ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವ ದಾಖಲೆ ವೀರ ರಮೇಶ್‌‌ ಬಾಬು ಸಂದರ್ಶನ

By Ashwath
|
Google Oneindia Kannada News

ಬಹಳಷ್ಟು ಜನರಿಗೆ ಒಂದೊಂದು ವಿಚಾರದಲ್ಲಿ ಆಸಕ್ತಿ ಇರುತ್ತದೆ. ಆದರೆ ಎಲ್ಲಾ ವಿಚಾರದಲ್ಲಿ ಆಸಕ್ತಿ ಇರುವವರ ಸಂಖ್ಯೆ ಕಡಿಮೆ. ಆದರೆ ಇಲ್ಲೊಬ್ಬರು ಇದ್ದಾರೆ. ಅವರು ಕೈ ಹಾಕದೇ ಇರುವ ಕ್ಷೇತ್ರವಿಲ್ಲ. ಯಾವ ಕ್ಷೇತ್ರಕ್ಕೆ ಕೈ ಹಾಕುತ್ತಾರೋ ಆ ಕ್ಷೇತ್ರದಲ್ಲಿ ಅವರು ದಾಖಲೆ ಮಾಡುತ್ತಾರೆ.

ಬೆಂಗಳೂರಿನ ನಿವೃತ್ತ ಮೆಟಲರ್ಜಿ ವಿಜ್ಞಾನಿ ಆಗಿರುವ ಪ್ರೊ.ಡಾ. ಎಸ್‌. ರಮೇಶ್‌ ಬಾಬು ಇದುವರೆಗೂ 50 ವಿಶ್ವ ದಾಖಲೆ 9 ರಾಷ್ಟ್ರೀಯ ದಾಖಲೆಗಳನ್ನು ಬರೆದಿದ್ದಾರೆ. ಇವರಿಗೆ ದಾಖಲೆ ಮಾಡುವುದು ಅಂದರೆ ನೀರು ಕುಡಿದಷ್ಟು ಸಲೀಸು.

ದಾಖಲೆ ಮಾಡುವುದನ್ನೇ ಹವ್ಯಾಸ ವಾಗಿರಿಸಿಕೊಂಡಿರುವ ಇವರು ಭಾರತದಲ್ಲೇ ಅತಿ ಹೆಚ್ಚು ದಾಖಲೆ ಮಾಡಿದ ವ್ಯಕ್ತಿ ಎಂಬ ಪಟ್ಟಕ್ಕೆ ಭಾಜನರಾಗಿದ್ದಾರೆ. ದಾಖಲೆಗಳ ಸಂಖ್ಯೆಯಿಂದಾಗಿಯೇ ಈಗ ''ರೆಕಾರ್ಡ್ ರಮೇಶ್'' ಎಂದು ಪ್ರಸಿದ್ಧಿ ಪಡೆದಿದ್ದಾರೆ. ಬೆಂಗಳೂರಿನ ಟಾಟಾ ನಗರದ ನಿವಾಸಿಯಾಗಿರುವ 57 ವರ್ಷದ ರಮೇಶ್ ಬಾಬು ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ರಾಷ್ಟ್ರ ಮತ್ತು ವಿಶ್ವ ಮಟ್ಟದಲ್ಲಿ ದಾಖಲೆ ನಿರ್ಮಿಸುತ್ತಿದ್ದಾರೆ.

ಸೈಕಲ್‌ನಲ್ಲಿ ಕರ್ನಾಟಕದ 2,850 ಕಿ.ಮೀ ದೂರವನ್ನು 25 ದಿನದಲ್ಲಿ ಸುತ್ತಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಬಜಾ‌ಜ್‌ ಸ್ಕೂಟರ್‌ನಲ್ಲಿ ಬೆಂಗಳೂರಿನಿಂದ ಪುಣೆಯ 850ಕಿ.ಮೀ.ದೂರವನ್ನು 18.30 ಗಂಟೆಯಲ್ಲಿ ತಲುಪಿ ವಿಶ್ವದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮಾಂಝಾ ಕಾರಿನಲ್ಲಿ ಗೆಳೆಯರೊಂದಿಗೆ 3 ದಿನ 21ಗಂಟೆ 50 ನಿಮಿಷ ಸಾಗಿ ಹಿಂದಿದ್ದ ದಾಖಲೆಯನ್ನು ಅಳಿಸಿ ಹಾಕಿ ನೂತನ ರಾಷ್ಟ್ರೀಯ ದಾಖಲೆಯನ್ನು ಬರೆದಿದ್ದಾರೆ.

