿ ರಾತ್ರಿ ಹಗಲ್ಲೆನ್ನದೆ ದಿನದ‌24 ಗಂಟೆ ದುಡಿಯುವ ಕೆಲಸ ಮಾಡಿದ್ರು.. ಆರೋಪ ಪ್ರತ್ಯಾರೋಪ ಅಪವಾದಗಳನ್ನ ಕೇಳಿ ಅದನ್ನ ಮೆಟ್ಟಿನಿಂತು ನರೇಂದ್ರ ಮೋದಿ ಅವರ ಸಾಧನೆಯನ್ನ, ನಾನು ಈ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಪರ ಕೆಲಸಗಳನ್ನ ನಿಮಗೆ ತಿಳಿಸುವಂತಹ ಕೆಲಸ ಕಾರ್ಯಗಳನ್ನ ಮಾಡಿದ್ರು.

ಕಾರ್ಯಕರ್ತರಿಗೆ ತಲೆತಗ್ಗಿಸಿ ವಂದನೆ

ನನ್ನ ಕಾರ್ಯಕರ್ತರಿಗೆ ತಲೆತಗ್ಗಿಸಿ ವಂದಿಸುತ್ತ, ಅವರ ಶ್ರಮಕ್ಕೆ ಗೌರವ ತರುವಂತ ಹಾಗು ದಿನದ 24 ಗಂಟೆ ಅವರ ಅಹವಾಲುಗಳನ್ನ ಆಲಿಸುವಂತಹ ಕೆಲಸ ಮಾಡುತ್ತೇನೆ.. ಕೊನೆಯದಾಗಿ ಆ ಪರಮಾತ್ಮ ಈ ಕ್ಷೇತ್ರದ ಎಲ್ಲ ಅಭಿವೃದ್ಧಿಯನ್ನ ಮಾಡಲು ಶಕ್ತಿ ಕೊಡಲಿ ಮತ್ತು ನಿಮ್ಮ ಮಾರ್ಗದರ್ಶನ ನನಗೆ ಹೆಚ್ಚು ಹೆಚ್ಚು ಸಿಗಲಿ ಎಂಬ ಪಾರ್ಥನೆಯನ್ನ ಮಾಡುತ್ತೇನೆ.

ಮೂರು ಮೆಟ್ರೋ ಸಿಟಿಗಳಲ್ಲಿ ಬಿಜೆಪಿ ಬಿರುಗಾಳಿಗೆ ಕಾಂಗ್ರೆಸ್ ಧೂಳೀಪಟ

English summary
Center minister Sadananda Gowda write open letter to his constituency people for voting him. He contested from Bengaluru North and he win by 1.47 lakh votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more