ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಲುಮರದ ತಿಮ್ಮಕ್ಕ ಸೇರಿ 12 ಸಾಧಕಿಯರು ಭೂಮಿಕಾ ಪ್ರಶಸ್ತಿಗೆ ಆಯ್ಕೆ

|
Google Oneindia Kannada News

ಬೆಂಗಳೂರು, ಮಾರ್ಚ್ 6: ಸಾಲುಮರದ ತಿಮ್ಮಕ್ಕ ಸೇರಿ 12 ಸಾಧಕರಿಯರನ್ನು ಭೂಮಿಕಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 12 ಜನ ಸಾಧಕಿಯರು ವಿಶ್ವ ಮಹಿಳಾ ದಿನಾಚರಣೆಯ ಅಂಗಾವಾಗಿ ಈಸ್ಟರ್ನ್ ಸಂಸ್ಥೆಯಿಂದ ನೀಡುವ "ಭೂಮಿಕಾ ಪ್ರಶಸ್ತಿಗೆ" ಆಯ್ಕೆ ಆಗಿದ್ದಾರೆ.

ಕೊಪ್ಪಳದ ಹೊಸ ಆಕರ್ಷಣೆ: ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ ಕೊಪ್ಪಳದ ಹೊಸ ಆಕರ್ಷಣೆ: ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ

ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ ಸಹ ಸಂಸ್ಥಾಪಕಿ ಕಲ್ಪನಾಕರ್, ಅಂತರಾಷ್ಟ್ರೀಯ ಈಜು ಪಟು, ಅರ್ಜುನ್ ಪ್ರಶಸ್ತಿ ವಿಜೇತೆ ನಿಶಾ ಮಿಲೆಟ್, ಪತ್ರಕರ್ತೆ ಮಾಯಾ ಶರ್ಮಾ, ಸಾಮಾಜಿಕ ಕಾರ್ಯಕರ್ತೆ ಸುನಿತಾ ಕೃಷ್ಣನ್, ಅಂಕಣಗಾರ್ತಿ ಸಾದಿಕಾ ಪೀರ್ಬೊಯ್, ಸಾಲು ಮರದ ತಿಮ್ಮಕ್ಕ, ಸಂಡೆ ಸೋಲ್ ಸಂತೆಯ ಸಂಸ್ಥಾಪಕಿ ಆಶಾ ರಾವ್, ಅರ್ಗ್ಯಮ್ ಸಂಸ್ಥೆಯ ರೋಹಿಣಿ ನೀಲೆಕಣಿ, ಟೇರ್ರಾ ಬ್ಲೂ ಸಂಸ್ಥಾಪಕಿ ರಾಜಲಕ್ಷ್ಮೀ ಬೊರ್ತಕುರು, ಆಸಿಡ್ ದಾಳಿಯ ಸಂತ್ರಸ್ಥೆ ಪ್ರಗ್ಯಾ ಪ್ರಸುನ್, ಮಂಗಳ ಮುಖಿ ಅಕಯ್ ಪದ್ಮಾಶಾಲಿ, ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ನಂದನಾ ರೆಡ್ಡಿ ಸೇರಿದಂತೆ 12 ಜನ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Saalumarada thimmakka along with 12 Achievers will get Bhoomika Award

ಕಳೆದ ನಾಲ್ಕು ವರ್ಷಗಳಿಂದ ಈಸ್ಟರ್ನ್ ಸಂಸ್ಥೆಯು 80ಕ್ಕೂ ಹೆಚ್ಚು ಸಾಧಕಿಯರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮಾರ್ಚ್ 8 ರಂದು ಬೆಂಗಳೂರಿನ ಕೋರಮಂಗಲದಲ್ಲಿರುವ ಧವನಂ ಸರೋವರನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತ ಕ್ರೀಡಾ ಪಟು ಅಂಜು ಬಾಬಿ ಜಾರ್ಜ್ ಹಾಗೂ ಬೆಂಗಳೂರು ಆಗ್ನೆಯ ವಿಭಾಗದ ಡಿಸಿಪಿ ಇಶಾ ಪಂಥ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈಸ್ಟರ್ನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಫಿರೋಜ್ ಮಿರನ್ ವಹಿಸಿಕೊಳ್ಳಲಿದ್ದು ಸಂಸ್ಥೆಯ ಜನರಲ್ ಮ್ಯಾನೇಜರ್ ಕೃತಿಕಾ ಪಿವಿ ಭಾಗವಹಿಸಲಿದ್ದಾರೆ.

English summary
On the vocassion of Women's day Eastern organisation will decided to give Bhoomika award. Saalumarada thimmakka and other 12 achievers selected for this award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X