ಸೈಕಲ್‌, ಕಾರು, ಮೋಟಾರ್‌ ಸೈಕಲಿನಲ್ಲಿ ಮಾತ್ರ ಇವರು ದಾಖಲೆ ಮಾಡಿಲ್ಲ. ಕ್ರೀಡಾ ಕ್ಷೇತ್ರದಲ್ಲೂ ಇವರು ದಾಖಲೆ ಮಾಡಿದ್ದಾರೆ. ಕೇರಂನಲ್ಲಿ ಏಕಾಂಗಿಯಾಗಿ 39.61 ಸೆಕೆಂಡ್‌ನಲ್ಲಿ 9 ಬಿಳಿ, 9 ಕರಿ, 1 ಕೆಂಪು ಬಣ್ಣದ ಕಾಯಿನ್‌‌ಗಳನ್ನು ಖಾಲಿ ಮಾಡಿ ವಿಶ್ವ ದಾಖಲೆ ನಿರ್ಮಿ‌ಸಿದ್ದಾರೆ. ಒಂದು ಗಂಟೆಯಲ್ಲಿ 132 ಪೂರಿಯನ್ನು ನಿರ್ಮಿಸಿ ಅಡಿಗೆ ಕ್ಷೇತ್ರದಲ್ಲೂ ಇವರು ವಿಶ್ವದಾಖಲೆ ಮಾಡಿದ್ದಾರೆ.

ದಾಖಲೆ ಮಾಡಿರುವ ಕ್ಷೇತ್ರಗಳು:
ಟೇಬಲ್‌ ಟೆನ್ನೀಸ್‌, ಶಟ್ಲ್‌ ಬ್ಯಾಡ್‌ಮಿಂಟನ್‌, ಗಾಳಿಪಟ ರಚನೆ, ಸೈಕ್ಲಿಂಗ್‌, ವೇಗದ ಸ್ಕೂಟರ್‌ ಚಾಲನೆ, ವೇಗದ ಕಾರು ಚಾಲನೆ, ಲಾನ್‌ ಟೆನ್ನೀಸ್‌, ಥ್ರೊಬಾಲ್‌, ಬಾಸ್ಕೇಟ್‌ ಬಾಲ್‌, ಕೇರಂ ಆಟ, ಕಾಗದದ ವಿಮಾನ ರಚನೆ, ಪೂರಿ ಮಾಡುವುದು, ಗಿಫ್ಟ್‌ ಪ್ಯಾಕಿಂಗ್‌, ದೀರ್ಘ‌ ಕಾಲದ ಉಪನ್ಯಾಸ, ಸ್ಕಿಪ್ಪಿಂಗ್‌‌, ವೇಗದ ದೇಹ ತಿರುಗಿಸುವಿಕೆಯಲ್ಲಿ ಇವರು ದಾಖಲೆ ಮಾಡಿದ್ದಾರೆ.

ಇಂತಹ ದಾಖಲೆಯ ವೀರನಿಗೆ ಏಳು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಬಂದಿವೆ. 18 ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ಫರಿದಾಬಾದ್‌ನ ಇಂಡಿಯನ್ ಬುಕ್ ಆಫ್ ದಿ ರೆಕಾರ್ಡ್ ಸಂಸ್ಥೆಯೂ ಜೀವಮಾನದ ಶ್ರೇಷ್ಠ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದೆ.

 ಎಲ್ಲದರಲ್ಲೂ ಫಸ್ಟ್‌:

ಎಲ್ಲದರಲ್ಲೂ ಫಸ್ಟ್‌:

ರಮೇಶ್‌ ಬಾಬು ಅವರಿಗೆ ಸಣ್ಣವರಿದ್ದಾಗ ಎಲ್ಲಾ ತರಗತಿಯಲ್ಲಿ ಪ್ರಥಮ ಸ್ಥಾನ ಬರಬೇಕು ಎನ್ನುವ ಛಲದಿಂದ ವಿದ್ಯಾಭ್ಯಾಸ ಕೈಗೊಂಡವರು. ಈ ಛಲವೇ ವಿಶ್ವದಾಖಲೆಗಳನ್ನು ನಿರ್ಮಿಸಲು ಪ್ರೇರಣೆಯಂತೆ.

