ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್ ನಲ್ಲಿ 'S' ಅಂದ್ರೆ ಏನು ಗೊತ್ತಾ? ಲಿಂಬಾವಳಿ ಹೇಳ್ತಾರೆ ಕೇಳಿ!

|
Google Oneindia Kannada News

ಬೆಂಗಳೂರು, ಮಾರ್ಚ್ 26: "ಜೆಡಿಎಸ್ ನಲ್ಲಿ 'S' ಅಂದ್ರೆ 'Stone Pelters' ಎಂದರ್ಥ" ಎಂದು ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಲೇವಡಿ ಮಾಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

"ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಶಾಸಕ ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ ಮಾಡಿದರು. ನಂತರ ಜೆಡಿಎಸ್ ಕಾರ್ಯಕರ್ತರು ನಟ ದರ್ಶನ್ ಮನೆ ಮೇಲೂ ಕಲ್ಲುತೂರಾಟ ಮಾಡಿದರು. ಅರಿಸಿಕೆರೆ ಜೆಡಿಎಸ್ ಮುಖಂಡರೊಬ್ಬರು ಅವರ ಪಕ್ಷದ ಜನರ ಬಳಿ ಕಲ್ಲು ತೂರಾಟ ಮಾಡಿ ಎಂದು ಆದೇಶಿಸಿದ್ದಾರೆ! ಈ ಎಲ್ಲಾ ಘಟನೆಗಳಿಂದ ಒಂದು ಸಾಬೀತಾಗಿದೆ. ಜೆಡಿಎಸ್ ನಲ್ಲಿ 'S' ಎಂದರೆ Stone Pelters ಎಂದು" ಹೀಗೆಂದು ಮಹಾದೇವಪುರ ಶಾಸಕ ಅರವಿಂದ್ ಲಿಂಬಾವಳಿ ಟ್ವೀಟ್ ಮಾಡಿದ್ದಾರೆ.

ಸುಮಲತಾಗೆ ಬೆಂಬಲ: ನಟ ದರ್ಶನ್ ಮನೆ ಮೇಲೆ ಕಲ್ಲು ತೂರಾಟಸುಮಲತಾಗೆ ಬೆಂಬಲ: ನಟ ದರ್ಶನ್ ಮನೆ ಮೇಲೆ ಕಲ್ಲು ತೂರಾಟ

ಎಚ್ ಡಿ ದೇವೇಗೌಡರ ಬಗ್ಗೆ ಅವಹೇಳನಾಕಾರಿ ಭಾಷೆಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ಮನೆಯ ಮೇಲೆ ಜೆಡಿಎಸ್ ಕಾರ್ಯಕರ್ತರು ಇತ್ತೀಚೆಗೆ ಕಲ್ಲುತೂರಾಟ ನಡೆಸಿದ್ದರು.

“S” in JD”S” basically means Stone Pelters: Arvind Limbavali

'ಡಿ ಬಾಸ್' ವಿರುದ್ಧ ಸಿಡಿಮಿಡಿಗೊಂಡ ಸಿಎಂ ಕುಮಾರಸ್ವಾಮಿ'ಡಿ ಬಾಸ್' ವಿರುದ್ಧ ಸಿಡಿಮಿಡಿಗೊಂಡ ಸಿಎಂ ಕುಮಾರಸ್ವಾಮಿ

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ನಟಿ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡಿದ ಕಾರಣಕ್ಕೆ ನಟ ದರ್ಶನ್ ಅವರ ಮನೆಯ ಮೇಲೂ ಕಲ್ಲುತೂರಾಟದ ಘಟನೆ ನಡೆದಿತ್ತು.

English summary
Alphabet “S” in JD”S” basically means “Stone Pelters” BJP MLA from Mahadevapura constituency Arvind Limbavali told.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X