ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜುಲೈನಲ್ಲಿ ಸದಾನಂದ ಗೌಡ ಚೊಚ್ಚಲ ಬಜೆಟ್

By Mahesh
|
Google Oneindia Kannada News

ಬೆಂಗಳೂರು, ಮೇ 30: ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರು ಜುಲೈ ತಿಂಗಳಲ್ಲಿ ಚೊಚ್ಚಲ ಬಜೆಟ್ ಮಂಡಿಸುವುದಾಗಿ ಹೇಳಿದ್ದಾರೆ. ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ್ದು, ರಾಜ್ಯ ಬಿಜೆಪಿ ಏರ್ಪಡಿಸಿದ್ದ ಅದ್ಧೂರಿ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಹೊಸ ಸರ್ಕಾರದ ಮೊದಲ ಅಧಿವೇಶನ ಜೂನ್ 4ರಿಂದ 11ರವರೆಗೆ ನಡೆಯಲಿದೆ. ಜೂನ್ 9ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಲೋಕಸಭೆ ಮತ್ತು ರಾಜ್ಯಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಹದಿಮೂರು ಲಕ್ಷ ಸಿಬ್ಬಂದಿ ಇರುವ ಸಮುದ್ರದಂಥ ಖಾತೆಯ ಜವಾಬ್ದಾರಿಯನ್ನು ಮೋದಿಯವರು ವಹಿಸಿಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ, ರಾಜ್ಯ ಹಾಗೂ ದೇಶದ ಜನರ ನಂಬಿಕೆ ಹುಸಿಯಾಗದಂತೆ ಕೆಲಸ ಮಾಡುತ್ತೇನೆ. ಮೊದಲ ದಿನ ಹೇಳಿದಂತೆ ರೈಲ್ವೆ ಸುರಕ್ಷತೆ ಹಾಗೂ ಸಿಬ್ಬಂದಿಗಳ ಕುಂದು ಕೊರತೆ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

DV Sadanana Likely present maiden Railway Budget in July

ರಾಜ್ಯದ ಜನ, ಬೆಂಗಳೂರು ಜನ ಬಿಜೆಪಿ ಮೇಲೆ ನಂಬಿಕೆ, ಭರವಸೆ ಇಟ್ಟು 17 ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡುವುದಿಲ್ಲ.ಕಾಂಗ್ರೆಸ್‌ನವರು ಭೂಮಿ ಮತ್ತು ಆಕಾಶದವರೆಗೆ ತಿಂದು ತೇಗಿದ್ದಾರೆ, ಈಗ ಹಳೆಯ ಕೊಳೆಯನ್ನೆಲ್ಲಾ ತೊಳೆದು ಸರಿಪಡಿಸಬೇಕಾಗಿದೆ ಎಂದು ಸದಾನಂದ ಗೌಡರು ಹೇಳಿದರು.

ಈ ಬಾರಿ ಹೆಚ್ಚಿನ ಇಂಟರ್ ಸಿಟಿ ರೈಲು, ಮಂಗಳೂರು ಸೇರಿದಂತೆ ಕನಿಷ್ಠ ಎರಡು ಪ್ರತ್ಯೇಕ ರೈಲ್ವೆ ವಿಭಾಗ, ಮೆಟ್ರೋ ರೈಲು ಸುಧಾರಣೆ, ಹೊಸ ಮಾರ್ಗಗಳು, ಸೂಪರ್ ಫಾಸ್ಟ್ ರೈಲುಗಳ ನಿರೀಕ್ಷೆ ಕನ್ನಡಿಗರಲ್ಲಿದೆ. ಕೋಲಾರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ, ಬೆಂಗಳೂರಿನಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ ಸಿಕ್ಕಿದ್ದು ಬಿಟ್ಟರೆ ಹೆಚ್ಚಿನ ಉಪಯೋಗವಾಗಿರಲಿಲ್ಲ.

ಮಲ್ಲಿಕಾರ್ಜುನ ಖರ್ಗೆ ಅವರು ಮಧ್ಯಂತರ ಬಜೆಟ್ ನಲ್ಲಿ ಸ್ವಲ್ಪ ಉದಾರತೆ ತೋರಿ 10 ಹೊಸ ರೈಲುಗಳು ಕರ್ನಾಟಕದ ವಿವಿಧ ಭಾಗಗಳಿಂದ ಚಲಿಸುವಂತೆ ಮಾಡಿದರು. ಆದರೆ, ರಾಜ್ಯದಿಂದ ಹೆಚ್ಚಿನ ಎಕ್ಸ್ ಪ್ರೆಸ್, ಪ್ರೀಮಿಯಂ ರೈಲುಗಳು ಪರರಾಜ್ಯಕ್ಕೆ ಸಂಚರಿಸುವುದರಿಂದ ಇಲ್ಲಿಗಿಂತ ಅಲ್ಲಿನ ಜನತೆಗೆ ಹೆಚ್ಚಿನ ಅನುಕೂಲಕರ ಎಂಬುದು ದುರಂತ ಸತ್ಯ. [ಕರ್ನಾಟಕ ಕೇಳಿದ್ದೇನು? ಸಿಕ್ಕಿದ್ದೇನು?]

English summary
With the railways facing a huge financial jolt with the diesel hike and Safety hazards Union railways minister Sadananda Gowda set to present his maiden budget in the Parliament in July Month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X