 ನೂರು ಪ್ರಶಸ್ತಿಗಳು

ನೂರು ಪ್ರಶಸ್ತಿಗಳು

ಶಾಲಾದಿನಗಳಲ್ಲಿಯೇ ಆಶುಭಾಷಣ, ಕ್ರೀಡೆ, ಸಂಗೀತ ಹೀಗೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಇವರು ಕಾಲೇಜು ಸೇರುವ ಹೊತ್ತಿಗೆ ಹತ್ತಿರ ಹತ್ತಿರ ನೂರು ಪ್ರಶಸ್ತಿಗಳನ್ನು ಪಡೆದಿದ್ದರು.

 ಪೇಟೆಂಟ್‌ ಮತ್ತು ಪಬ್ಲಿಕೇಶನ್‌:

ಪೇಟೆಂಟ್‌ ಮತ್ತು ಪಬ್ಲಿಕೇಶನ್‌:

ಮೆಟಲರ್ಜಿ ವಿಜ್ಞಾನಿ ಯಾಗಿರುವ ರಮೇಶ್‌ಬಾಬು 2 ಪೇಟೆಂಟ್‌ಗಳನ್ನು ಹೊಂದಿದ್ದಾರೆ,‌ 9 ಜರ್ನಲ್‌ ಪಬ್ಲಿಕೇಶನ್‌‌, 30 ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ.

 ಸಮಯಪಾಲನೆ ಅಗತ್ಯ:

ಸಮಯಪಾಲನೆ ಅಗತ್ಯ:

ನಮ್ಮಲ್ಲಿ ಅನೇಕ ಮಂದಿ ಕೆಲಸ ಮಾಡಲು ಸಮಯ ಇಲ್ಲ ಎಂದು ದೂರುತ್ತಾರೆ. ನಿಜವಾಗಿಯೂ ಕೆಲಸ ಮಾಡಲು 24 ಗಂಟೆ ಧಾರಾಳ ಸಾಕು. ನಾನು ಸಮಯಪಾಲನೆ ವಿಚಾರದಲ್ಲಿ ತುಂಬಾ ಕಟ್ಟುನಿಟ್ಟು. ಹೀಗಾಗಿ ಈ ದಾಖಲೆಗಳನ್ನು ಬರೆಯಲು ಸಾಧ್ಯವಾಯಿತು ಅಂತಾರೆ ರಮೇಶ್‌ ಬಾಬು.

ಉದಾಸೀನತೆಗೆ ಮದ್ದಿಲ್ಲ:

ಉದಾಸೀನತೆಗೆ ಮದ್ದಿಲ್ಲ:

ಭಾರತೀಯರಿಗೆ ಉದಾಸೀನ ಜಾಸ್ತಿ. ವಿದೇಶಿಯರಿಗೆ ಧೈರ್ಯ ಉತ್ಸಾಹ ಹೆಚ್ಚು. ವಿದೇಶಿ ಸಂಸ್ಕೃತಿಗೆ ಮರಳಾಗಿ ದೇಶದ ಯುವಜನತೆ ತಮ್ಮ ಆಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.

 ಕೃಷಿಯಲ್ಲೂ ಸೈ:

ಕೃಷಿಯಲ್ಲೂ ಸೈ:

ಟಾಟಾ ನಗರದಲ್ಲಿ ಮನೆ ಮಾಡಿಕೊಂಡಿರುವ ಇವರು ತಮ್ಮ 60*40 ಜಾಗದಲ್ಲಿ 23 ಮರಗಳನ್ನು ಬೆಳೆಸಿದ್ದಾರೆ. ಅಷ್ಟೇ ಅಲ್ಲದೇ ಈ ಜಾಗದಲ್ಲಿ ತರಕಾರಿಗಳನ್ನು ಸಹ ಬೆಳೆಸುತ್ತಿದ್ದಾರೆ.

ಬೆಕ್ಕಿನ ಪ್ರಪಂಚ:

ಬೆಕ್ಕಿನ ಪ್ರಪಂಚ:

ತಮ್ಮ ಮನೆಯಲ್ಲೇ ಬೆಕ್ಕುಗಳಿಗಾಗಿ ಪ್ರತ್ಯೇಕ ಮನೆಯನ್ನು ಸಹ ಇವರು ನಿರ್ಮಿಸಿದ್ದಾರೆ. ಎರಡು ವರ್ಷ‌ಗಳ ಹಿಂದೆ 17 ಬೆಕ್ಕುಗಳು ಇವರ ಮನೆಯಲ್ಲಿತ್ತು. ಇಗ ಸಂಖ್ಯೆ ಕಡೆಮೆಯಾಗಿದೆ. ಬೆಕ್ಕು ಸಾಕಾಣೆ ಅನುಭವದ ಮೇಲೆ ಸಾಕು ಪ್ರಾಣಿಗಳನ್ನು ಹೇಗೆ ಸಾಕಬೇಕು ಎನ್ನುವುದರ ಬಗ್ಗೆಯೂ ಉಪನ್ಯಾಸ ನೀಡುತ್ತಿದ್ದಾರೆ.

 ಕೇರಂನಲ್ಲಿ ಮೂರನೇ ದಾಖಲೆಗೆ ಸಿದ್ದತೆ

ಕೇರಂನಲ್ಲಿ ಮೂರನೇ ದಾಖಲೆಗೆ ಸಿದ್ದತೆ

ಕೇರಂನಲ್ಲಿ ಈಗಾಗಲೇ ಎರಡು ವಿಶ್ವ ದಾಖಲೆ ಬರೆದಿರುವ ರಮೇಶ್‌ ಬಾಬು ಜುಲೈನಲ್ಲಿ ಮತ್ತೊಂದು ವಿಶ್ವ ದಾಖಲೆ ಬರೆಯಲು ಸಿದ್ದತೆ ನಡೆಸುತ್ತಿದ್ದಾರೆ. 50 ನಿಮಿಷದಲ್ಲಿ ಏಕಾಂಗಿಯಾಗಿ ಸಾವಿರ ಪಾನ್‌‌ಗಳನ್ನು ಖಾಲಿ ಮಾಡುವ ಪ್ರಯತ್ನದಲ್ಲಿದ್ದಾರೆ.

 ಟಾಪ್ ಆಫ್ ದಿ ವರ್ಲ್ಡ್

ಟಾಪ್ ಆಫ್ ದಿ ವರ್ಲ್ಡ್

ರಮೇಶ್‌ ಬಾಬು 1999ರಲ್ಲಿ "ಟಾಪ್ ಆಫ್ ದಿ ವರ್ಲ್ಡ್" ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅದರ ಮೂಲಕ ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರದ 1 ಲಕ್ಷಕ್ಕೂ ಹೆಚ್ಚು ಜನರಿಗೆ ಏಕಾಂಗಿಯಾಗಿ ಕಾರ್ಯಾಗಾರ ನಡೆಸಿಕೊಟ್ಟಿದ್ದಾರೆ. ವಿದ್ಯಾರ್ಥಿ‌ಗಳಿಗೆ, ಗೃಹಿಣಿಯರಿಗೆ, ಕಾರ್ಪೋರೇಟ್‌ ಕ್ಷೇತ್ರದವರಿಗಾಗಿ ಇವರು ಪ್ರತ್ಯೇಕ ಕಾರ್ಯಾ‌ಗಾರವನ್ನು ನಡೆಸುತ್ತಿದ್ದಾರೆ.
ಈ ಸಂಸ್ಥೆಗೆ ಹಣಕಾಸಿನ ನೆರವು ನೀಡಿದ್ದಲ್ಲಿ ದೂರದ ಪ್ರದೇಶದಲ್ಲಿರುವ ಬಡಮಕ್ಕಳಿಗೆ ಮತ್ತಷ್ಟು ಕಾರ್ಯಾಗಾರವನ್ನು ನಡೆಸಲು ರಮೇಶ್‌ ಬಾಬು ಸಿದ್ದರಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ :
ರಮೇಶ್ ಬಾಬು : 94490 13887
ಇಮೇಲ್ ವಿಳಾಸ : [email protected]

English summary
Professor Ramesh Babu can skip faster, make more puris and bisect a cucumber into more pieces than any other person. Here's his story.A 57-year-old professor-turned-motivational speaker, Babu moonlights as an insistent record-setter and unlikely sportsman who has over 50 achievements recognised by the Guinness Book of World Records and the Limca Book of Records.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X